ದಾವೂದ್‌ ಇಬ್ರಾಹಿಂ ಬದುಕಿದ್ದಾನೆ, ಕರಾಚಿಯಲ್ಲೇ ಇದ್ದಾನೆ: ಅಪರಾಧ ಲೇಖಕ ಹುಸೇನ್‌ ಜೈದಿ

ಬೆಂಗಳೂರು: ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಬದುಕಿದ್ದು, ಆರೋಗ್ಯವಾಗಿದ್ದಾನೆ ಎಂದು ಅಪರಾಧ ಲೋಕದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಲೇಖಕ ಎಸ್‌. ಹುಸೇನ್‌ ಜೈದಿ ಹೇಳಿದ್ದಾರೆ. ದಾವೂದ್‌

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ‘ದಾವೂದ್‌ ಕಥೆ ಇನ್ನೂ ಮುಂದುವರಿದಿದೆ’ ಎಂಬ ಚರ್ಚಾಸತ್ರದಲ್ಲಿ ಮಾತನಾಡಿದ ಅವರು, ದಾವೂದ್‌ ಸಾವಿನ ಕುರಿತು ಸಮಯಾವಕಾಶಕ್ಕೆ ಹರಡುವ ಸುದ್ದಿಗಳನ್ನು ತಳ್ಳಿ ಹಾಕಿದರು. ದಾವೂದ್‌ ಕರಾಚಿ ಬಂದರು ಸಮೀಪದ ಪ್ರದೇಶದಲ್ಲಿ ಭದ್ರತಾ ವಲಯದ ನಡುವೆ ವಾಸಿಸುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ಹಲವು ಪುರಸಭೆಗಳಲ್ಲಿ ಸದಸ್ಯರ ರಾಜೀನಾಮೆ

ಮುಂಬೈ ಅಂಡರ್‌ವಲ್ಡ್‌ ಕುರಿತು ‘ಡೋಂಗ್ರಿಯಿಂದ ದುಬೈವರೆಗೆ’ ಸೇರಿದಂತೆ ಹಲವು ಕೃತಿಗಳನ್ನು ಬರೆದಿರುವ ಜೈದಿ, ದಾವೂದ್‌ ಜಾಲ ಇನ್ನೂ ಸಂಪೂರ್ಣವಾಗಿ ನಾಶವಾಗಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ದಾವೂದ್‌

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನಾಗಿ ಪರಿಗಣಿಸಲ್ಪಟ್ಟಿರುವ ದಾವೂದ್‌ ಇಬ್ರಾಹಿಂ ಹಲವು ದಶಕಗಳಿಂದ ಭಾರತಕ್ಕೆ ಬೇಕಾಗಿರುವ ಅಪರಾಧಿ. ಭಾರತ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಹಲವು ಬಾರಿ ಹೇಳಿಕೊಂಡಿದ್ದರೂ, ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಇದನ್ನು ನಿರಾಕರಿಸುತ್ತಲೇ ಬಂದಿದೆ.

ಇದನ್ನೂ ನೋಡಿ : FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media

Donate Janashakthi Media

Leave a Reply

Your email address will not be published. Required fields are marked *