ರಾಜೌರಿ ಭಯೋತ್ಪಾದಕರ ಶೋಧಕ್ಕೆ ಹೆಚ್ಚುವರಿ ಪಡೆ ನಿಯೋಜನೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಮೇ 24ರಂದು ಶೋಧ ಕಾರ್ಯವನ್ನು ತೀವ್ರಗೊಳಿಸಿ, ಪ್ರದೇಶವನ್ನು ಮತ್ತಷ್ಟು ಸುತ್ತುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೌರಿ

ಡೋರಿಮಲ್–ಗಂಭೀರ್ ಮೊಘ್ಲಾ ಪ್ರದೇಶದಲ್ಲಿ ಶನಿವಾರ ನಡೆದ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಮತ್ತು ಶಂಕಿತ ಭಯೋತ್ಪಾದಕರ ನಡುವೆ ಕ್ಷಣಿಕ ಗುಂಡಿನ ಚಕಮಕಿಯ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ವಿಸ್ತರಿಸಲಾಗಿದೆ.

“ಡೋರಿಮಲ್–ಗಂಭೀರ್ ಮೊಘ್ಲಾ ಪ್ರದೇಶದಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಸುತ್ತುವರಿವು ಬಿಗಿಗೊಳಿಸಲಾಗಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ಪೊಲೀಸರ ಸ್ವತಂತ್ರ ತೀರ್ಮಾನ ಎಂದ ಪರಮೇಶ್ವರ್‌

ಶಂಕಿತರನ್ನು ಪತ್ತೆಹಚ್ಚಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಂಯುಕ್ತ ತಂಡವು ಶಂಕಿತ ಭಯೋತ್ಪಾದಕರ ಚಲನವಲನದ ಕುರಿತು ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ ವ್ಯಾಪಕ ‘ಕಾರ್ಡನ್ ಅಂಡ್ ಸರ್ಚ್’ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಈ ವೇಳೆ ಶಂಕಿತರೊಂದಿಗೆ ಸಂಪರ್ಕ ಸಾಧನೆಯಾದ ಬಳಿಕ ಕ್ಷಣಿಕ ಗುಂಡಿನ ಚಕಮಕಿ ನಡೆದಿದ್ದು, ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಪ್ರದೇಶದಲ್ಲಿ ಇಬ್ಬರಿಂದ ಮೂವರು ಭಯೋತ್ಪಾದಕರು ಇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದಕ್ಕೆ ನಡುವೆಯೇ, ಜಮ್ಮು ಜಿಲ್ಲೆಯ ಅಖ್ನೂರ್‌ನ ಗುಧಾ ಬ್ರಾಹ್ಮಣ ಪ್ರದೇಶದಲ್ಲಿಯೂ ಶಂಕಾಸ್ಪದ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿವೆ.

ಸ್ಥಳೀಯ ಮಹಿಳೆಯೊಬ್ಬರು ತನ್ನ ಮನೆ ಸಮೀಪ ಮೂರುರಿಂದ ನಾಲ್ಕು ಮುಖ ಮುಚ್ಚಿಕೊಂಡ ವ್ಯಕ್ತಿಗಳನ್ನು ಗಮನಿಸಿದ್ದು, ಅವರ ಚಲನವಲನ ಶಂಕಾಸ್ಪದವಾಗಿತ್ತು ಎಂದು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಪಡೆಗಳು ಸ್ಥಳಕ್ಕೆ ದೌಡಾಯಿಸಿ ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತುವರಿದು ಶೋಧ ಕಾರ್ಯ ಆರಂಭಿಸಿವೆ.

ಇದನ್ನೂ ನೋಡಿ: ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *