ನಮ್ಮ ಮೆಟ್ರೋ ಬ್ಲೂ ಲೈನ್‌ಗೆ ಸೌರಶಕ್ತಿ ಸಾಧ್ಯತೆ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಸ್ಟೇನಬಲ್ ಟ್ರಾನ್ಸ್‌ಪೋರ್ಟ್ ಲ್ಯಾಬ್ ನಡೆಸಿದ ತಾಂತ್ರಿಕ ಮತ್ತು ವಾಣಿಜ್ಯ ಸಾಧ್ಯತೆ ಅಧ್ಯಯನದ ಪ್ರಕಾರ, ನಮ್ಮ ಮೆಟ್ರೋದ ಮುಂದಿನ ಬ್ಲೂ ಲೈನ್ ಸಂಪೂರ್ಣವಾಗಿ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮೆಟ್ರೋ

ಈ ಮಾರ್ಗ ಪೂರ್ಣಗೊಂಡ ಬಳಿಕ 55 ಕಿಮೀ ಉದ್ದವಿದ್ದು, ಕೇಂದ್ರ ಸಿಲ್ಕ್ ಬೋರ್ಡ್‌ನಿಂದ ಉತ್ತರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಿಸುತ್ತದೆ. ‘ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆಗೆ ನೇರವಾಗಿ ಸೌರಶಕ್ತಿ ಬಳಕೆಯ ಸಾಧ್ಯತೆಗಳ ಮೌಲ್ಯಮಾಪನ’ ಎಂಬ ಶೀರ್ಷಿಕೆಯ ವರದಿ, ಈ ಪರಿವರ್ತನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೊಂದಿರುವ ಭೂಮಿ ಸಾಕಷ್ಟಿದೆ ಎಂದು ಹೇಳಿದೆ.

2025ರ ಆಗಸ್ಟ್‌ನಿಂದ 2026ರ ಮಾರ್ಚ್‌ವರೆಗೆ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ನಡೆದ ಈ ಅಧ್ಯಯನಕ್ಕೆ ಎಚ್‌ಎಸ್‌ಬಿಸಿ ಲಿಮಿಟೆಡ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಯೋಜನೆಯಡಿ ಹಣಕಾಸು ನೆರವು ನೀಡಿದೆ. ನಿರ್ಮಾಣದ ನಾಲ್ಕು ಪ್ಯಾಕೇಜುಗಳಲ್ಲಿ ಇಂಟರ್‌ಫೇಸ್ ವಿನ್ಯಾಸ, ಸಬ್‌ಸ್ಟೇಷನ್ ಪರಿಶೀಲನೆ, ಟ್ರಾಕ್ಷನ್ ಪವರ್ ಸಿಸ್ಟಂ ಮಾದರೀಕರಣ, ಸೌರ ಸಂಪನ್ಮೂಲ ನಕ್ಷೆ ನಿರ್ಮಾಣ ಮತ್ತು ರೈಲು ಕಾರ್ಯಕ್ಷಮತೆ ವಿಶ್ಲೇಷಣೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿತ್ತು.

ಇದನ್ನೂ ಓದಿ: ಭ್ರಷ್ಟಾಚಾರ ಪ್ರಕರಣ: ಅಧಿಕಾರದಲ್ಲಿ ಸಿಎಂ ಖಂಡು ಮುಂದುವರಿಕೆ ‘ಅವಮಾನ’ – ಕಾಂಗ್ರೆಸ್

ಬಿಎಂಆರ್‌ಸಿಎಲ್ ಅನುಮೋದಿತ ಸಿಮ್ಯುಲೇಷನ್ ವರದಿಗಳ ಆಧಾರದಲ್ಲಿ, ಎರಡು ನಿಮಿಷಗಳ ಅಂತರದಲ್ಲಿ ಸಂಚರಿಸುವ 21 ರೈಲುಗಳನ್ನು ಪರಿಗಣಿಸಲಾಗಿದೆ. ಜೊತೆಗೆ 30 ನಿಲ್ದಾಣಗಳು, ಎಲಿವೇಟೆಡ್ ವಯಾಡಕ್ಟ್‌ಗಳು ಮತ್ತು ಡೆಪೋಗಳ ಮೇಲ್ಛಾವಣಿಗಳಲ್ಲಿ ಲಭ್ಯವಿರುವ ಸೌರ ಸಂಪನ್ಮೂಲಗಳನ್ನು ಗುರುತಿಸಲಾಗಿದೆ.

ನಿಲ್ದಾಣಗಳ ಮೇಲ್ಛಾವಣಿ, ಎಲಿವೇಟೆಡ್ ವಯಾಡಕ್ಟ್ ಪರಾಪೆಟ್‌ಗಳು ಮತ್ತು ಡೆಪೋಗಳ ಮೇಲ್ಛಾವಣಿಗಳ ಮೇಲೆ ಸೌರ ಪ್ಯಾನೆಲ್‌ಗಳನ್ನು ಅಳವಡಿಸುವ ಮೂಲಕ, ಈ ಮಾರ್ಗದ ವಾರ್ಷಿಕ ವಿದ್ಯುತ್ ಅಗತ್ಯವನ್ನೆಲ್ಲ ಪೂರೈಸಲು ಸಾಧ್ಯ ಎಂದು ಅಧ್ಯಯನ ಹೇಳಿದೆ. ಪ್ರಾರಂಭಿಕ ಹಂತದಲ್ಲೇ ಉತ್ಪಾದನೆಯಾಗುವ ವಿದ್ಯುತ್ ದಿನದ ಕಾರ್ಯಾಚರಣೆಯಲ್ಲೇ ಬಳಕೆಯಾಗುವುದರಿಂದ, ಗ್ರಿಡ್‌ಗೆ ವಿದ್ಯುತ್ ಹಿಂತಿರುಗಿಸುವ ಅವಶ್ಯಕತೆ ಇರುವುದಿಲ್ಲ ಮತ್ತು ಒಟ್ಟು ವಿದ್ಯುತ್ ವೆಚ್ಚದ ಮೂರನೇ ಭಾಗಕ್ಕಿಂತ ಹೆಚ್ಚು ಕಡಿತವಾಗುತ್ತದೆ.

ಹೂಡಿಕೆ ಕುರಿತು ವಿವರಿಸಿದ ಅಧ್ಯಯನ, “ಎಲ್ಲ 30 ನಿಲ್ದಾಣಗಳು ಎಲಿವೇಟೆಡ್ ಆಗಿದ್ದು, ಒಟ್ಟು 29.7 ಮೆಗಾವಾಟ್ ಸಾಮರ್ಥ್ಯದ ಸುಮಾರು 50,000 ಸೌರ ಪ್ಯಾನೆಲ್‌ಗಳನ್ನು ಅಳವಡಿಸಲು ಸಾಧ್ಯ. ₹48ರಿಂದ ₹63 ಕೋಟಿ ವೆಚ್ಚದ ಮೊದಲ ಹಂತದ ಹೂಡಿಕೆಯಿಂದ ಮೊದಲ ವರ್ಷದಲ್ಲೇ ₹36.4 ಕೋಟಿ ವಿದ್ಯುತ್ ಉಳಿತಾಯ ಸಾಧ್ಯ. ಹೂಡಿಕೆ ಮರುಪಡೆಯುವ ಅವಧಿ ಎರಡು ವರ್ಷಕ್ಕಿಂತ ಕಡಿಮೆ ಮತ್ತು 25 ವರ್ಷಗಳಲ್ಲಿ ಶುದ್ಧ ಮೌಲ್ಯ ₹370ರಿಂದ ₹385 ಕೋಟಿವರೆಗೆ ಇರಬಹುದು,” ಎಂದು ತಿಳಿಸಿದೆ.

ಪೂರ್ಣ ಮಾರ್ಗದಲ್ಲಿ ಸೌರ ವ್ಯವಸ್ಥೆ ಅಳವಡಿಸಿದರೆ ವರ್ಷಕ್ಕೆ ₹61 ಕೋಟಿ ಉಳಿತಾಯ ಸಾಧ್ಯವೆಂದು ವರದಿ ತಿಳಿಸಿದೆ.

“ಬ್ಲೂ ಲೈನ್‌ಗೆ ಅಪಾರ ಸೌರ ಸಾಮರ್ಥ್ಯವಿದ್ದು, ಅದನ್ನು ಹೊಂದಿಕೊಳ್ಳುವ ಟ್ರಾಕ್ಷನ್ ವ್ಯವಸ್ಥೆ ಮತ್ತು ಅನುಕೂಲಕರ ನಿಯಂತ್ರಣ ಚೌಕಟ್ಟು ಈಗಾಗಲೇ ಇದೆ. ಆರ್ಥಿಕವಾಗಿ ಇದು ಸ್ಪಷ್ಟವಾಗಿ ಲಾಭದಾಯಕವಾಗಿದೆ. ಇದು ಕೇವಲ ಸಂಶೋಧನಾ ಕಲ್ಪನೆ ಅಲ್ಲ—ದೀರ್ಘಾವಧಿಯಲ್ಲಿ ಲಾಭ ನೀಡುವ ತಕ್ಷಣ ಜಾರಿಗೆ ತರುವ ಮೂಲಸೌಕರ್ಯ ಹೂಡಿಕೆ,” ಎಂದು ಸಸ್ಟೇನಬಲ್ ಟ್ರಾನ್ಸ್‌ಪೋರ್ಟ್ ಲ್ಯಾಬ್ ಸಂಯೋಜಕ ಅಶೀಷ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ನೋಡಿ: ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *