ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಲಯವು CBSE ಮೂಲಕ ಜುಲೈ 1, 2026 ರಿಂದ ಜಾರಿಗೆ ಬರುವಂತೆ, 9ನೇ ತರಗತಿಗೆ, ಮೂರು ಭಾಷೆಗಳ (R1, R2, R3) ಅಧ್ಯಯನವನ್ನು ಕಡ್ಡಾಯಗೊಳಿಸಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ತಿಳಿಸಿದ್ದಾರೆ. ಕೇಂದ್ರ
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF-SE) 2023 ರ ಅಡಿಯಲ್ಲಿ, 9 ಮತ್ತು 10 ನೇ ತರಗತಿಗಳ ಭಾಷಾ ಅಧ್ಯಯನವನ್ನು ಹೊಸ NCERT ಪಠ್ಯಕ್ರಮಕ್ಕೆ ಹೊಂದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜುಲೈ 1, 2026 ರಿಂದ ಜಾರಿಗೆ ಬರುವಂತೆ, 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ (R1, R2, R3) ಅಧ್ಯಯನ ಕಡ್ಡಾಯವಾಗಿರುತ್ತದೆ ಎಂದರು. ಕೇಂದ್ರ
ಇದರಲ್ಲಿ ಕನಿಷ್ಠ ಎರಡು ಭಾಷೆಗಳು (R1 -R2) ಭಾರತೀಯ ಮೂಲದ (Native Indian) ಭಾಷೆಗಳಾಗಿರಬೇಕು. ಉಳಿದ ಭಾಷೆಯನ್ನು ಮೂರನೇ ಭಾಷೆಯಾಗಿ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ ರದ್ದುಪಡಿಸಿ : ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ
R3 ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲು 19 ಭಾರತೀಯ ಭಾಷೆಗಳ ಪಟ್ಟಿಯನ್ನು ಒದಗಿಸಲಾಗಿದೆ. ಈ ಪಟ್ಟಿಯಲ್ಲಿ ಹಿಂದಿಯನ್ನು ಸೇರಿಸದೆ ಇರುವ ಬುದ್ಧಿವಂತಿಕೆ ಎಷ್ಟು ಚಾಣಕ್ಷತನದಿಂದ ಕೂಡಿದೆಯೆಂದರೆ, R1 ಮತ್ತು R2, ಅಂದರೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಮಾತ್ರ ಹಿಂದಿಯನ್ನು ಕಲಿಸಬೇಕಾದ ದುರುದ್ದೇಶವಿದೆ. ಇದು ಹಿಂದಿ ಹೇರಿಕೆಯ ಹೊಸ ಅವತಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ R1 ಮತ್ತು R2 ಆಗಿ ಇಂಗ್ಲಿಷ್ ಮತ್ತು ಹಿಂದಿಗಳನ್ನು ಪರಿಗಣಿಸಿದಲ್ಲಿ ಪ್ರಾದೇಶಿಕ ಭಾಷೆಗಳಿಗೆ R3 ಯಾಗಿ ಮಾತ್ರ ಕಲಿಸಬೇಕಾಗುವುದು. ಅಂದರೆ ಕರ್ನಾಟಕದಲ್ಲಿ ಮಕ್ಕಳು ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಯಬೇಕು ಎಂದರು.
ಇದು ನಮ್ಮ ಕನ್ನಡ ಕಲಿಕಾ ಅಧಿನಿಯಮ 2015ನ್ನು ಪೂರ್ಣವಾಗಿ ಹಳ್ಳ ಹಿಡಿಸುವ ಕಾರ್ಯಕ್ರಮ . ಇದರಿಂದ ಕರ್ನಾಟಕದಲ್ಲಿ CBSE ಶಾಲೆಗಳಲ್ಲಿ ಕಲಿಯುವ ಕನ್ನಡದ ಮಕ್ಕಳು ಕನ್ನಡವನ್ನು ಕನಿಷ್ಠ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿಯೂ ಕಲಿಯಬೇಕಿಲ್ಲ. ಈ ಶಾಲೆಗಳಿಗೂ ಇದೇ ಬೇಕಿತ್ತು.
ನೂರಾರು ತಂತ್ರ – ಕುತಂತ್ರದ ಮೂಲಕ ಹಿಂದಿ ಹೇರಿಕೆ ಮಾಡುವ ಏಕೈಕ ಅಜೆಂಡಾ ಮತ್ತು ಅಧಿಕೃತ ರಾಜ್ಯ ಭಾಷೆಗಳ ಕಡೆಗಣನೆ ಆಗಿದೆ.
ರಾಜ್ಯ ಸರ್ಕಾರ ಮತ್ತು ಕ.ಅ.ಪ್ರಾ ಕೂಡಲೇ ಎಚ್ಚತ್ತುಕೊಳ್ಳುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಕನ್ನಡ ಮಾಧ್ಯಮವಾಗುವುದಿರಲಿ , ಒಂದು ಭಾಷೆಯಾಗಿಯೂ ಉಳಿಯುವುದಿಲ್ಲ ಎಂದು ಹೇಳಿದರು.
R3 ಆಯ್ಕೆಗೆ ಪಟ್ಟಿ ಮಾಡಿರುವ ಭಾಷೆಗಳು
1. ಅಸ್ಸಾಮಿ
2. ಬೆಂಗಾಲಿ
3. ಬೋಡೋ
4. ಡೋಗ್ರಿ
5. ಗುಜರಾತಿ
6. ಕನ್ನಡ
7. ಕಾಶ್ಮೀರಿ
8. ಕೊಂಕಣಿ
9. ಮೈಥಿಲಿ
10. ಮಲಯಾಳಂ
11. ಮಣಿಪುರಿ
12. ಮರಾಠಿ
13. ನೇಪಾಳಿ
14. ಒಡಿಯಾ
15. ಪಂಜಾಬಿ
16. ಸಂತಾಲಿ
17. ಸಿಂಧಿ
18. ತಮಿಳು
19. ತೆಲುಗು ಎಪಿ ಮತ್ತು ತೆಲುಗು ತೆಲಂಗಾಣ
ಕೆಲವು ಸಲಹೆಗಳು
CBSE ಶಾಲೆ ಆರಂಭಿಸಲು ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು NOC ಕೊಡಬೇಕಿದೆ. ಮತ್ತು ಒಮ್ಮೆ NOC ಕೊಟ್ಟ ನಂತರ CBSE ಶಾಲೆಗಳು ರಾಜ್ಯ ಸರ್ಕಾರದ ಶಾಲಾ ಇಲಾಖೆಯ ಕಂಟ್ರೋಲ್ ಇರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಅವರಿಗೆ ಲೆಕ್ಕಕ್ಕಿಲ್ಲ. ಈ NOC ನೀಡುವ ನಿಯಮಾವಳಿಗಳನ್ನು ಇನ್ನಷ್ಟು ಕನ್ನಡ ಪರವಾಗಿ ಕಠಿಣ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಹತೋಟಿಗೆ ತರಬೇಕಿದೆ ಎಂದು ತಿಳಿಸಿದರು. ಕೇಂದ್ರ
1. ಕಡ್ಡಾಯವಾಗಿ Native Reading R1/R2 ಯಾವುದಾದರೊಂದು ಭಾಷೆ ಸ್ಥಾನ ದಲ್ಲಿ ಕನ್ನಡ ಕಡ್ಡಾಯ ಗೊಳಿಸುವುದು.
2 .ಪ್ರತೀವರ್ಷ RR ನವೀರಣ ಷರತ್ತು ವಿಧಿಸುವುದು.
3.ರಿನ್ಯವೆಬಲ್ ಸಿಸ್ಟಮ್ ಜಾರಿಯಾಗಿಸಿ ಕನ್ನಡ ಅನುಷ್ಠಾನ ದ ಬಗ್ಗೆ ರಾಜ್ಯ ಶಾಲಾ ಶಿಕ್ಷಣ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುವುದು.
4.ಕನ್ನಡ ಶಿಕ್ಷಕರ ನೇಮಕಾತಿ ಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು.
5.ಈಗಾಗಲೇ NOC ಪಡೆದಿರುವ CBSE ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಡ್ಡಾಯವಾಗಿ R1/R2 ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗಳು ಕನ್ನಡ ವನ್ನು ಆಯ್ಕೆಮಾಡಿರುವುದನ್ನು ಖಾತ್ರಿಪಡಿಸಲು ಕೂಡಲೇ l ಇಲಾಖೆಯು ಸದನ ಸಮಿತಿ ಶಿಫಾರಸ್ಸು ತಂದು ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು.
ಇದನ್ನೂ ನೋಡಿ: ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
