ನೀಟ್ ಎಂಬ ಈ ಮಾರುಕಟ್ಟೆ ಆಧಾರಿತ ಪರೀಕ್ಷೆ ,ನಾವು ಶಿಕ್ಷಣ ಶಾಸ್ತ್ರೀಯ ಮತ್ತು ಸಾಂವಿಧಾನಿಕ ನೆಲೆಯಲ್ಲಿ ಕಳೆದ 70 ವರ್ಷಗಳಿಂದ ಕಟ್ಟಿಕೊಂಡಿದ್ದ ಬುನಾದಿ ಶಾಲಾ ಶಿಕ್ಷಣವನ್ನು ನಾಶ ಮಾಡಿ ಕೋಚಿಂಗ್ ಶಿಕ್ಷಣದ ಮಾರುಕಟ್ಟೆ ಸ್ಥಾಪಿಸುವ – -ವಿಸ್ತರಿಸುವ – ಲಾಭಗಳಿಸುವ ಏಕೈಕ ಆಶಯ ಹೊಂದಿದೆ. ಕುಸಿ
– ನಿರಂಜನಾರಾಧ್ಯ ವಿ ಪಿ
2016 ರಿಂದಲೇ ನೀಟ್ ಎಲ್ಲಾ ಹಂತದಲ್ಲಿನ ಶಿಕ್ಷಣಕ್ಕೆ ಬುನಾದಿಯದ ಶಾಲಾ ಶಿಕ್ಷಣವನ್ನು ( 10+2) ನಾಶಪಡಿಸಿ ಕೋಚಿಂಗ್ ಶಿಕ್ಷಣ ಸಂಸ್ಕೃತಿಯನ್ನು ಸ್ಥಾಪಿಸುವ ಹುನ್ನಾರವೆಂದು ಹೇಳಲಾಗಿತ್ತು. ಕುಸಿ
ಪ್ರಾರಂಭದಿಂದಲೂ ಇದು ಹೇಗೆ ಶಿಕ್ಷಣವನ್ನು ಒಂದು ಮಾರುಕಟ್ಟೆ ಸರಕನ್ನಾಗಿಸಿ, ಅದೆಷ್ಟೋ trillion ಡಾಲರ್ ಬಿಸಿನೆಸ್ ಮಾರುಕಟ್ಟೆ ವಿಸ್ತರಿಸುವ ಉದ್ಯಮದ ಲಕ್ಷಣಗಳನ್ನು ಹೊಂದಿದೆ ಎಂದು ಶಿಕ್ಷಣದ ಉದ್ಯಮಪತಿಗಳು ಹೇಳುತ್ತಲೇ ಬಂದರು. ಕುಸಿ
ಇದನ್ನೂ ಓದಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಹೆಮ್ಮರವಾಗಿ ಬೆಳೆಸಿ – ರೆ. ಫಾ. ಜಾನ್ಸನ್ ಪಿಂಟೋ
ಇದನ್ನು ನನ್ನಂಥ ನೂರಾರು ಶಿಕ್ಷಣ ಪ್ರೇಮಿಗಳು ರಾಜ್ಯ ಸರ್ಕಾರಗಳಿಗೆ ಹೇಳುವ ಪ್ರಯತ್ನ ಮಾಡಿದೆವು. ಆದರೆ , ನಮ್ಮ ರಾಜಕಾರಣಿಗಳೇ ಶಿಕ್ಷಣದ ಉದ್ಯಮಿಗಳಾದ್ದರಿಂದ ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಕುಸಿ
ಈ ನೀಟ್ ಎಂಬ ಕೇಂದ್ರ ಪ್ರಯೋಜಿತ ಮಾರುಕಟ್ಟೆ ವಿಸ್ತರಣೆ ಪರೀಕ್ಷೆಗೆ ವಿದ್ಯಾರ್ಥಿಗಳು ನಿರಂತರವಾಗಿ ಬಲಿಪಶುಗಳಾಗುತ್ತಾರೆ ಎಂದು ಪ್ರಾರಂಭದಲ್ಲಿಯೇ ಚರ್ಚಿಸಲಾಗಿತ್ತು . ಏಕೆಂದರೆ ಮಾರುಕಟ್ಟೆಯು ವಿದ್ಯಾರ್ಥಿಗಳ ಹಿತಕ್ಕಿಂತಲೂ , ಲಾಭದ ಅಂಶದಿಂದ ತೀರ್ಮಾನಿಸಲ್ಪಡುತ್ತದೆ. ಅದನ್ನು ಆಕ್ರಮಣಕಾರಿಯಾಗಿ ಹೇರುತ್ತದೆ. ಕುಸಿ
ನೀಟ್ ಪರಿಣಾಮವು ವಿವಿಧ ರಾಜ್ಯ ಸರ್ಕಾರಗಳು ಸಾರ್ವಜನಿಕ ಆರೋಗ್ಯದ ನೆಲೆಯಲ್ಲಿ ಸ್ಥಾಪಿಸಿದ ವೈದ್ಯಕೀಯ ಕಾಲೇಜುಗಳ ವ್ಯವಸ್ಥೆಯನ್ನು ಲಾಭದ ನೆಲೆಯಲ್ಲಿ ಕಾರ್ಪೋಟರೀಕರಣಗೊಳಿಸಿದೆ.
ಹತ್ತು ವರ್ಷಗಳ ಹಿಂದೆ ನೀಟ್ ಹಾಗೂ ಅದರ ಪ್ರಕ್ರಿಯೆಯ ಬಗ್ಗೆ ವ್ಯಕ್ತಪಡಿಸಿದ ಎಲ್ಲಾ ಆತಂಕಗಳು ನಿಜವೆಂದು ಇಂದು ಸಾಬೀತುಪಟ್ಟಿವೆ .
ಅದರಲ್ಲೂ , 2017 ರಿಂದ 2026 ರವರೆಗಿನ ನೀಟ್ ಪರೀಕ್ಷಾ ಪ್ರಕ್ರಿಯೆಯು, ನಿರ್ಣಾಯಕ ಕಲಿಕೆಗೆ ಒಂದು ಸವಾಲು ಎಂದು ನಿಸ್ಸಂದೇಹವಾಗಿ ಸಾಬೀತುಪಟ್ಟಿದೆ .ಅದು ಕ್ರಮೇಣವಾಗಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿ ಆ ಜಾಗದಲ್ಲಿ ಕೋಚಿಂಗ್ ಸ್ಟಾರ್ಟ್ಅಪ್ ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಒಟ್ಟಾರೆ ಇಂದು centralisation, commercialisation, commodifacation ಮತ್ತು corporatisation (4Cs ) ಮೂಲಕ ಶಿಕ್ಷಣದ ಮೂಲ ಕಲ್ಪನೆಯನ್ನು ಬುಡಮೇಲು ಮಾಡುತ್ತದೆ
ನೀಟ್ ಅನ್ನು ರದ್ದುಗೊಳಿಸಿ , ಹೈಯರ್ ಸೆಕೆಂಡರಿ / ಸೀನಿಯರ್ ಸೆಕೆಂಡರಿ (+2) ಅಂಕಗಳ ಆಧಾರದ ಮೇಲೆ ಪ್ರವೇಶ ಪ್ರಕ್ರಿಯೆಯನ್ನು ಪುನಃಸ್ಥಾಪಿಸುವುದು ಒಂದೇ ಸರಿಯಾದ ಪರಿಹಾರ. ಸಾಮಾನ್ಯೀಕರಣದ ಮೂಲಕ, ವಿವಿಧ ಮಂಡಳಿಗಳು ನೀಡುವ ಅಂಕಗಳನ್ನು ಸಮೀಕರಿಸಬಹುದು. ಅಗತ್ಯವಿದ್ದರೆ ರಾಜ್ಯ ಸರ್ಕಾರಗಳು ಒಂದು ಸಣ್ಣ aptitude ಪರೀಕ್ಷೆಯನ್ನು ನಡೆಸಿ ಆಯಾ ರಾಜ್ಯದಲ್ಲಿ ಪ್ರವೇಶ ಕಲ್ಪಿಸಬಹುದು.
ಈ ಪ್ರಕ್ರಿಯೆಯ ಮೂಲಕ, ಯುಜಿ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ವೈದ್ಯಕೀಯ ಶಿಕ್ಷಣದ ಮನೋಭಾವ ಮತ್ತು ಅರ್ಹತೆ ಹೊಂದಿರುವ ನಿಜವಾಗಿಯೂ ಅರ್ಹ ವಿದ್ಯಾರ್ಥಿಗಳ ಪ್ರವೇಶವನ್ನು ಖಚಿತಪಡಿಸಿ ಕೊಂಡಂತಾಗುತ್ತದೆ . ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
