ಚೆನ್ನೈ| 717 ಮದ್ಯದ ಅಂಗಡಿ ಬಂದ್ ಮಾಡಲು ಸೂಚಿಸಿದ ನೂತನ ಸಿಎಂ ವಿಜಯ್‌

ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಜಯ್ ಅವರ ಈ ನಿರ್ಧಾರಕ್ಕೆ ಮಹಿಳಾ ವರ್ಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬಹುದು. ಏಳು ನೂರಕ್ಕೂ ಹೆಚ್ಚು ಮದ್ಯದ ಮಳಿಕೆಯನ್ನು ಮುಚ್ಚುವಂತೆ, ಸರ್ಕಾರ ಆದೇಶಿಸಿದೆ. ಚೆನ್ನೈ

ತಮಿಳುನಾಡಿನಲ್ಲಿ ಮದ್ಯದ ವ್ಯವಹಾರವು, ಸರ್ಕಾರದ ಸುಪರ್ದಿಯಲ್ಲೇ ಬರುತ್ತದೆ. ಸರ್ಕಾರೀ ಸ್ವಾಮ್ಯದ ಟಾಸ್ಮ್ಯಾಕ್ (TASMAC) ಎಣ್ಣೆ ಅಂಗಡಿಗಳನ್ನು ಎರಡು ವಾರದ ಅವಧಿಯೊಳಗೆ ಮುಚ್ಚುವಂತೆ, ಸರ್ಕಾರ ಆದೇಶಿಸಿದೆ. 717 ಟಾಸ್ಮ್ಯಾಕ್ ಮಳಿಗೆಗಳಿಗೆ ಬೀಗ ಜಡಿಯಲು ವಿಜಯ್ ಸರ್ಕಾರ ನಿರ್ಧರಿಸಿದೆ. ಚೆನ್ನೈ

ಬಹುಮತ ಸಾಬೀತು ಮಾಡಬೇಕಾಗಿರುವ ದಳಪತಿ ಜೋಸೆಫ್ ವಿಜಯ್ ಮೇ. 10ರಂದು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದರು. 108 ಸ್ಥಾನವನ್ನು ಗೆದ್ದು ಅತಿದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿದ್ದರೂ, ಸರಳ ಬಹುಮತದ ಸಂಖ್ಯೆಯನ್ನು ಹೊಂದಿಸಲು ವಿಜಯ್ ಹರಸಾಹಸ ಪಟ್ಟಿದ್ದರು.

ಇದನ್ನೂ ಓದಿ: ಶಾಲೆ – ಕಾಲೇಜು ಆನ್‌ಲೈನ್ ಮಾದರಿ: ಪ್ರಧಾನಿಯ ಹೇಳಿಕೆಗೆ ಪಾಫ್ರೆ ಖಂಡನೆ

ಕೊನೆಗೂ, 118 ನಂಬರ್ ಸಿಕ್ಕ ನಂತರ, ರಾಜ್ಯಪಾಲರು ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಈಗ, ನಾಳೆ (ಮೇ. 13), ಬಹುಮತವನ್ನು ಸದನದಲ್ಲಿ ಸಾಬೀತು ಮಾಡಬೇಕಿದೆ. ಈ ಮಧ್ಯೆ, ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿರುವ ವಿಜಯ್, ವಿವಿಧ ಭಾಗಗಳಲ್ಲಿ ಇರುವ 717 ಮದ್ಯದ ಮಳಿಗೆಗಳನ್ನು ಮುಚ್ಚುವಂತೆ, ಸರ್ಕಾರ ಆದೇಶ ಹೊರಡಿಸಿದೆ. ಚೆನ್ನೈ

ಸಾರ್ವಜನಿಕ ಹಿತಾದೃಷ್ಟಿಯಿಂದ ಈ ಕ್ರಮ ಎಂದಿರುವ ವಿಜಯ್ ಸರ್ಕಾರ

717 ಮದ್ಯದ ಮಳಿಗೆಗಳನ್ನು ಎರಡು ವಾರದ ಅವಧಿಯೊಳಗೆ ಮುಚ್ಚುವಂತೆ ಸಿಎಂ ಜೋಸೆಫ್ ವಿಜಯ್ ಆದೇಶಿಸಿದ್ದಾರೆ. ಶಾಲಾಕಾಲೇಜು ಆವರಣ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಹೊಂದಿಕೊಂಡಂತಿರುವ ಮತ್ತು ಬಸ್’ಸ್ಟಾಂಡ್ ಬಳಿ ಇರುವ ಅಂಗಡಿಗಳನ್ನು ಮುಚ್ಚಲು ತಮಿಳುನಾಡು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಹಿತಾದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟನೆಯನ್ನು ನೀಡಿದೆ. ಚೆನ್ನೈ

ಪ್ರಾರ್ಥನಾ ಮಂದಿರಗಳ ಪಕ್ಕ ಇರುವ 276 ಮದ್ಯದ ಮಳಿಗೆಗಳು ಬಂದ್

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಧಾರ್ಮಿಕ ಸ್ಥಳಗಳು ಶಾಲೆ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆಯ ಸಮೀಪವಿರುವ ಮದ್ಯದ ಅಂಗಡಿಗಳನ್ನು ಗುರುತಿಸಲು ಸಮೀಕ್ಷೆ ಮಾಡಿ ವರದಿ ನೀಡುವಂತೆ ವಿಜಯ್ ಸೂಚಿಸಿದ್ದರು.

ಸಮೀಕ್ಷಾ ವರದಿಯಂತೆ, ಈ ಮೇಲಿನ ಸ್ಥಳಗಳ ಐನೂರು ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಮಳಿಗೆಗಳನ್ನು ಈಗ, ಎರಡು ವಾರದಲ್ಲಿ ಮುಚ್ಚಲು ಆದೇಶ ನೀಡಲಾಗಿದೆ. ಧಾರ್ಮಿಕ ಸ್ಥಳಗಳ ಪಕ್ಕ ಇರುವ 276, ಶೈಕ್ಷಣಿಕ ಸಂಸ್ಥೆಗಳ ಬಳಿ ಇರುವ 186 ಮತ್ತು ಬಸ್’ಸ್ಟ್ಯಾಂಡ್ ಬಳಿ ಇರುವ 255 ಮದ್ಯದ ಮಳಿಗೆಗಳನ್ನು ಮುಚ್ಚಲು ಸರ್ಕಾರ ಆದೇಶ ಹೊರಡಿಸಿದೆ.

ಟಾಸ್ಮ್ಯಾಕ್ ಎಂದರೇನು, ರಾಜ್ಯದ ಮದ್ಯದ ಮಳಿಗೆಯ ಮೇಲೆ ನಿಯಂತ್ರಣವಿರುವ ನಿಗಮ

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮವು (TASMAC) ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ರಾಜ್ಯದಲ್ಲಿ ಮದ್ಯದ ಸಗಟು (Wholesale) ಮತ್ತು ಚಿಲ್ಲರೆ ಮಾರಾಟದ (Retail) ಮೇಲೆ, ಇದು ನಿಯಂತ್ರಣವನ್ನು ಹೊಂದಿದೆ. ತಮಿಳುನಾಡಿನಲ್ಲಿ ಸರ್ಕಾರವನ್ನು ಹೊರತು ಪಡಿಸಿ ಬೇರೆ ಯಾರೂ, ಖಾಸಗಿಯಾಗಿ ಮದ್ಯದ ಅಂಗಡಿಯನ್ನು (MRP, Wine Store) ತೆರೆಯುವಂತಿಲ್ಲ. ಇದು, 1983ರಲ್ಲಿ ಅಂದಿನ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವಧಿಯಲ್ಲಿ ಸ್ಥಾಪನೆಗೊಂಡಿತ್ತು.

ರಾಜ್ಯದಲ್ಲಿ ಸುಮಾರು 4,700 ಟಾಸ್ಮ್ಯಾಕ್ ಅಂಗಡಿಗಳು ಇದ್ದು, ಸರ್ಕಾರಕ್ಕೆ ಅತಿದೊಡ್ಡ ಆದಾಯದ ಮೂಲವಾಗಿದೆ. ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಟಾಸ್ಮ್ಯಾಕ್ ಏರಿಸಿಕೊಳ್ಳುತ್ತಲೇ ಇದೆ. 2024-25ರ ಆರ್ಥಿಕ ವರ್ಷದಲ್ಲಿ 48,344 ಕೋಟಿ ರೂಪಾಯಿ ಆದಾಯವನ್ನು ಇದು ಸರ್ಕಾರಕ್ಕೆ ತಂದು ಕೊಟ್ಟಿತ್ತು. ಅದಕ್ಕಿಂತ ಹಿಂದಿನ ಅಂದರೆ 2023-24ರ ಸಾಲಿನಲ್ಲಿ 45,855.70 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು.

ಇದನ್ನೂ ನೋಡಿ: ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *