ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಬಳಿಕ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆತ್ರಿ ಕಳಗಂ) ಪಕ್ಷಕ್ಕೆ ಎಡಪಕ್ಷಗಳು ಬಾಹ್ಯ ಬೆಂಬಲ ಘೋಷಿಸಿದರೂ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತಕ್ಕೆ ಇನ್ನೂ ಎರಡು ಸ್ಥಾನಗಳ ಕೊರತೆ ಇದೆ. ತಮಿಳುನಾಡು
ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಟಿವಿಕೆ ಸರ್ಕಾರ ರಚನೆಗೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿವೆ. ಆದರೆ, ಈ ಬೆಂಬಲದ ಬಳಿಕವೂ ಟಿವಿಕೆ ಮೈತ್ರಿಗೆ ಅಗತ್ಯ ಸಂಖ್ಯಾಬಲ ಸಿಗದ ಕಾರಣ ಸರ್ಕಾರ ರಚನೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.
ಈ ಹಿನ್ನೆಲೆದಲ್ಲಿ ಶನಿವಾರವೇ ಪ್ರಮಾಣವಚನ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಂಖ್ಯಾಬಲದ ಸ್ಪಷ್ಟತೆ ಸಿಗದ ಹಿನ್ನೆಲೆಯಲ್ಲಿ ಇಂದು ಪ್ರಮಾಣವಚನ ಕಾರ್ಯಕ್ರಮ ನಡೆಯುವುದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ವೈರಲ್ ವಿಡಿಯೊ : “ಚುನಾವಣೆಯ ಬಳಿಕ ನುಸುಳುಕೋರರು ಬಂಗಾಳ ತೊರೆಯುತ್ತಿದ್ದಾರೆ”
ರಾಜಕೀಯ ವಲಯದಲ್ಲಿ ಇನ್ನಷ್ಟು ಶಾಸಕರ ಬೆಂಬಲ ಪಡೆಯಲು ಟಿವಿಕೆ ನಾಯಕತ್ವ ಚಟುವಟಿಕೆ ನಡೆಸುತ್ತಿದೆ. ರಾಜ್ಯಪಾಲರ ಮುಂದಿನ ನಿರ್ಧಾರವೂ ಕುತೂಹಲಕ್ಕೆ ಕಾರಣವಾಗಿದೆ.
ಡಿಎಂಕೆ ವಿರುದ್ಧದ ಜನಾಭಿಪ್ರಾಯ ಮತ್ತು ವಿಜಯ್ ನೇತೃತ್ವದ ಹೊಸ ರಾಜಕೀಯ ಪರ್ಯಾಯಕ್ಕೆ ದೊರೆತ ಬೆಂಬಲ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೋ ನೋಡಿ : ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media
