ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಮುಖ್ಯೋಪಾಧ್ಯಾಯರು ಮತ್ತು ಬಾಲ ಕಲ್ಯಾಣಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದೂ, ಇಂತಹ ಪ್ರಕರಣಗಳಲ್ಲಿ ಮೌನವಾಗಿರುವುದು “ಕಾನೂನುಬದ್ಧ ನಿರ್ಲಕ್ಷ್ಯ” (statutory delinquency) ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಮೂವರು ಅಧಿಕಾರಿಗಳ ವಿರುದ್ಧದ ಪ್ರಕರಣವು, ತಮ್ಮ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲಾದ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡದೇ ಇರುವ ಆರೋಪದ ಮೇಲಿದೆ. ಈ ತಪ್ಪಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ. ಪೋಕ್ಸೊ
ಜುಲೈ 2ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಲ್ಲ; ಮಕ್ಕಳ ಸುರಕ್ಷತೆ, ಗೌರವ ಮತ್ತು ಕಲ್ಯಾಣವನ್ನು ಕಾಪಾಡುವ ಜವಾಬ್ದಾರಿ ಹೊಂದಿವೆ ಎಂದು ಹೇಳಿದರು. ಪೋಕ್ಸೊ ಕಾಯ್ದೆಯಡಿಯಲ್ಲಿ ಘಟನೆ ತಿಳಿದ ತಕ್ಷಣವೇ ಕಾನೂನುಬದ್ಧ ಕರ್ತವ್ಯಗಳು ಅನ್ವಯವಾಗುತ್ತವೆ ಎಂದರು.
ಇದನ್ನೂ ಓದಿ: ಕೇನ್ vs ಹಾಲಾಂಡ್: ಕ್ವಾರ್ಟರ್ ಫೈನಲ್ನಲ್ಲಿ ಸ್ಟಾರ್ ಮುಖಾಮುಖಿ!
ದೂರು ಪ್ರಕಾರ, 2026ರ ಜೂನ್ನಲ್ಲಿ 10ನೇ ತರಗತಿಯ ವಿದ್ಯಾರ್ಥಿ ತನ್ನ ಹಾಸ್ಟೆಲ್ ರೂಮ್ಮೇಟ್ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದನು. ಈ ವಿಷಯವನ್ನು ಆತ ವಸತಿ ನಿಲಯದ ವಾರ್ಡನ್ಗೆ ತಿಳಿಸಿದ್ದನು.
ಆದರೆ, ಶಾಲೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಿಲ್ಲ ಎಂದು ದೂರು ಆರೋಪಿಸುತ್ತದೆ. ಅಲ್ಲದೆ, ಬಾಲ ಕಲ್ಯಾಣಾಧಿಕಾರಿ ವಿದ್ಯಾರ್ಥಿಯಿಂದ “ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ” ಎಂದು ಮತ್ತೊಂದು ದೂರು ಬರೆಯಿಸಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆಯ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಲಿಲ್ಲ, ಆರೋಪಿಯು ತಪ್ಪನ್ನು ಒಪ್ಪಿಕೊಂಡಿದ್ದರೂ ಕೂಡ ಕ್ರಮ ಕೈಗೊಳ್ಳಲಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 8ರಂದು ವಿದ್ಯಾರ್ಥಿಯ ಬಳಿ ಮೊಬೈಲ್ ಫೋನ್ ಇರುವ ಆರೋಪದ ಮೇಲೆ ಶಾಲೆ ಕ್ರಮ ಕೈಗೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ವಿದ್ಯಾರ್ಥಿ ತನ್ನ ತಂದೆಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸ್ ದೂರು ದಾಖಲಾಗಿದೆ.
ಪಿಟಿಷನರ್ಗಳು, ಈ ಘಟನೆ ಮಧ್ಯರಾತ್ರಿ ಇಬ್ಬರು ಖಾಸಗಿ ವ್ಯಕ್ತಿಗಳ ನಡುವೆ ನಡೆದಿದ್ದು, ತಮ್ಮಗೆ ತಿಳಿದಿರಲಿಲ್ಲ ಎಂದು ವಾದಿಸಿದರು.
ಆದರೆ, ಪ್ರಕರಣದ ಗಂಭೀರತೆಯನ್ನು ಶಿಕ್ಷೆಯ ಪ್ರಮಾಣದಿಂದ ಮಾತ್ರ ಅಳೆಯಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿ, ದಾಖಲೆಗಳಲ್ಲಿ ಪ್ರಾಥಮಿಕವಾಗಿ ಪ್ರಕರಣ ಸಾಬೀತಾಗುವಂತಹ ಅಂಶಗಳಿವೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದರು.
ಇದನ್ನೂ ನೋಡಿ: ಡಿ.ಕೆ.ಶಿ. ಆಡಳಿತ: ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ಇಲಾಖೆ ಸಚಿವರಿಲ್ಲ… Janashakthi Media
