ಬೆಂಗಳೂರು: ಇದೇ ತಿಂಗಳ 16 ಮತ್ತು 17ರಂದು ಹುಬ್ಬಳ್ಳಿಯಲ್ಲಿರುವ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ‘ಹನ್ನೆರಡನೇ ಮೇ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ.
ಲಡಾಯಿ ಪ್ರಕಾಶನ, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ, ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗ ವತಿಯಿಂದ ಸಮ್ಮೇಳನವನ್ನು ಆಯೋಜಿಸಿದ್ದು, ಈ ವರ್ಷದ ಸಮ್ಮೇಳನವು ‘ಸಾಂವಿಧಾನಿಕ ಪ್ರಜಾಸ್ತೆಯ ಮೇಲಿನ ದಾಳಿ: ಚಹರೆಗಳು ಮತ್ತು ಹೊರದಾರಿಗಳು’ ವಿಷಯದ ಕುರಿತು ನಡೆಯಲಿದೆ. ಸಾಹಿತ್ಯ ಮೇಳದ ಎರಡು ದಿನದ ಗೋಷ್ಠಿಗಳು ಆರಂಭವಾಗುವ ಮುನ್ನ ಬೆಳಗ್ಗೆ 8.30 ರಿಂದ 9.30 ಗಂ-ಟೆಯ ವರೆಗೂ ಪ್ರಜಾತಂತ್ರದ ವಿರೋಧಿಯಾದ ಎಸ್‍ಐಆರ್ ಅನ್ನು ರದ್ದುಗೊಳಿಸಿ ಎಂದು ಒತ್ತಾಯಿಸಿ ಚಿಂತಕರ, ಸಾಹಿತಿಗಳ, ಸಂಘಟನಾ ನಾಯಕರ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: ಡಿಎಂಕೆ-ಎಐಎಡಿಎಂಕೆ ಮೈತ್ರಿ ಆದರೆ ರಾಜೀನಾಮೆ ಎಚ್ಚರಿಕೆ: ಟಿವಿಕೆ ಶಾಸಕರಿಂದ ಹೊಸ ರಾಜಕೀಯ ಸಂಚಲನ
ಈ ಮೆರವಣಿಗೆಯನ್ನು ಹಿರಿಯ ಸಾಹಿತಿಗಳಾದ ಕುಂವೀ, ರಂಜಾನ್ ದರ್ಗಾ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಸಬಿತಾ ಬನ್ನಾಡಿ, ಶ್ರೀಪಾದ ಭಟ್ ಜೊತೆಯಾಗಿ ಚಾಲನೆ ಮಾಡಲಿದ್ದಾರೆ. ಸಂಘಟನಾ ನೇತೃತ್ವವನ್ನು ಹೋರಾಟಗಾರರಾದ ಸಿದ್ದು ತೇಜಿ, ಜೆ.ಎಂ.ವೀರಸಂಗಯ್ಯ, ಮುತ್ತು ಬಿಳೇಯಲಿ, ನಾಗರಾಜ ಗುರಿಕಾರ, ಮುಸ್ಕಾನಾ ಅಣ್ಣಿಗೇರಿ, ಚನ್ನು ಕಟ್ಟಿಮನಿ, ಮೆಹಬೂಬ ಮುನವಳ್ಳಿ, ವೈ.ಎಸ್ ಗುಣಕಿ, ಕೊಟ್ರೇಶ್ ಹುಬ್ಬಳ್ಳಿ, ಶೋಭಾ ಎಚ್., ಕೆ.ಎಚ್.ಪಾಟೀಲ, ರಮೇಶ ಕೋಳೂರ, ಶಶಿ ಅಪೂರ್ವ, ಸುರೇಶ ಅಂಗಡಿ, ಶಂಕರ ಗುರಿಕಾರ, ಸೋಮಶೇಖರ ಕನಕಾಚಲ, ಮಂಜುನಾಥ ಉಳ್ಳಿಕಾಶಿ ಅವರು ವಹಿಸಿಕೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ‘ಸಾಂವಿಧಾನಿಕ ಪ್ರಜಾಸತ್ತೆ: ಸ್ವರೂಪ’, ‘ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ’, ‘ಜನವಿರೋಧಿ ಕಾಯ್ದೆಗಳು-ತಿರ್ಪುಗಳು’, ‘ಕೇಂದ್ರೀಕರಣ-ವಿಕೇಂದ್ರೀಕರಣ ನಡುವಿನ ಸಂಘರ್ಷ’, ‘ಜನಸಮ್ಮತಿ ಉತ್ಪಾದನೆ, ಜಾತಿ, ಲಿಂಗತ್ವ ಮತ್ತು ವರ್ಗ’, ‘ಮೀಸಲಾತಿ-ಒಳ ಮೀಸಲಾತಿ’ ಸೇರಿದಂತೆ ಹಲವರು ಹಲವು ವಿಷಯಗಳ ಗೋಷ್ಠಿಗಳು ನಡೆಯಲಿದೆ.
ನ್ಯಾ.ನಾಗಮೋಹನ್‍ದಾಸ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹೋರಾಟಗಾರರಾದ ನೂರ್ ಶ್ರೀಧರ್, ಮಾವಳ್ಳಿ ಶಂಕರ್, ಸಾಹಿತಿಗಳಾದ ಡಾ.ಬಿ.ಆರ್. ಮಂಜುನಾಥ್, ವಿಜಯ ಶಾಂತಿ, ಸುಧೀರ್ ಕುಮಾರ್ ಮುರೊಳ್ಳಿ, ಸಾತಿ ಸುಂದರೇಶ್, ಕೆ. ಪ್ರಕಾಶ, ಕೆ.ಟಿ. ಗಂಗಾಧರ್, ಡಾ.ಹುಲಿಕುಂಟೆ ಮೂರ್ತಿ, ಕೆ.ಪಿ.ಸುರೇಶ್, ನಂದಕುಮಾರ್ ಕುಂಬ್ರಿಉಬ್ಬು, ಕೆ. ಫಣಿರಾಜ್, ವಕೀಲ ಬಿ.ಟಿ.ವೆಂಕಟೇಶ್ ಸೇರಿದಂತೆ ಹಲವರು ಸಾಹಿತಿಗಳು, ಚಿಂತಕರು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media
