ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಕ್ರೂರ ಕ್ರಮ: ಸಿಪಿಐ(ಎಂ) ಖಂಡನೆ

ನವದೆಹಲಿ: ಗೃಹಬಳಕೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇತ್ತೀಚೆಗೆ ಮಾಡಿರುವ ಏರಿಕೆಯನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ) ತೀವ್ರವಾಗಿ ಖಂಡಿಸಿದೆ. ಎಲ್‌ಪಿಜಿ

ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ ರೂ.60 ರಷ್ಟು ಏರಿಕೆ ಮಾಡಿರುವುದು ಕ್ರೂರ ಕ್ರಮವಾಗಿದೆ. ಇದರಿಂದ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದಿರುವ ಬಡ ಫಲಾನುಭವಿಗಳಿಗೂ ಹೊರೆ ಆಗಲಿದೆ ಎಂದು ಪಕ್ಷ ತಿಳಿಸಿದೆ.

ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ರೂ.114.50 ರಷ್ಟು ಏರಿಕೆ ಮಾಡಲಾಗಿದೆ. ಈ ಏರಿಕೆಯನ್ನು ಕೊನೆಗೂ ಗ್ರಾಹಕರ ಮೇಲೆಯೇ ಹೊರೆಹಾಕಲಾಗುತ್ತದೆ. ಈಗಾಗಲೇ ನಿರಂತರ ಬೆಲೆ ಏರಿಕೆ ಮತ್ತು ಕುಸಿಯುತ್ತಿರುವ ನೈಜ ಆದಾಯದಿಂದ ಸಂಕಷ್ಟ ಅನುಭವಿಸುತ್ತಿರುವ ಮಧ್ಯಮ ವರ್ಗ ಹಾಗೂ ದುಡಿಯುವ ಜನರ ಮೇಲೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ ಎಂದು ಸಿಪಿಐಎಂ ಹೇಳಿದೆ.

ಇದನ್ನೂ ಓದಿ : ಪಶ್ಚಿಮ ಬಂಗಾಳ| 60 ಲಕ್ಷ ಮತದಾರರ ಹೆಸರು ಅಳಿಸುವ ಯತ್ನ: ಚುನಾವಣಾ ಆಯೋಗದ ವಿರುದ್ಧ ಸಲೀಂ ಕಿಡಿ

ಸಿಲಿಂಡರ್‌ಗಳ ಮೇಲೆ ವಿಧಿಸಿರುವ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ಜನರ ಮೇಲೆ ಹೊರೆ ಹಾಕದೆ ಇರಬಹುದಾದರೂ, ಅದರಿಂದ ಬರುವ ಆದಾಯವನ್ನು ಬಿಟ್ಟುಕೊಡಲು ಸರ್ಕಾರ ನಿರಾಕರಿಸುತ್ತಿರುವುದು ಅದರ ಜನವಿರೋಧಿ ಧೋರಣೆಯನ್ನು ಬಯಲು ಮಾಡುತ್ತದೆ ಎಂದು ಪಕ್ಷ ಟೀಕಿಸಿದೆ.

ಪಶ್ಚಿಮ ಏಷ್ಯಾದ ಸಂಘರ್ಷವನ್ನು ಉಲ್ಲೇಖಿಸಿ ಅನಿಲದ ಬೆಲೆ ಏರಿಕೆಯನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾದವನ್ನು ಸಿಪಿಐಎಂ ತಿರಸ್ಕರಿಸಿದೆ. ಇದು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾತ್ರ ಎಂದು ಹೇಳಿದೆ.

ಅದೇ ವೇಳೆ, ಇದು ಡೋನಾಲ್ಡ್‌ ಟ್ರಂಪ್‌ ಆಡಳಿತದ ಯುದ್ಧಕೋರ ನೀತಿಗಳ ಮುಂದೆ ಭಾರತ ಸರ್ಕಾರ ಶರಣಾಗಿರುವುದನ್ನು ಹಾಗೂ ದೇಶದ ಜನರ ಹಿತಾಸಕ್ತಿಗಳನ್ನು ಕಡೆಗಣಿಸಿ ಅಮೆರಿಕದ ಜಾಗತಿಕ ಯಜಮಾನಿಕೆಯ ಹಿತಾಸಕ್ತಿಗಳನ್ನು ಪೂರೈಸಲು ಸಿದ್ಧವಾಗಿರುವುದನ್ನು ಬಿಂಬಿಸುತ್ತದೆ ಎಂದು ಸಿಪಿಐಎಂ ಆರೋಪಿಸಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾಡಿರುವ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸರ್ಕಾರವನ್ನು ಆಗ್ರಹಿಸಿದೆ.

ಇದನ್ನೂ ನೋಡಿ : ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media

 

Donate Janashakthi Media

Leave a Reply

Your email address will not be published. Required fields are marked *