ಐಸಿಸಿ ಟಿ20 ವಿಶ್ವಕಪ್: ಮಾ. 8ರಂದು ಭಾರತ – ನ್ಯೂಜಿಲೆಂಡ್ ನಡುವೆ ಫೈನಲ್​ ಪಂದ್ಯ

ನವದೆಹಲಿಐಸಿಸಿ ಟಿ20 ವಿಶ್ವಕಪ್-2026ರ ಫೈನಲ್​ ಪಂದ್ಯ ಮಾರ್ಚ್‌ 08ರಂದು ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಟ್ರೋಪಿ ಯಾರ ಮುಡಿಗೇರಲಿದೆ ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಕೆರಳಿಸಿದೆ. ಐಸಿಸಿ

ಸುಮಾರು ಒಂದು ತಿಂಗಳ ಕಾಲ ನಡೆದ ಟೂರ್ನಿಯ ಹಲವು ಪಂದ್ಯಗಳಲ್ಲಿ ಮುಂಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತವು ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಾಲ್ಕನೇ ಬಾರಿಗೆ ಆಡುತ್ತಿದದ್ದು, ದಾಖಲೆಯ ಮೂರನೇ ಪ್ರಶಸ್ತಿಯನ್ನು ಬೆನ್ನಟ್ಟುತ್ತಿದೆ.

ನ್ಯೂಜಿಲೆಂಡ್ ತನ್ನ ಕೊನೆಯ-ನಾಲ್ಕು ಮುಖಾಮುಖಿಯಲ್ಲಿ ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳಿಂದ ಗೆದ್ದು ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು.

ಇದನ್ನೂ ಓದಿ: ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳುವಳಿಗಳು ಬಲಗೊಳ್ಳಬೇಕು: ತೀಸ್ತಾ ಸೆಟಲ್ವಾಡ್

ಇಂದು ನಡೆಯುತ್ತಿರುವ ಫೈನಲ್ ಪಂದ್ಯವು ಕೇವಲ ಒಂದು ಕಪ್ ಗೆಲ್ಲುವುದಕ್ಕಷ್ಟೇ ಸೀಮಿತವಾಗಿಲ್ಲ. ಇದು 19 ವರ್ಷಗಳ ಸೋಲಿನ ಸರಣಿಯನ್ನು ಮುರಿಯುವ ಅಗ್ನಿಪರೀಕ್ಷೆಯಾಗಿದೆ. ನ್ಯೂಜಿಲೆಂಡ್ ತಂಡವು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಅತ್ಯಂತ ಸಂಘಟಿತ ಆಟವಾಡುತ್ತದೆ. ಅವರ ಶಿಸ್ತಿನ ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಭಾರತದ ಸ್ಟಾರ್ ಬ್ಯಾಟರ್‌ಗಳಿಗೆ ಸವಾಲೊಡ್ಡಲಿದೆ.

ಮತ್ತೊಂದೆಡೆ, ಭಾರತ ತಂಡವು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿಗಳ ಬಲ ಹೊಂದಿದೆ. ಆದರೆ, ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಫೋಬಿಯಾ ಆಟಗಾರರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆಯೇ ಎಂಬುದು ತಜ್ಞರ ಪ್ರಶ್ನೆಯಾಗಿದೆ.

ಕ್ರೀಡಾ ಜಗತ್ತಿನಲ್ಲಿ ದಾಖಲೆಗಳು ನಿರ್ಮಾಣವಾಗುವುದೇ ಮುರಿಯುವುದಕ್ಕೆ. 2007 ರಿಂದ ಕಾಡುತ್ತಿರುವ ಈ ನ್ಯೂಜಿಲೆಂಡ್ ಭೂತವನ್ನು ಭಾರತ ಓಡಿಸುತ್ತದೆಯೇ ಅಥವಾ ಕಿವೀಸ್ ಪಡೆ ತನ್ನ ವಿಶ್ವಕಪ್ ಅಧಿಪತ್ಯವನ್ನು ಮುಂದುವರಿಸುತ್ತದೆಯೇ ಕಾದು ನೋಡಬೇಕಿದೆ. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯವು ಕ್ರಿಕೆಟ್ ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಾಗುವುದರಲ್ಲಿ ಅನುಮಾನವಿಲ್ಲ.

ಪಂದ್ಯಾವಳಿ ಸಮಾರೋಪ ಸಮಾರಂಭವು ಸಂಜೆ 5.30ಕ್ಕೆ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಪಾಪ್ ತಾರೆ ರಿಕಿ ಮಾರ್ಟಿನ್ , ಜನಪ್ರಿಯ ಬಾಲಿವುಡ್ ಮತ್ತು ಪಂಜಾಬಿ ಗಾಯಕ ಸುಖ್‌ಬೀರ್ ಮತ್ತು ಖ್ಯಾತ ಗುಜರಾತಿ ಜಾನಪದ ಕಲಾವಿದೆ ಫಲ್ಗುಣಿ ಪಾಠಕ್ ಪ್ರದರ್ಶನದ ಮೂಲದ ಪಂದ್ಯ ಆರಂಭವಾಗಲಿದೆ.

ಇದನ್ನೂ ನೋಡಿ: “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media

Donate Janashakthi Media

Leave a Reply

Your email address will not be published. Required fields are marked *