ಜಂಟಿ ಅಧಿವೇಶನ | ಭಾಷಣ ಮಾಡದೆ ಹೊರಟು ಹೋದ ರಾಜ್ಯಪಾಲರು!

ಬೆಂಗಳೂರು: ರಾಜ್ಯ ಸರ್ಕಾರವು ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ರಾಜ್ಯಪಾಲರು ಬರಲು ನಿರಾಕರಿಸಿದ್ದರು, ಸರ್ಕಾರದ ಮನವೊಲಿಕೆ ಬಳಿಕ ಸದನಕ್ಕೆ ಬಂದ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರು ಸರ್ಕಾರ ಕೊಟ್ಟ ಭಾಷಣ ಮಾಡದೆ ಹೋಗಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.ಅಧಿವೇಶನದಲ್ಲಿ

1 ನಿಮಿಷವೂ ಭಾಷಣ ಮಾಡದೇ ಗವರ್ನರ್ ಅಧಿವೇಶನದಿಂದ ಹೊರ ನಡೆಸಿದ್ದಾರೆ. ರಾಜ್ಯಪಾರ ನಡೆಗೆ ಆಡಳಿತ ಪಕ್ಷದವರು ವಿರೋಧ ವ್ಯಕ್ತಪಡಿಸಿದ್ದಾರೆ. ಸದನದ ಒಳಗೆ ರಾಜ್ಯಪಾಲರಿಗೆ ಭಾಷಣ ಓದಲೇಬೇಕೆಂದು ಬಿ ಕೆ ಹರಿಪ್ರಸಾದ್ ಜೋರು ಧ್ವನಿಯಲ್ಲಿ ಒತ್ತಾಯಿಸಿದ್ರು. ಅಧಿವೇಶನದಲ್ಲಿ

ರಾಜ್ಯಪಾಲರ ನಡೆಗೆ ಸಿಎಂ ಕಿಡಿ

ಸರ್ಕಾರ ಕೊಟ್ಟ ಭಾಷಣ ಓದದೆ ಹೊರನಡೆದ ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!

ಸಂವಿಧಾನಕ್ಕೆ ಮಾಡಿದ ಅಪಮಾನ

ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಬಿಟ್ಟು ತಾವೇ ಸಿದ್ದಪಡಿಸಿಕೊಂಡಿದ್ದ ಭಾಷಣ ಓದಿದ ರಾಜ್ಯಪಾಲರು  ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಜನಪ್ರತಿನಿಧಿಗಳ ಸಭೆಗೆ ಅವಮಾನ ಆಗಿದೆ ಇದನ್ನು ರಾಜ್ಯ ಸರ್ಕಾರ ವಿರೋಧಿಸುತ್ತೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.

ಇದನ್ನೂ ನೋಡಿ: ಕುವೆಂಪು ಸಾಹಿತ್ಯ| ಭಾವನೆಗೂ ಮೀರಿದ ವೈಚಾರಿಕ ಬಂಡಾಯ – ಡಾ.ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *