ಬೆಂಗಳೂರು: ಕರ್ನಾಟಕದ ಸುಮಾರು ಒಂದು ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಸೇವಾನಿರತ ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂಬ ಸುಪ್ರೀಂಕೋರ್ಟ್ನ ತೀರ್ಪಿನಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಮಹಾರಾಷ್ಟ್ರ ಸರಕಾರ ಹಾಗೂ ಅಂಜುಮನ್ ಇಶಾತ್-ಎ-ತಮಿಲ್ ಟ್ರಸ್ಟ್ ನಡುವಣ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ದಿಪಂಕರ್ ದತ್ತಾ ಹಾಗೂ ಮನಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ” 2009 ರ ಶಿಕ್ಷಣದ ಹಕ್ಕು ಕಾಯಿದೆ (ಆರ್ಟಿಇ)ಯಡಿ 2011 ರಿಂದ ದೇಶಾದ್ಯಂತ ಜಾರಿಯಾದ ಟಿಇಟಿ ನಿಯಮದಂತೆ ಸೇವಾನಿರತ ಶಿಕ್ಷಕರೆಲ್ಲರೂ (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹೊರತುಪಡಿಸಿ) ಟಿಇಟಿ ಬರೆಯಬೇಕು,” ಎಂದು ತೀರ್ಪು ನೀಡಿದೆ. ಬೆಂಗಳೂರು
ಸೇವಾನಿರತ ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂಬ ಸುಪ್ರೀಂಕೋರ್ಟ್ನ ತೀರ್ಪಿನಿಂದಾಗಿ ಕರ್ನಾಟಕದ ಸುಮಾರು ಒಂದು ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಸಂಕಷ್ಟ ಎದುರಿಸುವಂತಾಗಿದೆ.ಮಹಾರಾಷ್ಟ್ರ ಸರಕಾರ ಹಾಗೂ ಅಂಜುಮನ್ ಇಶಾತ್-ಎ-ತಮಿಲ್ ಟ್ರಸ್ಟ್ ನಡುವಣ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ದಿಪಂಕರ್ ದತ್ತಾ ಹಾಗೂ ಮನಮೋಹನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ” 2009 ರ ಶಿಕ್ಷಣದ ಹಕ್ಕು ಕಾಯಿದೆ (ಆರ್ಟಿಇ)ಯಡಿ 2011 ರಿಂದ ದೇಶಾದ್ಯಂತ ಜಾರಿಯಾದ ಟಿಇಟಿ ನಿಯಮದಂತೆ ಸೇವಾನಿರತ ಶಿಕ್ಷಕರೆಲ್ಲರೂ (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಹೊರತುಪಡಿಸಿ) ಟಿಇಟಿ ಬರೆಯಬೇಕು,” ಎಂದು ತೀರ್ಪು ನೀಡಿದೆ. ಬೆಂಗಳೂರು
ಇದನ್ನೂ ಓದಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದೂ – ಮುಸ್ಲಿಂ ಗುಂಪುಗಳ ನಡುವೆ ಕಲ್ಲು ತೂರಾಟ
ಒಂದು ವೇಳೆ ಟಿಇಟಿ ಪರೀಕ್ಷೆ ಎದುರಿಸದೇ ಸೇವೆಯಲ್ಲಿರುವ ಶಿಕ್ಷಕರು ಮುಂದಿನ 2 ವರ್ಷಗಳಲ್ಲಿ ಟಿಇಟಿ ಉತ್ತೀರ್ಣರಾಗಬೇಕು. ಇಲ್ಲವೇ, ಸ್ವಯಂ ನಿವೃತ್ತಿ ಅಥವಾ ಕಡ್ಡಾಯ ನಿವೃತ್ತಿ (ಎಲ್ಲಸೌಲಭ್ಯಗಳ ಸಹಿತ) ಹೊಂದಬಹುದು. ಸೇವೆಗೆ 5 ವರ್ಷ ಮಾತ್ರ ಬಾಕಿ ಉಳಿದಿರುವ ಸೇವಾನಿರತರಿಗೆ ಕಡ್ಡಾಯ ಟಿಇಟಿ ಅರ್ಹತೆ ಅನ್ವಯವಾಗದು.
ರಾಜ್ಯದಲ್ಲಿ ಸದ್ಯ 1.35 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಈ ಪೈಕಿ 25 ಸಾವಿರ ಶಿಕ್ಷಕರ ಸೇವೆ ಕೇವಲ 5 ವರ್ಷ ಉಳಿದಿದೆ. 10 ಸಾವಿರಕ್ಕೂ ಹೆಚ್ಚು ಟಿಇಟಿ ಉತ್ತೀರ್ಣರಾಗಿದ್ದಾರೆ. ಇವರು ಟಿಇಟಿ ಬರೆಯುವಂತಿಲ್ಲ. ಉಳಿದ 1 ಲಕ್ಷ ಶಿಕ್ಷಕರು 2011 ಕ್ಕಿಂತ ಮುಂಚೆಯೇ ನೇಮಕಗೊಂಡವರಿದ್ದಾರೆ. ಅಂದರೆ, 2008, 2005, 2001, 1997ರಲ್ಲಿ ನೇಮಕಗೊಂಡ 1 ಲಕ್ಷ ಶಿಕ್ಷಕರಿಗೆ ಈಗ ಟಿಇಟಿ ನಡೆಸುವುದು ಎಷ್ಟು ಸರಿ ಎಂಬ ಗೊಂದಲ ಶಿಕ್ಷಕರು ಹಾಗೂ ಸರಕಾರವನ್ನೂ ಕಾಡುತ್ತಿದೆ. ಇದರಿಂದ ಸುಪ್ರೀಂಕೋರ್ಟ್ ಆದೇಶದಿಂದ ವಿನಾಯಿತಿಗಾಗಿ ಶಾಸನ ಜಾರಿಗೊಳಿಸುವ ಒತ್ತಡ ಸರಕಾರದ ಮೇಲಿದೆ.ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಕೆಸಿಎಸ್ಆರ್) 1966 ಹಾಗೂ 1977ರ ಪ್ರಕಾರ ಯಾವುದೇ ಹುದ್ದೆಗೆ ಒಮ್ಮೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು, ತಾತ್ಕಾಲಿಕ ಅವ ಮುಗಿದ ನಂತರ ಹೊಸ ಮಾನದಂಡಗಳನ್ನು ನೌಕರರ ಮೇಲೆ ಹೇರುವಂತಿಲ್ಲ. ಹೀಗಾಗಿ, 2009ರ ಆರ್ಟಿಇ ಮತ್ತು 2011ರ ಟಿಇಟಿ ನಿಯಮವನ್ನು ಅದಕ್ಕೂ ಮೊದಲು ನೇಮಕಗೊಂಡ ನೌಕರರಿಗೆ ಹೇರುವುದು ಸರಿಯಲ್ಲ. ಆದ್ದರಿಂದ, ರಾಜ್ಯದ 1 ಲಕ್ಷ ಶಿಕ್ಷಕರಿಗೆ ಸುಪ್ರಿಂಕೋರ್ಟ್ ಆದೇಶದಿಂದ ವಿನಾಯಿತಿ ನೀಡಿ, ವಿಶೇಷ ನೇಮಕಾತಿ ಅನಿಯಮ ಸೇರ್ಪಡೆಗೆ ಶಾಸನ ತರುವಂತೆ ಕಾನೂನು ಇಲಾಖೆ ಸರಕಾರಕ್ಕೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ. ಸರಕಾರ ಬರುವ ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಬೇಕು ಎಂದು ಶಿಕ್ಷಣ ತಜ್ಞ ಪ್ರೊ. ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು
ಇದನ್ನೂ ನೋಡಿ: ಪರಿಷ್ಕೃತ ಜಿಎಸ್ ಟಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ? Janashakthi Media
