ಉಡುಪಿ: ವೈದ್ಯಕೀಯ ವಿದ್ಯಾಭ್ಯಾಸ ನಡೆಸಲು ಸೀಟ್ ದೊರಕಿಸಿಕೊಡುವುದಾಗಿ ನಂಬಿಸಿ ಬೆಂಗಳೂರು ಮೂಲದ ಸಂತೋಷ್ ಎಂಬ ವೈದ್ಯಕೀಯ ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಘಟನೆ ಸಂಭವಿಸಿದೆ. ವೈದ್ಯ ವಿದ್ಯಾಭ್ಯಾಸ ಮುಗಿಸಿಕೊಂಡು ಎಂಪಿಎಚ್ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಅವರು ಉದ್ದೇಶಿಸಿದ್ದರು. ಉಡುಪಿ
ಅದರಂತೆ ಅವರ ಪರಿಚಯದ ಡಾ। ಸುದರ್ಶನ್ ಗೆ ಕರೆ ಮಾಡಿ ವಿಚಾರಿಸಿದಾಗ ದುಬೈನಲ್ಲಿರುವ ಆರೋಪಿ ಅಫ್ತಾಬ್ ರನ್ನು ಭೇಟಿ ಮಾಡುವಂತೆ ತಿಳಿಸಿದ್ದು, ಅದರಂತೆ ಸಂತೋಷ್ ದುಬೈಗೆ ತೆರಳಿ ಅಫ್ತಾಬ್ರನ್ನು ಭೇಟಿ ಮಾಡಿದ್ದರು. ಅನಂತರ ಯುಕೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲ.ರೂ.ಗೆ ಇಬ್ಬರ ನಡುವೆ ಒಪ್ಪಂದವಾಯಿತು. ಉಡುಪಿ
ಇದನ್ನೂ ಓದಿ: ಸಾಮಾಜಿಕ ವಿವೇಕವೂ ವಿವೇಕರ ಸಂದೇಶವೂ ವಿವೇಕಾನಂದರ ಜನ್ಮದಿನದಂದು ಕಳೆದುಕೊಂಡ ವಿವೇಚನೆಯನ್ನು ಮರಳಿ ಪಡೆಯಬೇಕಿದೆ
ಅಫ್ತಾಬ್ ಸಂತೋಷ್ ಅವರಿಗೆ ಕರೆ ಮಾಡಿ ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲ.ರೂ. ನೀಡುವಂತೆ ಕೇಳಿದ್ದರು. ಅದರಂತೆ ಸಂತೋಷ್ ರಲ್ಲಿ ಎನ್ಆರ್ಐ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮೆ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್. ರನ್ನು ಭೇಟಿ ಆಗುವಂತೆ ತಿಳಿಸಿದ್ದನು.
ಸುಮನ್ ರ ಬನ್ನಂಜೆಯ ಬ್ಯಾಂಕ್ ಆಪ್ ಬರೋಡ ಶಾಖೆಯ ಖಾತೆಗೆ ಬೆಂಗಳೂರಿನಲ್ಲಿರುವ ನಂದಿನಿ ಲೇಔಟ್ ಆಯಕ್ಸಿಸ್ ಬ್ಯಾಂಕ್ ಶಾಖೆಯಿಂದ ಆರ್ ಟಿಜಿಎಸ್ ಮುಖಾಂತರ 8.5 ಲ.ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಸಂತೋಷ್ ಅವರ ಕರೆಯನ್ನು ಸ್ವೀಕರಿಸದೇ ಸಂತೋಷ್ ಅವರಿಗೆ ವಂಚನೆ ಎಸಗಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ: ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ