ಕೇರಳ| 18 ವರ್ಷದ ಬಾಲಕಿಯ ಮೇಲೆ 64 ಜನರಿಂದ ನಿರಂತರ ಅತ್ಯಾಚಾರ

ಕೇರಳ: ಕಳೆದ ಐದು ವರ್ಷಗಳಿಂದ 18 ವರ್ಷದ ಬಾಲಕಿಯ ಮೇಲೆ 64 ಜನರು ನಿರಂತರ ಅತ್ಯಾಚಾರವೆಸಗಿದ ಘಟನೆ ಕೇರಳದ ಕೇರಳದ ಪತ್ತನಂತಿಟ್ಟದಲ್ಲಿ ನಡೆದಿದೆ.

ಬಾಲಕಿಯು ಕ್ರೀಡಾಪಟುವಾಗಿದ್ದು, ಈ ವೇಳೆ ಆಕೆಯ ತರಬೇತುದಾರರು, ಕೆಲವು ನೆರೆಹೊರೆಯವರು ಹಾಗೂ ಸಹಪಾಠಿಗಳು ಸತತವಾಗಿ ಅತ್ಯಾಚಾರವೆಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ

ಮೂಲಗಳ ಪ್ರಕಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕೌನ್ಸೆಲಿಂಗ್‌ನಲ್ಲಿ ಬಾಲಕಿ ಘಟನೆಯ ಬಗ್ಗೆ ಬಹಿರಂಗಪಡಿಸಿದರು. 2019ರಲ್ಲಿ ಬಾಲಕಿ 13 ವರ್ಷದವಳಾಗಿದ್ದಾಗ ಮೊದಲ ಬಾರಿಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು. ಮೊದಲು ಆಕೆಯ ಪ್ರಿಯಕರ ಲೈಂಗಿಕ ಕಿರುಕುಳ ನೀಡಿದ್ದು, ನಂತರ ಆತನ ಸ್ನೇಹಿತರು ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.

ಈ ಸಂಬಂಧ ಪತ್ತನಂತಿಟ್ಟ ಪೊಲೀಸರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳನ್ನು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣಗಳ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಬಸ್‌ ‍ಪ್ರಯಾಣ ದರ ಹೆಚ್ಚಳ : ಫ್ರೀಡಂ ಪಾರ್ಕ್‌ ಬಳಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *