ಹೊಸ ನಿಯಮಗಳ ಕರಡು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ದೇವೀಂದ್ರ ಜಡಿ

ಲಬುರಗಿ: ಗುಲಬರ್ಗಾ ವಿಶ್ವವಿದಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ದೇವೀಂದ್ರ ಜಡಿ, ‘ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಬೋಧಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರ ನೇಮಕ, ಬಡ್ತಿಗೆ ಸಂಬಂಧಿಸಿದಂತೆ 2018ರ ನಿಯಮಗಳನ್ನು ರದ್ದುಪಡಿಸುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳ ಕರಡು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈಗ ಜಾರಿಯಲ್ಲಿದ್ದ 2018ರ ನಿಯಮಾವಳಿಗಳ ಪ್ರಕಾರ ಕುಲಪತಿ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸುತ್ತಿತ್ತು. ರಾಜ್ಯಪಾಲರು ಆ ಸಮಿತಿ ಸದಸ್ಯರನ್ನು ಶಿಫಾರಸು ಮಾಡುವ ಅಧಿಕಾರ ಹೊಂದಿದ್ದರು.

ಇದನ್ನೂ ಓದಿ: ಬೆಳಗಾವಿ| ಮನೆ ಜಪ್ತಿ ಮಾಡಿ ಬಾಣಂತಿಯನ್ನು ಹೊರ ಹಾಕಿದ್ದ ಫೈನಾನ್ಸ್ ಕಂಪನಿ: ಬೀಗ ಮುರಿದು ಮನೆ ಒಳಗೆ ಕಳುಹಿಸಿದ ರೈತರು

ಆದರೆ, ಹೊಸ ಕರಡು ನಿಯಮದಂತೆ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರ ಮಾಡಿದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ಹಾಲನ್ನು ಡೈರಿಗೆ ಹಾಕಬೇಡಿ ಅಂತಾರೆ : ನಮ್ಮ ಬದುಕು ಬೀದಿಗೆ ಬಿದ್ದಿದೆ – ರಶ್ಮೀ ಚಂದ್ರ

Donate Janashakthi Media

Leave a Reply

Your email address will not be published. Required fields are marked *