ತಿಷ್ಠಿತ ಆಸ್ಕರ್‌ ಪ್ರಶಸ್ತಿ ಸ್ಪರ್ಧೆ: ಭಾರತದ ಐದು ಸಿನಿಮಾಗಳು ಆಯ್ಕೆ

ಈ ಬಾರಿ ಭಾರತದ ಐದು ಸಿನಿಮಾಗಳು ತಿಷ್ಠಿತ ಆಸ್ಕರ್‌ ಪ್ರಶಸ್ತಿಗಳ ಸ್ಪರ್ಧೆಗೆ ಆಯ್ಕೆಯಾಗಿವೆ. 2025ರ ಆಸ್ಕರ್‌ಗೆ ಸ್ಪರ್ಧಿಸುವ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ತಮಿಳು ನಟ ಸೂರ್ಯ ಅಭಿನಯದ ʼಕಂಗುವʼ ಸಿನಿಮಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ‘ದಿ ಗೋಟ್ ಲೈಫ್’ ಸೇರಿದಂತೆ ಐದು ಸಿನಿಮಾಗಳು ನಾಮನಿರ್ದೇಶನಗೊಂಡಿವೆ.

ಮತ್ತೊಂದೆಡೆ ಸೂರ್ಯ ಅಭಿನಯದ ಕಂಗುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಆಸ್ಕರ್ ರೇಸ್‌ಗೆ ಹೇಗೆ ಪ್ರವೇಶಿಸಿತು? ಎಂದು ವಿಮರ್ಶಕರು ಪ್ರಶ್ನೆ ಮುಂದಿಟ್ಟಿದ್ದಾರೆ. 97ನೇ ಅಕಾಡೆಮಿ ಪ್ರಶಸ್ತಿಗಳ ಪ್ರದಾನಕ್ಕೆ ಕೇವಲ ಎರಡು ತಿಂಗಳು ಬಾಕಿ ಇವೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಈ ವರ್ಷದ ಆಸ್ಕರ್‌ಗೆ ಅರ್ಹವಾದ 323 ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ 207 ಸಿನಿಮಾಗಳು ಪ್ರತಿಷ್ಠಿತ ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಅರ್ಹತಾ ಮಾನದಂಡಗಳನ್ನು ಪೂರೈಸಿವೆ.

ಈ ಪೈಕಿ ಐದು ಭಾರತೀಯ ಸಿನಿಮಾಗಳು 207 ಅರ್ಹತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತಮಿಳಿನ ಸೂರ್ಯ ನಟನೆಯ ಕಂಗುವ, ದಿ ಗೋಟ್ ಲೈಫ್, ಸಂತೋಷ್, ಸ್ವಾತಂತ್ರ್ಯ ವೀರ್ ಸಾವರ್ಕರ್, ಮಲಯಾಳಂ-ಹಿಂದಿಯ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌, ಹಿಂದಿ-ಇಂಗ್ಲೀಷ್‌ ಭಾಷೆಯಲ್ಲಿ ತೆರೆಕಂಡ ಗರ್ಲ್ಸ್‌ ವಿಲ್‌ ಬಿ ಗರ್ಲ್ಸ್‌ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.

ಇದನ್ನೂ ಓದಿ : ಕಲ್ಲಿದ್ದಲು ಗಣಿಯೊಳಗೆ ನುಗ್ಗಿದ ನೀರು; ಒಳಗೆ ಸೊಲುಕಿಕೊಂಡ 9 ಕಾರ್ಮಿಕರು

ಈ ನಾಮನಿರ್ದೇಶನಗೊಂಡಿರುವ ಸಿನಿಮಾಗಳಿಗೆ ಮತದಾನ ಪ್ರಕ್ರಿಯೆ ಜನವರಿ 8ರಿಂದ (ನಾಳೆ) ಆರಂಭಗೊಳ್ಳಲಿದೆ. ಜನವರಿ 12ರಂದು ಮತದಾನ ಮುಕ್ತಾಯಗೊಳ್ಳಲಿದೆ. ಈ ಅಂತಿಮ ನಾಮನಿರ್ದೇಶನಗೊಂಡ ಸಿನಿಮಾಗಳ ಹೆಸರನ್ನು ಜನವರಿ 17ರಂದು ಪ್ರಕಟಿಸಲಿದೆ. ಆಸ್ಕರ್-2025ರ ಸಮಾರಂಭವು ಮಾರ್ಚ್ 2ರಂದು ಓವೇಶನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ಅಲ್ಲದೆ ಆಸ್ಕರ್‌ ಬಾರಿ ಹೆಚ್ಚುವರಿಯಾಗಿ ಅನಿಮೇಟೆಡ್ ಶಾರ್ಟ್ ಫಿಲ್ಮ್, ಡಾಕ್ಯುಮೆಂಟರಿ ಫೀಚರ್, ಡಾಕ್ಯುಮೆಂಟರಿ ಶಾರ್ಟ್, ಮೇಕಪ್ ಮತ್ತು ಹೇರ್ ಸ್ಟೈಲಿಂಗ್, ಒರಿಜಿನಲ್ ಸ್ಕೋರ್, ಒರಿಜಿನಲ್ ಸಾಂಗ್, ಇಂಟರ್ನ್ಯಾಷನಲ್ ಫೀಚರ್, ಲೈವ್ ಆಕ್ಷನ್ ಶಾರ್ಟ್, ಸೌಂಡ್ ಮತ್ತು ವಿಷುಯಲ್ ಎಫೆಕ್ಟ್ಸ್ ಸೇರಿದಂತೆ 10 ವಿಭಾಗಗಳಲ್ಲಿ ಆಯ್ಕೆಯಾದ ಸಿನಿಮಾಗಳನ್ನು ಕೂಡ ಬಹಿರಂಗಪಡಿಸಿದೆ.

ಈ ಹಿಂದೆ ಕಿರಣ್ ರಾವ್ ಅವರ ಲಪಥ ಲೇಡೀಸ್ ಕೂಡ ರೇಸ್‌ನಲ್ಲಿತ್ತು. ಆದರೆ ಕೊನೆಗೆ ಅದು ಶಾರ್ಟ್‌ಲಿಸ್ಟ್ ಆಗಲಿಲ್ಲ. ಆದರೆ ಸಿನಿಮಾ ಗೆಲ್ಲದಿದ್ದರೂ ಸಹ ಆಸ್ಕರ್ ರೇಸ್‌ನಲ್ಲಿರುವುದು ದೊಡ್ಡ ಸಾಧನೆ ಎಂದು ಹೇಳಲಾಗಿತ್ತು.

ನಟ ಸೂರ್ಯ ನಟನೆಯ ಕಂಗುವ ಸಿನಿಮಾ ಮೊದಲು ಬಿಡುಗಡೆಯಾದಾಗ, ಚಿತ್ರವು ಹಲವಾರು ಕಾರಣಗಳಿಗೆ ಟೀಕೆಗಳಿಗೆ ಗುರಿಯಾಗಿತ್ತು. ಈ ಸಿನಿಮಾದಲ್ಲಿ ಇತರ ನಟರಿಗೆ ಸಾಕಷ್ಟು ಸ್ಕ್ರೀನ್‌ ಟೈಮ್‌ ನೀಡಲಿಲ್ಲ ಎಂದು ಅಭಿಮಾನಿಗಳು ಮತ್ತು ವಿಮರ್ಶಕರು ದೂರಿದ್ದರು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಅಷ್ಟೇನೂ ಸದ್ದು ಮಾಡಿರಲಿಲ್ಲ. 350 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಗಳಿಸಿದ್ದು ಕೇವಲ 96 ಕೋಟಿ ರೂಪಾಯಿ. ಈ ಸವಾಲುಗಳ ನಡುವೆಯೂ ಕಂಗುವ ಆಸ್ಕರ್‌ ಅಂಗಳಕ್ಕೆ ಕಾಲಿಟ್ಟಿದೆ.

ಇದನ್ನೂ ನೋಡಿ : ಪಿಚ್ಚರ್ ಪಯಣ – 154 , ಎಮಿಲಿಯಾ ಪೆರೇಝ್, ನಿರ್ದೇಶನ : ಜಾಕ್ ಆಡಿಯಾರ್ಡ್ , ವಿಶ್ಲೇಷಣೆ : ಮ.ಶ್ರೀ.ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *