ಆರ್ಡರ್‌ ಮಾಡಿದ್ದ ಆಹಾರವನ್ನು ತಲುಪಿಸದ ಕಾರಣ ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗಳಿಗೆ 40 ಸಾವಿರ ರೂ. ದಂಡ

ರಾಯಚೂರು: ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗಳು ಆರ್ಡರ್‌ ಮಾಡಿದ್ದ ಆಹಾರವನ್ನು ತಲುಪಿಸದ ಕಾರಣ ಜಿಲ್ಲಾ ಗ್ರಾಹಕರ ಆಯೋಗ 40 ಸಾವಿರ ರೂ. ದಂಡ ವಿಧಿಸಿದೆ. ಆರ್ಡರ್‌ 

ರಾಯಚೂರು ನಗರದ ನಿವಾಸಿ ವಿದ್ಯಾಶ್ರೀ ಎನ್ನುವವರು ಜೊಮ್ಯಾಟೊ ಹಾಗೂ ಡಾಮಿನೋಸ್ ವಿರುದ್ಧ ದೂರು ಹಾಕಿದ್ದು, ಈ ಸಂಬಂಧ ಗ್ರಾಹಕ ಆಯೋಗ ವಿಚಾರಣೆ ನಡೆಸಿ ರಾಯಚೂರಿನ ಜೊಮ್ಯಾಟೊ ಹಾಗೂ ಬೆಂಗಳೂರಿನ ಡಾಮಿನೋಸ್ ಕಂಪನಿಗೆ ನೋಟಿಸ್ ನೀಡಿತ್ತು. ಆದರೂ ಜೊಮ್ಯಾಟೊ ಮತ್ತು ಡಾಮಿನೋಸ್‌ನಿಂದ ಯಾರೊಬ್ಬರು ಹಾಜರಾಗಿರಲಿಲ್ಲ. ಈ ಬೆನ್ನಲ್ಲೇ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಇದನ್ನೂ ಓದಿ: ಎಚ್‌ಎಂಪಿವಿ ವೈರಸ್: ಯಾರೂ ಹೆದರಬೇಡಿ, ಹೆದರಿಸಬೇಡಿ – ಚೀನಾದಿಂದ ಮಾತನಾಡಿದ ಕನ್ನಡಿಗ

ವಿದ್ಯಾಶ್ರೀ 2024, ಮಾ.17ರಂದು ಸಂಜೆ 7 ಗಂಟೆಗೆ ಡಾಮಿನೋಸ್ ಪಿಜ್ಜಾಕ್ಕಾಗಿ ಜೊಮ್ಯಾಟೊ ಮೂಲಕ 337.45 ರೂ. ಹಣ ನೀಡಿ ಆರ್ಡರ್ ಮಾಡಿದ್ದರು. ಆರ್ಡರ್ ಸ್ವೀಕರಿಸಿರುವ ಕುರಿತು ಅವರಿಗೆ ಸ್ವೀಕೃತಿ ಬಂದಿತ್ತು. ಹೀಗಾಗಿ ಪಿಜ್ಜಾಗಾಗಿ ವಿದ್ಯಾಶ್ರೀ ಹಾಗೂ ಅವರ ಮಗಳು ರಾತ್ರಿ 9 ಗಂಟೆಯವರೆಗೆ ಕಾದರೂ ಜೊಮ್ಯಾಟೊದಿಂದ ಮಾತ್ರ ಪಿಜ್ಜಾ ಆರ್ಡರ್ ಡೆಲಿವರಿ ಆಗಿರಲಿಲ್ಲ.

ಅದಾದ ಬಳಿಕ ಜೊಮ್ಯಾಟೊಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ, ನಿಮ್ಮ ಪಿಜ್ಜಾ ಸಿದ್ಧವಾಗುತ್ತಿದೆ ಎಂಬ ಉತ್ತರ ಬಂದಿದೆ. ಮತ್ತೆ ತಾಯಿ, ಮಗಳು ಡೆಲಿವರಿಗೆ ಕಾದಿದ್ದಾರೆ. ಆದರೂ ಪಿಜ್ಜಾ ಬರಲೇ ಇಲ್ಲ. ಆದರೆ ವಿದ್ಯಾಶ್ರೀ ಮೊಬೈಲ್ ಹಣ ಪಾವತಿಸಿರುವ ಮತ್ತು ಪಿಜ್ಜಾ ಸ್ವೀಕರಿಸಿರುವ ಸಂದೇಶ ಬಂದಿದೆ. ಆರ್ಡರ್ ಕೈಗೆ ಹಸ್ತಾಂತರವಾಗುವ ಮುನ್ನವೇ ಈ ಸಂದೇಶವನ್ನು ಯಾಕೆ ಕಳುಹಿಸಿದ್ದಾರೆಂದು ಮತ್ತೆ ವಿಚಾರಿಸುವಾಗ, ನಿಮ್ಮ ಆರ್ಡರ್ ನೀಡಲು ಸಮಸ್ಯೆಯಾಗಿದೆ ಎಂದು ಡೆಲಿವರಿ ಸಂಸ್ಥೆ ಹೇಳಿದೆ. ಹೀಗಾಗಿ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ನೋಡಿ : HMPV ಬಗ್ಗೆ ಭಯ ಬೇಡ – ಚೀನಾದಿಂದ ಮಾತನಾಡಿದ ಕನ್ನಡಿಗ Janashakthi Media

Donate Janashakthi Media

Leave a Reply

Your email address will not be published. Required fields are marked *