ರಾಯಚೂರಿನಲ್ಲಿ ಅಕ್ರಮ ಗಣಿಗಾರಿಕೆ: ಬಿಜೆಪಿಯ ಮಾಜಿ ಶಾಸಕ ಬಸವರಾಜ್ ದಡೆಸೂಗೂರು ವಿರುದ್ದ ಗಂಭೀರ ಆರೋಪ

ರಾಯಚೂರು : ಅಕ್ರಮ ಗಣಿಗಾರಿಕೆ ಮಾಡಿರುವುದಾಗಿ ಬಿಜೆಪಿಯ ಮಾಜಿ ಶಾಸಕ ಬಸವರಾಜ್ ದಡೆಸೂಗೂರು ವಿರುದ್ದ ಆರೋಪ ಕೇಳಿ ಬಂದಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಅಕ್ರಮವಾಗಿ ಮರಮ್ ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಹೌದು ಬಸವರಾಜ್ ದಡೆಸುಗೂರು ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಅಕ್ರಮ ಅವ್ಯಾಹತ ಗಣಿಗಾರಿಕೆ ನಡೆಸುತ್ತಿದ್ದುರು ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನ ವಹಿಸಿದೆ. ಸರ್ವೇ ನಂಬರ್ 278/3 ರಲ್ಲಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ಇದನ್ನೂ ಓದಿ : ‘ಸಂವಿಧಾನ ವಿರೋಧಿಗಳಿಂದ ಸಂವಿಧಾನ ಉಳಿಸುವ ಸುಳ್ಳಿನ ಮಾತು’ : ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಗುಡುಗು

ರಾಜಧನ & ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಕೂಡ ಇಲ್ಲ. ಬಸವರಾಜ ದಡೆಸುಗುರು ವಿರುದ್ಧ ವಕೀಲ ಜಗದೀಶ್ ಎನ್ನುವವರು ಕಳೆದ ನಾಲ್ಕೈದು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಂಧನೂರು ಇಲಾಖೆಗೆ ಹಾಗೆ ದೂರು ಕೊಟ್ಟಿದ್ದಾರೆ.

ಆದರೆ ದೂರು ನೀಡಿದರು ಕೂಡ ಯಾವುದೇ ರೀತಿಯಾದಂತಹ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. 2024 ಜನೆವರಿರಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದ್ದು, ಸಿಂಧನೂರು ಗ್ರಾಮೀಣ ಠಾಣೆಯಲ್ಲಿ FIR ದಾಖಲಾಗಿತ್ತು. ಅಕ್ರಮ ಪ್ರಶ್ನಿಸಿದ ಕರ್ನಿ ಎನ್ನುವ ವ್ಯಕ್ತಿಗೆ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ. ಅಕ್ರಮದಿಂದಾಗಿ ಇಲಾಖೆಯ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಲಾಸ್ ಆಗುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ನೋಡಿ : HMPV ಬಗ್ಗೆ ಭಯ ಬೇಡ – ಚೀನಾದಿಂದ ಮಾತನಾಡಿದ ಕನ್ನಡಿಗ Janashakthi Media

Donate Janashakthi Media

Leave a Reply

Your email address will not be published. Required fields are marked *