ಭೀಮಸೇತು ಮುನಿವೃಂದ ಮಠದವರು ಭೂಮಿಯ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ : ಆಲಗೇರಿ ಗ್ರಾಮಸ್ಥರು ಪ್ರತಿಭಟನೆ

ತೀರ್ಥಹಳ್ಳಿ: ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದವರು ಭೂಮಿಯ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ ನಡೆಸುತ್ತಿದ್ದಾರೆ ಎಂದು ಆಲಗೇರಿ ಗ್ರಾಮಸ್ಥರು ಮಠದ ಸ್ವಾಮೀಜಿ ಹಾಗೂ ಪ್ರತಿನಿಧಿಗಳ ವಿರುದ್ಧ ಗಂಭೀರ ಆರೋಪ ಮಾಡಿ ಪ್ರತಿಭಟನೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಆಗ್ರಹಿಸಿದರು. ಭೀಮಸೇತು 

ದೀರ್ಘಕಾಲದಿಂದ ರೈತರ ಸಾಗುವಳಿ ಅನುಭವದಲ್ಲಿರುವ ಆಲಗೇರಿಯ ಸ.ನ.08ರ ತೋಟ, ಖುಷಿ ಸಾಗುವಳಿ ಜಾಗ, ಮನೆ ಎಲ್ಲವು ( ಒಟ್ಟು 6.35 ಎಕರೆ) ನಮ್ಮದು ಎಂದು ಮಠದ ಸ್ವಾಮೀಜಿಗಳು ಹೇಳಿದ್ದಾರೆ. ಆದರೆ ಗ್ರಾಮಸ್ಥರು ನಮ್ಮ ಪೂರ್ವಜರು ಇದ್ದ ಈ ಜಾಗ, ನಾವು ಜೀವನ ಕಟ್ಟಿಕೊಂಡ ಜಾಗ, ನಾವೇ ಮನೆ ಕಟ್ಟಿದ ಜಾಗವನ್ನು ಇಂದು ನಮ್ಮದಲ್ಲ ಎಂದರೆ ಹೇಗೆ ಎಂದು ಮಠದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಹಕ್ಕು ಪತ್ರ ಪಡೆದವರಿಗೆ ನಿವೇಶನ ಸ್ವಾಧೀನ ನೀಡದೆ ಅನ್ಯಾಯ : ಸಂತ್ರಸ್ತರಿಂದ ಕುಪ್ಪೆಪದವರು ಪಂಚಾಯತ್ ಮುಂಭಾಗ ಧರಣಿ

ಪಟ್ಟಣದ ತಾಲೂಕು ಕಚೇರಿ ಮುಂದೆ ‘ರೈತರ ಭೂಮಿಯನ್ನು ಕಬಳಿಸುವ ಭೀಮನಕಟ್ಟೆ ಮಠಕ್ಕೆ ಧಿಕ್ಕಾರ’, ‘ಭೀಮನಕಟ್ಟೆ ಮಠದ ಕ್ರಿಮಿನಲ್ ಕೃತ್ಯಗಳ ವಿಚಾರಣೆ ನಡೆಯಲಿ’, ‘ಭೀಮನಕಟ್ಟೆ ಮಠದ ಸ್ವಾಮಿಯನ್ನು ಮತ್ತು ಏಜೆಂಟ್‌ನನ್ನು ಕೂಡಲೇ ಬದಲಾಯಿಸಿ ಮತ್ತು ಬಂಧಿಸಿ’, ನಕಲಿ ದಾಖಲೆಯನ್ನು ಸೃಷ್ಟಿಸಿ ಭೀಮನಕಟ್ಟೆ ಮಠಕ್ಕೆ ನೆರವಾದ ಮೋಜಣಿ ಸಿಬ್ಬಂದಿಗಳನ್ನು ಬಂಧಿಸಿ’ ಹಾಗೂ ‘ವಿಶೇಷ ತನಿಖಾ ತಂಡ ರಚಿಸಿ
ಭೀಮನಸೇತು ಮುನಿವೃಂದ ಮಠದ ಹಗರಣಗಳ ತನಿಖೆ ನಡೆಸಬೇಕು’ ಎಂಬ ಬರಹಗಳುಳ್ಳ ಬೋರ್ಡ್‌ಗಳನ್ನು ಹಿಡಿದು ಗ್ರಾಮಸ್ಥರು ಹೋರಾಟ ನಡೆಸಿದ್ದಾರೆ.

ದೂರು ಪತ್ರದಲ್ಲಿ ಮಠದ ಸ್ವಾಮೀಜಿಗಳು, ಮಠದ ಏಜೆಂಟ್ ಸಾಗರ ಭಟ್ಟ, ಕಂದಾಯ ಇಲಾಖೆ ನೌಕರ ಸುನೀಲ್ ಮತ್ತು ಮೋಜಣಿ ಇಲಾಖೆಯ ವಿಜಯಲಕ್ಷ್ಮಿ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದ್ದಾರೆ. ಮುಖ್ಯಮಂತ್ರಿಗಳು, ಕಂದಾಯ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ದೂರು ಪತ್ರವನ್ನು ಬರೆದಿದ್ದಾರೆ. ಅಲ್ಲದೇ ಇದೇ ಮೊದಲೇನಲ್ಲ ಈ ಹಿಂದಿನಿಂದಲೂ ಮಠದಿಂದ ಇಂತಹ ಕೃತ್ಯಗಳು ನಡೆದಿದ್ದು, ದೂರನ್ನೂ ನೀಡಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆರೋಪಿಸಲಾಗಿದೆ. ಭೀಮಸೇತು 

ಇದನ್ನೂ ನೋಡಿ : ಬಸ್‌ ‍ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *