4ನೇ ತರಗತಿಯ ದಲಿತ ವಿದ್ಯಾರ್ಥಿ ಗೆ ಬಾಸುಂಡೆ ಬರುವಂತೆ ಥಳಿತ, ಶಿಕ್ಷಕ ಸಸ್ಪೆಂಡ್

ಚಿತ್ರದುರ್ಗ: ನಗರದ ಹಿರಿಯೂರು ತಾಲೂಕಿನ ಬಟ್ಟೂರು ಫಾರಂ ಸರ್ಕಾರಿ ಶಾಲಾ ಶಿಕ್ಷಕ 4ನೇ ತರಗತಿಯ ವಿದ್ಯಾರ್ಥಿ ಗೆ ಬಾಸುಂಡೆ ಬರುವಂತೆ ಥಳಿಸಿದ್ದೂ, ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ. ವಿದ್ಯಾರ್ಥಿಗೆ ಥಳಿಸಿ ಅಮಾನತು ಆಗಿರುವ ಶಿಕ್ಷಕ ಬಿ. ರಮೇಶ್ ಎಂಬುವವನು ಎಂದು ತಿಳಿದು ಬಂದಿದೆ. ದಲಿತ 

ಶಿಕ್ಷಕ ಬಾಲಕಯನ್ನು ಥಳಿಸಿ, ಅವಾಚ್ಯವಾಗಿ ನಿಂದಿಸಿ, ಕಾಲಲ್ಲಿ ತುಳಿದು ಕ್ರೌರ್ಯ ಮೆರೆದು ಬೆನ್ನಿಗೆ ಬಾಸುಂಡೆ ಬರುವಂತೆ ಬಾರಿಸಿದ್ದು, ಘಟನೆ ಸಂಬಂಧ ಭಾರತೀಯ ದಲಿತ ಸಂಘರ್ಷ ಸಮಿತಿಯಿಂದ ದೂರು ಸಲ್ಲಿಕೆ ಆಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಕ್ತಿ ಏನು ಎಂಬುದು ನಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಈ ಘಟನೆ ಸಂಬಂಧ ವಿಚಾರಣೆ ನಡೆಸಿ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಬಿ. ರಮೇಶ್ ರನ್ನ ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ತುಮಕೂರು ರಸ್ತೆಯ ತಾಳೇಕೇರಿ ಬಳಿ ಭೀಕರ ಅಪಘಾತ Janashakthi Media

Donate Janashakthi Media

Leave a Reply

Your email address will not be published. Required fields are marked *