ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 26 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಂಗಪುರದಿಂದ ಎಎಪಿಯ ಮನೀಶ್ ಸಿಸೋಡಿಯಾ ವಿರುದ್ಧ ಫರ್ಹಾದ್ ಸೂರಿ ರನ್ನು ಕಣಕ್ಕಿಳಿಸಿದೆ. ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಎಎಪಿಯ ಮಾಜಿ ಶಾಸಕರಾದ ಅಸೀಂ ಖಾನ್ ಮತ್ತು ದೇವೀಂದ್ರ ಸೆಹ್ರಾವತ್ ರಿಗೂ ಟಿಕೆಟ್ ಘೋಷಿಸಿದೆ. ನವದೆಹಲಿ
ಮತಿಯಾ ಮಹಲ್‌ನಿಂದ ಅಸೀಂ ಖಾನ್ ರನ್ನು ಕಣಕ್ಕಿಳಿಸಿದರೆ, ಬಿಜ್ಞಾಸನ್‌ನಿಂದ ಸೆಹ್ರಾವತ್‌ಗೆ ಟಿಕೆಟ್ ನೀಡಲಾಗಿದೆ. ಶಕು ಬಸ್ತಿಯಿಂದ ಸತೀಶ್ ತಕ್ಕ ಸೀಮಾವುರಿಯಿಂದ(ಎಸ್‌ಸಿ) ರಾಜೇಶ್ ಲೋಫಿಯಾ, ಬಾಬರ್‌ಪುರದಿಂದ ಹಾಜಿ ಮೊಹಮ್ಮದ್ ಇಶ್ವಾಕ್ ಖಾನ್ ಡಿಯೋ(ಎಸ್‌ಸಿ)ಯಿಂದ ರಾಜೇಶ್ ಚೌವಾಣ್, ದೆಹಲಿ ಕಂಟೋನಂಟ್‌ನಿಂದ ಪ್ರದೀಪ್ ಕುಮಾರ್ ಉಪಮನ್ಯು ಮತ್ತು ಲಕ್ಷ್ಮಿ ನಗರದಿಂದ ಸುಮಿತ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ.
ರಿಥಾಲಾದಿಂದ ಸುಶಾಂತ್ ಮಿಶ್ರಾ, ಮಂಗೋಲ್‌ಪುರಿ(ಎಸ್‌ಸಿ)ನಿಂದ ಹನುಮಾನ್ ಚೌವಾಣ್, ತ್ರಿನಗರದಿಂದ ಸತೇಂದರ್ ಶರ್ಮಾ, ಮೋತಿ ನಗರದಿಂದ ರಾಜೇಂದ್ರ ನಾಮಧಾರಿ, ಮಾದಿಪುರದಿಂದ(ಎಸ್‌ಸಿ) ಜೆಪಿ ಪನ್ಸಾರ್, ರಾಜ್‌ರಿ ಗಾರ್ಡನ್‌ನಿಂದ ಧರ್ಮಪಾಲ್ ಚಂಡೇಲಾ, ಉತ್ತಮ್ ನಗರದಿಂದ ಮುಖೇಶ್ ಶರ್ಮಾ ಮತ್ತು ಮಟಿಯಾಳದಿಂದ ರಘುವಿಂದ ಶೋಕೀನ್ ರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: ಶಿವಮೊಗ್ಗ| ಕುವೆಂಪು ಅವರ 120 ನೇ ಜನ್ಮ ದಿನೋತ್ಸವ ಆಚರಣೆ
ರಾಜಿಂದರ್ ನಗರದಿಂದ ವಿನೀತ್ ಯಾದವ್, ಮಾಳವೀಯ ನಗರದಿಂದ ಜಿತೇಂದರ್ ಕೊಚಾರ್, ಮೆಹೇಲಿಯಿಂದ ಪುಷ್ಪಾ ಸಿಂಗ್, ಸಂಗಮ್ ವಿಹಾರ್‌ನಿಂದ ಹರ್ಷ ಚೌಧರಿ, ತ್ರಿಲೋಕಪುರಿಯಿಂದ(ಎಸ್‌ಸಿ) ಅಮರ್‌ದೀಪ್, ಕೊಂಡಿಯಿಂದ(ಎಸ್‌ಸಿ) ಅಕ್ಷಯ್ ಕುಮಾರ್, ಕೃಷ್ಣ ನಗರದಿಂದ ಗುರುಚರಣ್ ಸಿಂಗ್ ರಾಜು, ಗೋಕಲ್‌ಪುರದಿಂದ(ಎಸ್‌ಸಿ) ಪ್ರಮೋದ್ ಕುಮಾರ್ ಜಯಂತ್ ಮತ್ತು ಕರವಾಲ್ ನಗರದಿಂದ ಪಿ.ಕೆ ಮಿಶ್ರಾ ರಿಗೆ ಟಿಕೆಟ್ ನೀಡಿದೆ.
ಈ ತಿಂಗಳ ಪ್ರಾರಂಭದಲ್ಲಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಎಎಪಿ ಸಂಚಾಲಕ ಅರವಿಂದ ಕೇಜಿವಾಲ್ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ. ಈ ಪಟ್ಟಿಯೊಂದಿಗೆ 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಒಟ್ಟು 47 ಅಭ್ಯರ್ಥಿಗಳನ್ನು ಇಲ್ಲಿಯವರೆಗೆ ಘೋಷಿಸಿದೆ.
ಇದನ್ನೂ ನೋಡಿ: ‘ಪುರುಷರ ಸಾವಿನ ಸುತ್ತ’ – 498A ಏನು – ಎತ್ತ? Janashakthi Media