ಬೆಂಗಳೂರು : ಖಾಸಗಿ ಶಾಲೆಯಲ್ಲಿ ನಿಗದಿ ಪಡಿಸಿರುವ ಫೀಸ್ ಸರಿಯಾದ ಸಮಯಕ್ಕೆ ಕಟ್ಟಲಿಲ್ಲ ಅಂದರೆ ಮಕ್ಕಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುವಂತಹ ಗಂಭೀರ ಆರೋಪ ಕೇಳಿಬಂದಿದೆ.
ಇಂತಹ ಆತಂಕಕಾರಿ ಆರೋಪ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆ ಆರ್ಚಿಡ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಆರೋಪ ಕೇಳಿಬಂದಿದೆ. ಮಕ್ಕಳು ಫೀಸ್ ಕಟ್ಟಿಲ್ಲ ಅಂದ್ರೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಬಹುತೇಕ ಮಕ್ಕಳನ್ನ ಲೈಬ್ರರಿಯಲ್ಲಿ ಕೂಡ ಕೂಡಿ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ : ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ ದಂಧೆ
ಶಾಲೆಯ ಈ ಕ್ರಮ ದಿಂದಾಗಿ ಮಕ್ಕಳ ಬೌದ್ಧಿಕ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಮಕ್ಕಳು ಪೋಷಕರ ಗಮನಕ್ಕೆ ತಂದ್ರೆ ಹೆಚ್ಚಿನ ಟಾರ್ಚರ್ ಕೊಡ್ತಾರಂತೆ. ಶಾಲೆಯ ನಡವಳಿಕೆ ಖಂಡನೀಯ. ಹೀಗಾಗಿ ಶಾಲೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪೋಷಕರಿಂದ ಒತ್ತಾಯ ಕೇಳಿಬಂದಿದೆ.
ಲೈಸೆನ್ಸ್ ನವೀಕರಣದಲ್ಲಿ ಎಲ್ಲೆಡೆ ಸುದ್ದಿಯಾಗಿದ್ದ ಆರ್ಚಡ್ ಶಾಲೆಯ ಮತ್ತೊಂದು ಬ್ರಾಂಚ್ ಆಗಿರುವ ಆರ್ಚಿಡ್ ದಿ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ಇದೀಗ ಇಂತಹ ಗಂಭೀರವಾದ ಆರೋಪ ಕೇಳಿಬಂದಿದೆ. ಕೂಡಲೇ ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
ಇದನ್ನೂ ನೋಡಿ : ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ Janashakthi Media