20 ವರ್ಷಗಳಿಂದ ಕೆಮಿಕಲ್ ಹಾಲು ಮತ್ತು ಪನೀರ್ ಮಾರಾಟ: ವ್ಯಾಪಾರಿಯ ಬಂಧನ

ಉತ್ತರ ಪ್ರದೇಶ: ಡೈರಿ ವ್ಯಾಪಾರಿಯೊಬ್ಬ 20 ವರ್ಷಗಳಿಂದ ಕೆಮಿಕಲ್ ಹಾಲು ಮತ್ತು ಪನೀರ್ ಮಾರಾಟ ಮಾಡುತ್ತಿದ್ದ ಎಂಬ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದ್ದು, ಪೋಲೀಸರು ಬಂಧಿಸಿದ್ದಾರೆ.

ಅಗರ್ವಾಲ್ ವ್ಯಾಪಾರಿಗಳ ಮಾಲೀಕ ಅಜಯ್ ಅಗರ್ವಾಲ್ ಬಂಧಿತ ವ್ಯಕ್ತಿ. ಖಚಿತ ಮಾಹಿತಿಯ ಮೇರೆಗೆ ಎಫ್‌ಎಸ್‌ಎಸ್‌ಐ ಅಧಿಕಾರಿಗಳು ಅಗರ್ವಾಲ್‌ ಡೈರಿ ಹಾಗೂ ಗೋಡೌನ್‌ನ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ರೈತನಿಗೆ ಸಾಲ ಕೊಡೆಸುವುದಾಗಿ ಹೇಳಿ ಮೋಸ: ಬರೋಬ್ಬರಿ 39,000 ರೂಪಾಯಿ ಮೌಲ್ಯದ ನಾಟಿ ಕೋಳಿ ತಿಂದು ತೇಗಿದ ಬ್ಯಾಂಕ್‌ ಮಾನೇಜರ್

ಈ ವೇಳೆ ಅಧಿಕಾರಿಗಳು 1 ಲೀಟರ್ ರಾಸಾಯನಿಕದಿಂದ 500 ಲೀಟರ್ ನಕಲಿ ಹಾಲನ್ನು ತಯಾರಿಸಿರುವ ಬಗ್ಗೆ ಬಹಿರಂಗ ಪಡೆಸಿದ್ದಾರೆ.

ಅಷ್ಟೇ ಅಲ್ಲದೇ ಈ ಹಾಲನ್ನು ನಿಜವಾದ ಹಾಲಿನಂತೆ ಕಾಣಲು ರಾಸಾಯನಿಕಗಳಲ್ಲಿ ಕೃತಕ ಸಿಹಿಕಾರಕಗಳು ಮತ್ತು ಸುವಾಸನೆಗಳನ್ನು ಬೆರೆಸುವುದು ಪತ್ತೆ ಆಗಿದೆ. ಅಜಯ್ ಅರ್ಗವಾಲ್ 20 ವರ್ಷಗಳಿಂದ ಸಿಂಥೆಟಿಕ್ ಹಾಲು ಮತ್ತು ಪನೀರ್ ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಅಗರ್ವಾಲ್ ನಕಲಿ ಹಾಲನ್ನು ತಯಾರಿಸಲು ಬಳಸಿದ ರಾಸಾಯನಿಕಗಳನ್ನು ಇನ್ನೂ ಅಧಿಕಾರಿಗಳು ತಿಳಿಸಿಲ್ಲ.

ಇದನ್ನೂ ನೋಡಿ : ‘ಸೂಫಿ ಪಂಥ’ದ ಬಗ್ಗೆ ಪ್ರೊ.ರಹಮತ್ ತರೀಕೆರೆ ಉಪನ್ಯಾಸ Janashakthi Media

Donate Janashakthi Media

Leave a Reply

Your email address will not be published. Required fields are marked *