ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಂಪುಟವು, ಕೋವಿಡ್ ಹಗರಣದ ತನಿಖೆಗೆ ಸಂಬಂಧಪಟ್ಟಂತೆ ನಾ.ಕುನ್ನಾ ವರದಿಗೆ ಸಂಬಂಧಪಟ್ಟಂತೆ ಉಪ ಸಮಿತಿ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ, ವರದಿಯ ಆಧಾರದ ಮೇಲೆ ನಾವು ತನಿಖೆ ಮಾಡುತ್ತೇವೆ ಎಂದು ತಿಳಿಸಿದರು. ಹಗರಣ
ಸಂಪುಟ ಉಪ ಸಮಿತಿ ಸಭೆಯ ಅಂತ್ಯವಾದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ನಾ.ಕುನಾ ಮಧ್ಯಂತರ ವರದಿ ಪರಿಶೀಲನೆ ಮಾಡಿದ್ದೇವೆ. ವರದಿ ಶಿಫಾರಸಿನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಿದ್ದಾರೆ. ಎಫ್‌ಐಆರ್ ಸೇರಿದಂತೆ ಪ್ರತಿಯೊಂದು ವಿಚಾರಣೆ ಮಾಡಬಹುದು. ಹಿಂದೆ ಚಾಮರಾಜನಗರಕ್ಕೂ ನಾನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದೆವು ಮುಂದೆಬೆಳಗಾವಿಯಲ್ಲಿ ಸಂಪುಟ ಸಮಿತಿ ಸಭೆ ಮಾಡುತ್ತೇವೆ.
ಇದನ್ನೂ ಓದಿ: ಡೆಂಝೋ, ಪೋರ್ಟರ್ ಆ್ಯಪ್ ಗಳ ಮೂಲಕ ಡ್ರಗ್ಸ್ ಪೂರೈಕೆ – ಬೆಂಗಳೂರಿನ ಟೆಕ್ಕಿ ಸೇರಿ ಇಬ್ಬರ ಬಂಧನ
ಬಿಬಿಎಂಪಿಯ ವ್ಯಾಪ್ತಿಯಲ್ಲಿ 84 ಲಕ್ಷ ಆರ್ಟಿಪಿಸಿಆರ್ ಟೆಸ್ಟ ಮಾಡಿದ್ದಾರೆ 84 ಲಕ್ಷ ಆರ್ ಟಿ ಪಿ ಸಿ ಆರ್ ಟೆಸ್ಸಿಗೆ 500 ಕೋಟಿ ರೂಪಾಯಿ ಆಗಿದೆ. ಈ ಸಂಬಂಧ 400 ಕೋಟಿ ಹಣ ಪಾವತಿ ಮಾಡಿದ್ದಾರೆ. ಕಿದ್ವಾಯಿಯಲ್ಲಿ ಒಂದೇ ದಿನ 24 ಲಕ್ಷ ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದಾರೆ. ಅಧಿಕಾರಿಗಳೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾರೆಲ್ಲ ಸಹಿ ಮತ್ತು ಆದೇಶ ಕೊಟ್ಟಿದ್ದಾರೋ ಪರಿಶೀಲನೆ ಮಾಡುತ್ತಿದ್ದೇವೆ.
ಕಾನೂನುಬಾಹಿರವಾಗಿ ಏನೇನೋ ಆಗಿದೆಯೋ ಎಲ್ಲವನ್ನು ಪರಿಶೀಲಿಸುತ್ತೇವೆ.
ಕೆಲವು ಹಿರಿಯ ಮತ್ತು ನಿವೃತ್ತಾ ಅಧಿಕಾರಿಗಳನ್ನು ಮಾಹಿತಿಗಾಗಿ ಬಳಸಿಕೊಳ್ಳುತ್ತೇವೆ.ಯಾವ ರೀತಿಯಲ್ಲಿ ಕಾನೂನು ಕ್ರಮ ಎಂದು ನಿರ್ಧರಿಸಲಾಗುತ್ತದೆ. ಕ್ರಿಮಿನಲ್ ನಡೆದಿದ್ದರೆ ಅದು ವಿಚಾರಣೆ ಆಗಲಿದೆ. ಯಾರ್ಯಾರು ಸಹಿ ಹಾಕಿದ್ದಾರೆ ಎಲ್ಲರೂ ತನಿಖೆ ಆಗುತ್ತದೆ. ವರದಿಯ ಆಧಾರದ ಮೇಲೆ ನಾವು ತನಿಖೆ ಮಾಡುತ್ತೇವೆ ಯಾವ ರೀತಿಯಲ್ಲಿ ಕಾನೂನು ಕ್ರಮ ಎಂದು ನಿರ್ಧಾರವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇದನ್ನೂ ನೋಡಿ : ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕೇರಳ ಮಾದರಿ ಜಾರಿಯಾಗಲಿ – ಡಾ. ಅನೀಲ್ Janashakthi Media