ತಮಿಳುನಾಡು : ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ 7 ಮಂದಿ ಸಾವನಪ್ಪಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಮನೆ ಮೇಲೆ ಗುಡ್ಡ , ಕುಸಿದು ಘೋರ ದುರಂತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ : ಪಾದಚಾರಿಯ ಮೇಲೆ ಹರಿದ ನೀರಿನ ಟ್ರ್ಯಾಕ್ಟರ್; ಸ್ಥಳದಲ್ಲೆ ವ್ಯಕ್ತಿ ಸಾವು
ಭಾನುವಾರ ‘ಫಂಗಲ್’ ಚಂಡಮಾರುತದ ಸಮಯದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿ ಸುಮಾರು 170 ಜನರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗ್ರಾಮದ ಹಿಂದೆ ಇದ್ದ ಗುಡ್ಡ ಕುಸಿದಿದ್ದು, ದೊಡ್ಡ ದೊಡ್ಡ ಕಲ್ಲು ಬಂಡೆಗಳು ಮನೆಗಳ ಮೇಲೆ ಉರುಳಿವೆ. ಗುಡ್ಡದ ಬಳಿಯಿದ್ದ ಮನೆಗಳೆಲ್ಲಾ ಮಣ್ಣಿನಿಂದ ಆವೃತ್ತವಾಗಿದ್ದು, ಜೆಸಿಬಿ ಬಳಸಿ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ.
ಎಡ ಬಿಡದೆ ಸುರಿಯುತ್ತಿರುವ ಮಳೆಯಲ್ಲಿಯೇ ರಕ್ಷಣಾ ಕಾರ್ಯಚಾರಣೆ ನಡೆಸಲಾಗುತ್ತಿದ್ದು, ಇನ್ನೂಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ : ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಕೊಲ್ಲಲ್ಪಡುತ್ತಿದ್ದಾಳೆ ; ಮನೆಯಲ್ಲೂ ಮಹಿಳೆಗೆ ಸುರಕ್ಷತೆ ಇಲ್ಲJanashakthi Media