ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಹನಿಟ್ರ್ಯಾಪ್‌ ಆರೋಪ

ಬೆಂಗಳೂರು: ಇತ್ತಿಚಿಗೆ ತಾನೆ ನಗರದ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಜಾತಿನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಅವರ ವಿರುದ್ಧ ಮತ್ತೊಂದು ಆರೋಪ ಬಂದಿದ್ದು, ಮಾಜಿ ಕಾರ್ಪೊರೇಟರ್ ಒಬ್ಬರ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರವಾದ ಆರೋಪ ಕೇಳಿಬಂದಿದೆ. ಈ ಕುರಿತಂತೆ ಸ್ವತಃ ಮಾಜಿ ಕಾರ್ಪೊರೇಟರ್ ಮಂಜುಳಾ ಹಾಗೂ ಅವರ ಪತಿ ಲಗ್ಗೆರೆ ನಾರಾಯಣ ಸ್ವಾಮಿ, ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸಿದ್ದರು ಎಂಬ ಸ್ಫೋಟಕ ಆರೋಪ ಮಾಡಿದ್ದಾರೆ.

ಮುನಿರತ್ನ ಬಿಜೆಪಿ ಶಾಸಕನಾಗಿ ಹನಿ ಟ್ರ್ಯಾಪ್ ಮಾಡುವ ಕೆಲಸ ಮಾಡ್ತಿದ್ದ ಜನ ಸಾಮಾನ್ಯರಿಂದ ಹಿಡಿದು ರಾಜ್ಯದ ಓರ್ವ ಮುಖ್ಯ ಮಂತ್ರಿಯವರೆಗೆ ಹನಿ ಟ್ರ್ಯಾಪ್ ಮಾಡಿದ್ದಾನೆ ಎಂದು ಶಾಸಕ ಮುನಿರತ್ನ ವಿರುದ್ಧ ಲಗ್ಗೆರೆ ನಾರಾಯಣ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಹೆಂಡತಿಯ ಮಾನ ಹರಾಜು ಹಾಕಲು ಕೋಟಿ ಡೀಲ್ ಕೊಟ್ಟಿದ್ದ, ನನ್ನ ಹೆಂಡತಿ ಗಟ್ಟಿಗಿತ್ತಿ, ಆದರೂ ಅವಾಗ ಆದ ಅವಮಾನ ಸಹಿಸಿಕೊಳ್ಳಲಾಗದು ಎಂದು ಹೇಳಿದರು.

ಇದನ್ನೂ ಓದಿ: “ಅಕ್ರಮ ಕೂಟ ಸೇರಿದ್ದರು” ಅಂದರೆ ಏನರ್ಥ ಪೊಲೀಸ್ ಕಮೀಷನರ್?: ದಿನೇಶ್ ಹೆಗ್ಡೆ ಪ್ರಶ್ನೆ

ರಮೇಶ್ ಜಾರಕಿಹೊಳಿ ವೀಡಿಯೋ ಹೊರಬಂದ ಸಮಯದಲ್ಲೇ ನನ್ನ ಮೇಲೂ ವೀಡಿಯೋ ಮಾಡಲು ಯತ್ನಿಸಿದ್ದನು, ಕೊನೆಗೆ ಎಲ್ಲಾ ಮರೆತು ಕಾಂಪುಮೈಸ್ ಆಗಿ ಅವರ ಪರವಾಗಿ ಚುನಾವಣೆ ಕೂಡ ಮಾಡಿದೆ. ಮುನಿರತ್ನಗೆ ಭಯ ಬಿದ್ದು ಅವರ ಪರವಾಗಿಯೂ ಕೆಲಸ ಮಾಡಿದ್ವಿ, ಆದರೂ ನನ್ನನ್ನು ನನ್ನ ಹೆಂಡತಿ ಮೇಲೆ ಕೆಂಗಣ್ಣು ಬೀರಿ ಕೆಡವೋಕೆ ನೋಡಿದ್ದ, ನಾರಾಯಣಸ್ವಾಮಿ ವೀಡಿಯೋ ಇದೆ ಅಂತ ಹಬ್ಬಿಸಿದ್ದ ಎಂದು ಆರೋಪಿಸಿದರು.

ಶಾಸಕ ಮುನಿರತ್ನ ನನ್ನ ವಿರುದ್ಧ ಷಡ್ಯಂತ್ರ ಮಾಡೋದಕ್ಕೆ ಯತ್ನಿಸಿದ್ದ.ನನ್ನ ಬಳಿ ಇದಕ್ಕೆ ಬೇಕಾದ ಆಡಿಯೋ, ವೀಡಿಯೋ ದಾಖಲೆ ಇದೆ. ನನ್ನ ಮೇಲೆ ಅಶ್ಲೀಲ ವೀಡಿಯೋ ಮಾಡೋಕೆ ಮುನಿರತ್ನ ಷಡ್ಯಂತ್ರ ಮಾಡಿದ್ದನು. ಕೊನೆಗೆ ನಾನು ನನ್ನ ಹೆಂಡತಿ ಇರುವುದನ್ನ ಚಿತ್ರಿಕರಿಸಲು ಬೆಡ್ ರೂಂ ನಲ್ಲಿ ಕ್ಯಾಮೆರಾ ಇಡೋಕೆ ಪ್ರಯತ್ನ ಪಟ್ಟಿದ್ದನು. ನಮ್ಮ ಮನೆಯ ಬೆಡ್ ರೂಂನಲ್ಲಿ ಮನೆ ಕೆಲಸದವರಿಗೆ ಕೋಟಿ ಕೋಟಿ ಆಫರ್ ಕೊಟ್ಟು ಪ್ರಯತ್ನ ಮಾಡಿದ್ದನು, ಆದರೆ ಅದು ಸಾಧ್ಯವಾಗಲಿಲ್ಲ. ಒಂದುವೇಳೆ ಆ ರೀತಿ ಏನಾದ್ರೂ ನಡೆದಿದ್ರೆ ನನ್ನ ಹೆಂಡತಿ ಸತ್ತು ಹೋಗ್ತಿದ್ದಳು ಎಂದರು.

ಇದನ್ನೂ ನೂಡಿ: ಸಿಪಿಐಎಂ ಬೆಂಗಳೂರು ದಕ್ಷಿಣ | ಜಿಲ್ಲಾ ಸಮ್ಮೇಳನದ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

Donate Janashakthi Media

Leave a Reply

Your email address will not be published. Required fields are marked *