ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಖಾತ್ರಿಗೊಳ್ಳಬೇಕು, ವಿಭಜಕ ರಾಜಕೀಯವು ಬಾಂಗ್ಲಾದೇಶಕ್ಕೂ ಮತ್ತು ಭಾರತಕ್ಕೂ ಹಾನಿಕಾರಕ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಪರಿಸ್ಥಿತಿಯು ಈಗಲೂ ಆತಂಕವನ್ನು ಉಂಟುಮಾಡುತ್ತಿದೆ. ಅವರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವ ವಿವಿಧ ಘಟನೆಗಳು ಸಂಭವಿಸಿವೆ.

ಕೋಮು ವಿಭಜನೆಯನ್ನು ಸೃಷ್ಟಿಸಲು ಮೂಲಭೂತವಾದಿ ಶಕ್ತಿಗಳು ಸಕ್ರಿಯವಾಗಿರುವ ಸಮಯದಲ್ಲಿ, ಬಾಂಗ್ಲಾದೇಶದ ಅಧಿಕಾರಿಗಳು ಕೋಮು ದಾಳಿಗಳನ್ನು ತಡೆಯಲು ಇನ್ನೂ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಶಾಂತಿ ಮತ್ತು ಸೌಹಾರ್ದತೆಗಾಗಿ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ವಿಳಂಬವಿಲ್ಲದೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಇದನ್ನೂ ಓದಿ : ಧಾರ್ಮಿಕ ಸ್ಥಳಗಳ ಬಗ್ಗೆ ಕಾನೂನು ವಿವಾದಗಳನ್ನು ನಿಲ್ಲಿಸಲು ಸುಪ್ರಂ ಕೋರ್ಟ್ ಮಧ್ಯಪ್ರವೇಶಿಸಬೇಕು: ಸಿಪಿಐ(ಎಂ)

ಈ ಸಂಬಂಧದಲ್ಲಿ, ಭಾರತದೊಳಗೆ, ಹಿಂದುತ್ವ ಶಕ್ತಿಗಳು ಸಂಯಮಹೀನ ಮತ್ತು ಉದ್ರೇಕಕಾರಿ ಪ್ರಚಾರದಲ್ಲಿ ತೊಡಗಿವೆ. ಇದರಲ್ಲಿ ಅವರ ಉದ್ದೇಶವು ಸಂದೇಹಾಸ್ಪದವಾಗಿದೆ, ಏಕೆಂದರೆ, ಮುಸ್ಲಿಮರನ್ನು ಜರೆಯುವುದಕ್ಕೆ ಮತ್ತು ಇಲ್ಲ್ಲಿ ಅಲ್ಪಸಂಖ್ಯಾತರ ಮೇಲೆ ಉದ್ದೇಶಿತ ದಾಳಿಗಳಿಗೆ ಈ ಶಕ್ತಿಗಳೇ ಕಾರಣವಾಗಿವೆ.

ಮತೀಯ ಕೋಮುವಾದದ ಆಧಾರದ ಮೇಲಿನ ವಿಭಜಕ ರಾಜಕೀಯವು ಬಾಂಗ್ಲಾದೇಶಕ್ಕೂ ಮತ್ತು ಭಾರತಕ್ಕೂ ಹಾನಿಕಾರಕವಾಗಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಇದನ್ನೂ ನೋಡಿ : ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *