ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ಬಾಣಂತಿಯರ ಸಾವು ಮತ್ತು VIMMS ನಲ್ಲಿ ಮತ್ತೊಂದು ಗರ್ಭಿಣಿಯ ಸಾವು ಬಗ್ಗೆ ತನಿಖೆ ನಡೆಸಲು ಅಗ್ರಹ

ಬಳ್ಳರಿ: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯ ನಂತರ ಬಾಣಂತಿಯರ ಸಾವು ಮತ್ತು VIMMS ನಲ್ಲಿ ಮತ್ತೊಂದು ಗರ್ಭಿಣಿಯ ಸಾವು ಬಗ್ಗೆ ತನಿಖೆ ನಡೆಸಲು ಅಖಿಳ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ರಾಜ್ಯ ಸಮಿತಿ ಜಂಟಿ ಕಾರ್ಯ ದರ್ಶಿ ಜೆ. ಚಂದ್ರ ಕುಮಾರಿ, ಅಧ್ಯಕ್ಷರು ತರಂಗಣಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.  ಜಿಲ್ಲಾ ಆಸ್ಪತ್ರೆ ಯಲ್ಲಿ ಹೆರಿಗೆಂದು ನವಂಬರ್ 9 ರಂದು ದಾಖಲಾಗಿದ್ದು, ಸಿಜರೆಯನಿಗೆ ಒಳಗಾಗಿದ್ದು, ಲಲಿತಮ್ಮ ಮತ್ತು ನಂದಿನಿ ಎಂಬುವರು ಹೈಪಟೆಸ್ ಸಿ ರಿನಲ್ ಸೇಫ್ಟಿಕ್ ಫೇಲ್ಯುರ್ (ಮೂತ್ರಪಿಂಡ ವೈಫಲದಿಂದ ಮತ್ತು ಬಹು ಅಂಗಾಂಗ ವೈಫಲ್ಯ ದಿಂದಾಗಿ ಮತಪಟ್ಟಿದ್ದಾರೆ ಎಂದು ಅಲ್ಲಿಯ ವ್ಯದ್ಯಾಧಿಕಾರಿಗಳು ಸಬೂಭನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಮಸ್ಯೆ ಯನ್ನು ಎದುರಿಸುತ್ತಿರುವ ಇವರನ್ನು ಜಿಲ್ಲಾ ಆಸ್ಪತ್ರೆಯಿಂದ ವಿಮ್ಸಗೆ ದಾಖಲಿಸಲಾಗಿತ್ತು ,ಮತ್ತು ರೋಜಾ ಎಂಬುವರು ವಿಮ್ಸನಲ್ಲಿ ನಿನ್ನೆ ಕೊನೆ ಉಸಿರು ಎಳೆದಿದ್ದಾರೆ. ಈಗ ಇನ್ನೊಬ್ಬರ ಸ್ಥಿತಿ ಚಿಂತಾ ಜನಕವಾಗಿದೆ ಮತ್ತು ಇನ್ನೂ ಮೂವರನ್ನು ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಮೃತರ ಸಂಖ್ಯೆ ನಾಲ್ಕುಗೆ ಏರಿದೆ ಮತ್ತು ನಿನ್ನೆ ವಿಮ್ಸ್ ಆಸ್ಪತ್ರೆಯಲ್ಲಿ ಇನ್ನೊಬ್ಬ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದ ಮಹಾಲಕ್ಷ್ಮಿ ಎಂಬವರು ಸಾವನ್ನಪ್ಪಿದ್ದಾರೆ.

ಈ ಘಟನೆ ಗಳನ್ನು ಗಮನಿಸಿದ್ದಾರೆ ಆಸ್ಪತ್ರೆ ವ್ಯದ್ಯರು ನಿರ್ಲಕ್ಷ ಕಾಣುತುದ್ದು, ಅವರಿಗೆ ನೀಡಿದ ಔಷಧಗಳ ಬಗ್ಗೆ ತನಿಖೆ ಯನ್ನು ನಡಸಬೇಕು. ಇದರಿಂದ ಮೃತ ಕುಟುಂಬಗಳು ದುಖದ ಮಡುವಿನಲ್ಲಿ ಮುಳುಗಿವೆ ಜೊತೆಗೆ ಅವರ ಮಕ್ಕಳು ಅನಾಥವಾಗಿವೆ. ಇಂತಹ ಘಟನೆ ಬಗ್ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (JMS) ಸರ್ಕಾರ ಆಸ್ಪತ್ರೆ ವೈದ್ಯರ ನಿರ್ಲಕ್ಷದ ಬಗ್ಗೆ ಖಂಡಿಸಿದರು.

ಇದನ್ನೂ ಓದಿ : ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ: ಗುಪ್ತಾಂಗದಲ್ಲಿ ಕೋಲು ಮತ್ತು ಮೆಣಸಿನ ಪುಡಿಯನ್ನು ಹಾಕಿ ಹಿಂಸಾಚಾರ

ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಆರಿಸಿಕೊಂಡು ಬರುವ ಗ್ರಾಮೀಣ ಪ್ರದೇಶದ ಬಡ ಮಹಿಳೆಯರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳು ಸಿಗದೇ ಈ ರೀತಿ ಅನಾಯಾಸವಾಗಿ ಜೀವನ ತಯತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿಗೂ ಕೂಡ ಅವಶ್ಯಕತೆಗಳು ವೈದ್ಯಕೀಯ ಸಿಬ್ಬಂದಿ ಕೊರತೆ ಜೊತೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಡ ಮಹಿಳೆಯರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೆ ಸಾವಿನ ಕೂಪಗಳಾಗುತ್ತವೆ.

ಪ್ರಸವಪೂರ್ವ ಮತ್ತು ಪ್ರಸವದ ನಂತರ ತಾಯಂದಿರ ಸಾವುಗಳಲ್ಲಿ ಕರ್ನಾಟಕ ಯಲ್ಲಿ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಮೊದಲು ಸ್ಥಾನ ದಲ್ಲಿದೆ. ಕರ್ನಾಟಕ ರಾಜ್ಯದ ಆರೋಗ್ಯ ಮಂತ್ರಿಗಳು ಈ ಘಟನೆಗಳ ಬಗ್ಗೆ ಗಮನಹರಿಸಿದ ನಿರ್ಲಕ್ಷವಹಿಸುತ್ತಿರುವುದನ್ನು ಜನವಾದ ಮಹಿಳಾ ಸಂಘಟನೆ ತೀವ್ರವಾಗಿ ಖಂಡನೆ ಮಾಡುತ್ತಿದೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಬಾಣಂತಿಯರ ಸಾವಿನ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧವಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಮತ್ತು ಸರ್ಕಾರ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯ ಓದಿಗಿಸ ಬೇಕೆಂದು ಅಖಿಲ ಭಾರತ ಜನವದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.

ಈ ವೇಳೆ ಜಿಲ್ಲಾ ಸಮಿತಿ ಸದಸ್ಯರಾದ ಕೆ ರುದ್ರಮ್ಮ , ಮಂಗಮ್ಮ , ಮಾರೆಮ್ಮ, ಟಿ ಈರಮ್ಮ , ನೀಲಮ್ಮ , ಅರುಣಾ, ಚಿಕ್ಕಮ್ಮ ಮುಂತಾದವರು ಬಾಗಾವಹಿಸಿಧ್ದರು.

ಇದನ್ನೂ ನೋಡಿ : ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ

Donate Janashakthi Media

Leave a Reply

Your email address will not be published. Required fields are marked *