ಬುದ್ಧ ವಿಹಾರದ ಸಂಪೂರ್ಣ ಆಡಳಿತ ಹಾಗೂ ನಿರ್ವಹಣೆಯನ್ನು ಬೌದ್ಧರಿಗೆ ಹಸ್ತಾಂತರಿಸುವಂತೆ ಒತ್ತಾಯ: ದೇಶಾದ್ಯಂತ ಪ್ರತಿಭಟನೆ

ಬೆಂಗಳೂರು: ಗೌತಮ ಬುದ್ಧರಿಗೆ ಜ್ಞಾನೋದಯವಾದ ಬುದ್ಧ ಗಯಾದ ಮಹಾಬೋಧಿ ಬುದ್ಧ ವಿಹಾರದ ಆಡಳಿತ ವಿವಾದದ ಕೇಂದ್ರಬಿಂದುವಾಗಿದೆ. ಬುದ್ಧ ವಿಹಾರದ ಸಂಪೂರ್ಣ ಆಡಳಿತ ಹಾಗೂ ನಿರ್ವಹಣೆಯನ್ನು ಬೌದ್ಧರಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಇಂದು (ಮಂಗಳವಾರ) ಏಕಕಾಲದಲ್ಲಿ ಬೌದ್ಧ ಧರ್ಮಿಯರು ಪ್ರತಿಭಟನೆ ನಡೆಸಿದ್ದಾರೆ.

ಸಂವಿಧಾನದಲ್ಲಿ ಆಯಾ ಧರ್ಮಗಳ ಆಚರಣೆಗೆ ಮುಕ್ತ ಅವಕಾಶವಿದೆ. ವಿವಿಧ ಧರ್ಮಗಳ ಶ್ರದ್ಧಾಕೇಂದ್ರಗಳು ಆಯಾ ಧರ್ಮಿಯರ ಹಿಡಿತದಲ್ಲಿಯೇ ಇವೆ. ಆದರೆ, ಬುದ್ಧ ವಿಹಾರದ ಆಡಳಿತದಲ್ಲಿ ಮಾತ್ರ ವೈದಿಕರು(ಮಹಾಂತರು ಅಥವಾ ಬ್ರಾಹ್ಮಣರು) ಸೇರಿಕೊಂಡು ಬೌದ್ಧ ಧರ್ಮದ ಆಚರಣೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಬೌದ್ಧ ಧರ್ಮವನ್ನು ಬ್ರಾಹ್ಮಣೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ಬೌದ್ಧ ಧರ್ಮಿಯರು ಸಂವಿಧಾನ ಸಮರ್ಪಣಾ ದಿನದಂದೇ (ನ.26) ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ರಾಷ್ಟ್ರಪತಿ, ಪ್ರಧಾನಿ, ಸಿಎಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ : ಸಂವಿಧಾನ ದಿನಾಚರಣೆ: ಕಾಂಗ್ರೆಸ್‌ ಸರ್ಕಾರವು ಸಂವಿಧಾನದ ಅಸ್ತ್ರದ ಮೂಲಕ ಎಲ್ಲಾ ಪ್ರತಿರೋಧಗಳನ್ನು ಎದುರಿಸಿ ಮುನ್ನಡೆಯಲಿದೆ- ಸಿಎಂ ಸಿದ್ದಾರಾಮಯ್ಯ

1947ರ ಸಾತಂತ್ರದ ನಂತರ ಬಿಹಾರ ವಿಧಾನಸಭೆಯಲ್ಲಿ ಬುದ್ಧಗಯಾ ಟೆಂಪಲ್ ಆಕ್ಟ್(ಬಿ.ಟಿ. ಆಕ್ಟ್ 1949 ಕಾಯ್ದೆ ಜಾರಿಗೆ ತಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಮಹಾಂತರನ್ನು (ಬ್ರಾಹ್ಮಣರು) ಒಳಗೊಂಡ ಬಿ.ಟಿ.ಎಂ.ಸಿ. (ಬುದ್ಧಗಯಾ ಟೆಂಪಲ್ ಮ್ಯಾನೇಜ್‌ಮೆಂಟ್ ಕಮಿಟಿ) ರಚಿಸಲಾಯಿತು. ಬೌದ್ಧ ಧರ್ಮಕ್ಕೆ ಸೇರಿದ ವಿಹಾರದ ಆಡಳಿತದಲ್ಲಿ ಬ್ರಾಹ್ಮಣರನ್ನು ಸೇರಿಸಿದ ಕ್ರಮಕ್ಕೆ ಬೌದ್ಧರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಬಿಹಾರ ಸರ್ಕಾರ ಕಮಿಟಿಯನ್ನು ಪುನರಚನೆ ಮಾಡಲಿಲ್ಲ. ಪರಿಣಾಮ ಬುದ್ಧಗಯಾ ಶ್ರದ್ಧಾಕೇಂದ್ರದ ಸುತ್ತ ದೇಗುಲಗಳು ತಲೆ ಎತ್ತಿವೆ. ಹಿಂದೂ ಆಚರಣೆಗಳು ಚಾಲ್ತಿಗೆ ಬಂದಿದೆ. ಇದರಿಂದ ಜಗತ್ತಿನ ಬೌದ್ಧರಿಗೆಲ್ಲ ಪವಿತ್ರ ಸ್ಥಳವಾಗಿರುವ ಬುದ್ಧಗಯಾದ ಪಾವಿತ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬುದು ಈಗ ವಿವಾದ ಸ್ವರೂಪ ಪಡೆದಿರುವ ವಿಷಯ. ಕೇಂದ್ರ ಸರ್ಕಾರದಿಂದ ಅನ್ಯಾಯ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಆಶಯದಂತೆ ಆಯಾ ಧರ್ಮಗಳ ಶ್ರದ್ಧಾ ಕೇಂದ್ರಗಳ ನಿರ್ವಹಣೆಯನ್ನು ಆಯಾ ಧರ್ಮಿಯರಿಗೆ ನೀಡಲಾಗಿದೆ. 1950 ಜನವರಿ 26ರಂದು ಸಂವಿಧಾನ ಜಾರಿಯಾದ ನಂತರ ಸಂವಿಧಾನದ ಕಲಂ 3ರ ಪ್ರಕಾರ ಅನಧರ್ಮಿಯರ ಹಸ್ತಕ್ಷೇಪ ತೆಗೆದು ಹಾಕಲಾಗಿದೆ. ಆದರೆ, ಬುದ್ದಗಯಾದಲ್ಲಿ ಮಾತ್ರ ಹಸ್ತಕ್ಷೇಪ ನಿಂತಿಲ್ಲ. ಪ್ರತಿಯೊಬ್ಬರಿಗೆ ಅವರವರ ಆಚರಣೆ, ಸ್ವಾತಂತ್ರ್ಯ ಹಾಗೂ ಧರ್ಮಪಾಲನೆಗೆ ಸಂವಿಧಾನದ ಕಲಂ 25, 26 ಮತ್ತು 29 ಅವಕಾಶ ಮಾಡಿಕೊಟ್ಟಿದೆ. ಆದರೆ, ಬುದ್ಧಗಯಾದಲ್ಲಿ ಸಂವಿಧಾನ ನೀಡಿರುವ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂಬುದು ಬೌದ್ಧ ಧರ್ಮಿಯರ ಆರೋಪ.

 

 

ಇದನ್ನೂ ನೋಡಿ : ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media

Donate Janashakthi Media

Leave a Reply

Your email address will not be published. Required fields are marked *