ಜೀವಾ ಆತ್ಮಹತ್ಯೆ ಪ್ರಕರಣ: ಸಿಸಿಬಿ ತನಿಖೆಗೆ ಆದೇಶ

ಬೆಂಗಳೂರು: ತನಿಖೆ ವೇಳೆ ಸಿಸಿಬಿ ಪೊಲೀಸರು ತನ್ನನ್ನು ಬೆತ್ತಲೆಗೊಳಿಸಿ, 25 ಲಕ್ಷ ರೂ.ಗೆ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದೆ.

ಭೋವಿ ನಿಗಮದ ಅಕ್ರಮದ ಕುರಿತು ತನಿಖೆ ವೇಳೆ ಈ ಕೃತ್ಯ ನಡೆದಿದ್ದು, ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ 34 ವರ್ಷದ ಜೀವಾ ಎಂಬಾಕೆ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜೀವಾ 11 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ತನಿಖೆ ವೇಳೆ ಪೊಲೀಸರ ಪೈಶಾಕಿಕ ಕೃತ್ಯವನ್ನು ಬಯಲಿಗೆ ಎಳೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದೆ.

ಇದನ್ನೂ ಓದಿ : ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯೋಧ

ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿತ್ತು. ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮಿ ವಿರುದ್ಧ ಮೃತಳ ಸಹೋದರಿ ಸಹ ಗಂಭೀರ ಆರೋಪ ಮಾಡಿದ್ದರು.

ಜೀವಾ ಪೀಠೋಪಕರಣಗಳ ಅಂಗಡಿ ನಡೆಸುತ್ತಿದ್ದು, ವಕೀಲೆ ಕೂಡ ಆಗಿದ್ದರು. ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಜೀವಾ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ಮಾರನೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಚಾರಣೆ ವೇಳೆ ಸೈನೈಡ್ ವಿಷ ಏನಾದರೂ ತಂದಿದ್ದೀರಾ ಎಂದು ತಪಾಸಣೆ ಮಾಡುವ ನೆಪದಲ್ಲಿ ಜೀವಾ ಅವರನ್ನು ಪೊಲೀಸರು ಬೆತ್ತಲೆಗೊಳಿಸಿದ್ದರು. ವಿಚಾರಣೆ ವೇಳೆ ಹಿಂಸೆ ನೀಡಿದೂ ಅಲ್ಲದೇ ಆಕೆಯ ಬೆತ್ತಲೆ ಫೋಟೊ ತೋರಿಸುವುದಾಗಿ ಬೆದರಿಸಿ 25 ಲಕ್ಷ ರೂ.ಗೆ ಡಿಮಾಂಡ್ ಮಾಡಿದ್ದರು ಎಂದು ಜೀವಾ ಡೆತ್ ನೋಟ್ ನಲ್ಲಿ ವಿವರಿಸಿದರು.

ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *