ದಹಾನು (ಎಸ್‌ಟಿ) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಎನ್‌ಡಿಎ ವಿರುದ್ಧ ಸಿಪಿಐ(ಎಂ) ಐತಿಹಾಸಿಕ ಗೆಲುವು

ಮಹಾರಾಷ್ಟ್ರ: ಪಾಲ್ಘರ್ ಜಿಲ್ಲೆಯ ದಹಾನು (ಎಸ್‌ಟಿ) ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ವಿನೋದ್ ನಿಕೋಲ್  ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಅವರು ದಾಖಲೆಯ 1,04,702 ಮತಗಳನ್ನು ಗಳಿಸಿದರು ಮತ್ತು ತೀವ್ರ ಪೈಪೋಟಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 5,347 ಮತಗಳಿಂದ ಸೋಲಿಸಿದರು. ದಹಾನು

ಈ ಕ್ಷೇತ್ರದಲ್ಲಿ ಸಿಪಿಐ (ಎಂ) 1978 ರಿಂದ ಸತತವಾಗಿ 10ನೇ ಬಾರಿಯೂ ಗೆಲುವು ಸಾಧಿಸಿದೆ. 2009 ರ ಮೊದಲು ಈ ಕ್ಷೇತ್ರವನ್ನು ಜವಾಹರ್‌ (ಎಸ್‌ಟಿ ಮೀಸಲು) ಎಂದು ಕರೆಯಲಾಗುತ್ತಿತ್ತು. ಕ್ಷೇತ್ರ ಮರುವಿಂಗಡಣೆಯ ನಂತರ ದಹಾನು ಕ್ಷೇತ್ರವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಫಲಿತಾಂಶಗಳಲ್ಲಿ ಬಿಜೆಪಿ-ಎನ್‌ಡಿಎಯ ಪ್ರಬಲ ಪ್ರದರ್ಶನವನ್ನು ಗಮನಿಸಿದರೆ ನಿಕೋಲ್ ಅವರ ಗೆಲುವು ವಿಶೇಷವಾಗಿ ಗಮನಾರ್ಹವಾಗಿದೆ.

ಇದನ್ನೂ ಓದಿ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ – ಸಿದ್ದರಾಮಯ್ಯ

ಆರ್‌ಎಸ್‌ಎಸ್-ಬಿಜೆಪಿಯ ಹಣಬಲ ಮತ್ತು ಕೋಮುವಾದಿ ಪಿತೂರಿಗಳ ವಿರುದ್ಧದ ಈ ಬೃಹತ್ ವಿಜಯದ ಶ್ರೇಯಸ್ಸು ದಹಾನು ಮತ್ತು ತಲಸರಿ ತಹಸಿಲ್‌ಗಳ ಜನರಿಗೆ ಸಲ್ಲುತ್ತದೆ ಎಂದು ಮಹಾರಾಷ್ಟ್ರ ಸಿಪಿಐ(ಎಂ) ರಾಜ್ಯ ಘಟಕ ತಿಳಿಸಿದೆ. ಸಾವಿರಾರು ಸಮರ್ಪಿತ ಸಿಪಿಐ(ಎಂ) ಮತ್ತು ಎಂವಿಎ ಕಾರ್ಯಕರ್ತರ ಅವಿರತ ಪ್ರಯತ್ನವನ್ನು ಶ್ಲಾಘಿಸಿದೆ. ಕಳೆದ ಐದು ವರ್ಷಗಳಲ್ಲಿ ಶಾಸಕರಾಗಿ ನಿಕೋಲ್ ಅವರ ಅನುಕರಣೀಯ ಕೆಲಸವೂ ಅವರ ಗೆಲುವಿನ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ. 

ಸಿಪಿಐ(ಎಂ) ನೇತೃತ್ವದ ನಿರಂತರ ಹೋರಾಟಗಳು ಮತ್ತು AIKS, CITU, AIDWA, DYFI ಮತ್ತು SFI ಸಂಘಟನೆಗಳ ನಿರಂತರ ಶ್ರಮದಿಂದಾಗಿ ಈ ಗೆಲುವು ಸ್ಮರಣೀಯ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಅಶೋಕ್‌ ಧವಳೆ ತಿಳಿಸಿದ್ದಾರೆ.  ದಹನುವಿನಲ್ಲಿ ನಡೆದ ಬೃಹತ್ ವಿಜಯಯಾತ್ರೆ  ಭಾಗವಹಿಸಿ ಅವರು ಮಾತನಾಡಿದರು ಈ ವೇಳೆ ವಿಜಯಿ ಅಭ್ಯರ್ಥಿ ವಿನೋದ್ ನಿಕೋಲ್, ಮರಿಯಮ್ ಧಾವಳೆ, ಕಿಸಾನ್ ಗುಜಾರ್, ಕಿರಣ್ ಗಹಲಾ, ರಡ್ಕಾ ಕಲಂಗಡ, ಲಕ್ಷ್ಮಣ ಡೊಂಬ್ರೆ, ಲಹಾನಿ ದೌಡಾ, ಚಂದ್ರಕಾಂತ್ ಘೋರ್ಖಾನ, ಸುನೀತಾ ಶಿಂಗಡ, ನಂದು ಹಡಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

ಇದನ್ನೂ ನೋಡಿ: ವಚನಾನುಭವ 20 | ಕಾಣದ ಠಾವಿನಲ್ಲಿ | ಮನುಷ್ಯನೊಳಗಿನ ಕಲ್ಮಷ ತೊಳೆದ ಬಸವಣ್ಣ – ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *