ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಹಾವು–ಚೇಳಿನ ಕಾಟ ಇದ್ದು, ಮೂಲಸೌಕರ್ಯದ ಕೊರತೆ ಇದೆ. ಕೂಡಲೇ ಇದನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು’ ಎಂದು ಕೋರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿರಂತರ ದೂರುಗಳು ಮತ್ತು ಪ್ರತಿಭಟನೆಗಳ ನಂತರ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಕ್ಯಾಂಪಸ್ಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಮೂಲಸೌಲಭ್ಯಗಳ ಕೊರತೆಯ ಕುರಿತು ವಿದ್ಯಾರ್ಥಿಗಳೊಟ್ಟಿಗೆ ಚರ್ಚೆ ನಡೆಸಿದರು.
“ಕಾಲೇಜು ಮತ್ತು ಹಾಸ್ಟೆಲ್‌ನ ಸ್ಥಿತಿ ಶೋಚನೀಯವಾಗಿದೆ, ಶುಚಿಯಾದ ಮತ್ತು ವ್ಯವಸ್ಥಿತವಾದ ಶೌಚಾಲಯಗಳಿಲ್ಲ, ವಿದ್ಯಾರ್ಥಿಗಳು ಇಡೀ ದಿನ ಶೌಚಾಲಯಕ್ಕೆ ಹೋಗುವುದಿಲ್ಲ, ಈ ಶೌಚಾಲಯ ಬಳಕೆಯಿಂದ ಸೋಂಕು ಉಂಟಾಗಿದೆ. ಮುಟ್ಟಾದ ವಿದ್ಯಾರ್ಥಿನಿಯರನ್ನು ಆರೈಕೆ ಮಾಡುತ್ತಿಲ್ಲ ಎಂಂದು ವಿದ್ಯಾರ್ಥಿಗಳು ಆರೋಪಿಸಿದರು.
ಇದನ್ನೂ ಓದಿ : ಲಂಚ, ವಂಚನೆ ಪ್ರಕರಣ : ಸಿಬಿಐ ತಕ್ಷಣವೇ ಗೌತಮ್ ಅದಾನಿ ಮೇಲೆ ಭ್ರಷ್ಟಾಚಾರದ ಕೇಸು ದಾಖಲಿಸಬೇಕು-ಸಿಪಿಐ(ಎಂ) ಆಗ್ರಹ
‘ಇಲ್ಲಿನ ವಸತಿನಿಲಯದಲ್ಲಿ ಮೆನುವಿನ ಪ್ರಕಾರ ಊಟ–ತಿಂಡಿ ನೀಡುತ್ತಿಲ್ಲ. ಊಟದ ಕೊಠಡಿಯಲ್ಲಿ ಫ್ಯಾನ್ ಹಾಗೂ ವಿದ್ಯುತ್ ಬಲ್ಬ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೊಠಡಿಗಳಲ್ಲಿ ಶಿಲೀಂದ್ರ ಬೆಳೆದ ಕಾರಣ ವಿದ್ಯಾರ್ಥಿನಿಯರು ಕೆಮ್ಮು, ಶೀತ, ಜ್ವರಕ್ಕೆ ತುತ್ತಾಗುತ್ತಿದ್ದಾರೆ. ವಸತಿನಿಲಯದ ನಿರ್ವಹಣೆ ಸಮರ್ಪಕವಾಗಿಲ್ಲ. ಶೌಚಾಲಯಗಳ ಮೇಲ್ಛಾವಣಿ ಕುಸಿದಿದ್ದು, ಕಟ್ಟಡವು ಶಿಥಿಲಾವಸ್ಥೆಯಿಂದ ಕೂಡಿದೆ’ ಎಂದು ಹೇಳಿದ್ದಾರೆ.
‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಸತಿನಿಲಯದ ಒಳಗೆ ಹಾಗೂ ಹೊರಗಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿವುದೂ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ತಿಳಿಸಿದ್ದಾರೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, “2021 ರಲ್ಲಿ ನವೀಕರಣಕ್ಕಾಗಿ 3.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ನನಗೆ ತಿಳಿಸಲಾಯಿತು. ಆದರೆ ಕಳೆದ ಮೂರು ವರ್ಷಗಳಲ್ಲಿ ಏನು ಕೆಲಸ ನಡೆದಿದೆ ಎಂದು ನನಗೆ ತಿಳಿದಿಲ್ಲ” ಎಂದು ಚೌಧರಿ ತಿಳಿಸಿದರು.
ಕುಡಿಯುವ ನೀರಿನ ಸೌಲಭ್ಯವಿಲ್ಲ ಮತ್ತು ತರಗತಿ ಕೊಠಡಿಗಳು ದಯನೀಯ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು. ಪಾರಿವಾಳಗಳ ವಾಸದ ಕಾರಣದಿಂದಾಗಿ ಕೊಠಡಿ ಗಬ್ಬು ನಾರುತ್ತಿದೆ. ಕಸದ ತೊಟ್ಟಿಗಳನ್ನು ದಿನಗಟ್ಟಲೆ ತೆರವು ಮಾಡಿಲ್ಲ, ಬೀದಿ ನಾಯಿಗಳು ಅಡ್ಡಾಡುತ್ತಿವೆ..’’ ಎಂದು ಹೇಳಿದರು.
ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಎಂ ಕಚೇರಿಗೆ ಪತ್ರ ಬರೆದಿದ್ದು, ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿರುವುದಾಗಿ ನಾಗಲಕ್ಷ್ಮಿ ತಿಳಿಸಿದ್ದಾರೆ.
ಇದನ್ನೂ ನೋಡಿ : ವಿಕ್ರಂಗೌಡ ಶೂಟೌಟ್ ಪ್ರಕರಣ – ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಮಾಜಿ ನಕ್ಸಲರ ಆಗ್ರಹJanashakthi Media