ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿಯೇ ಆರೆಸ್ಸೆಸ್ ಹೆಮ್ಮರವಾಗಿ ಬೆಳೆದಿದೆ: ಶಾಸಕ ಎಂ. ಸ್ವರಾಜ್

ಮಂಗಳೂರು : ದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ 2ನೆ ಅವಧಿಯ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದಾಗಿಯೇ ಇಂದು ದೇಶದಲ್ಲಿ ಸಂವಿಧಾನ ವಿರೋಧಿಯಾಗಿರುವ ಆರೆಸ್ಸೆಸ್ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ಕೇರಳದ ಮಾಜಿ ಶಾಸಕ ಎಂ. ಸ್ವರಾಜ್ ದೂರಿದ್ದಾರೆ.

ಸಿಪಿಎಂನ 24ನೆ ದ.ಕ. ಜಿಲ್ಲಾ ಸಮ್ಮೇಳನದ ಅಂಗವಾಗಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಆವರಣ ದಲ್ಲಿ ಮಂಗಳವಾರ ಆಯೋಜಿಸಲಾದ ಬಹಿರಂಗ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ಯುಪಿಎ ಸರಕಾರದ 2ಜಿ ಸ್ಪೆಕ್ಟಂ, ಕಾಮನ್‌ವೆಲ್ತ್ ಮೊದಾಲದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ನೊಂದು ಜನ ಬಿಜೆಪಿ ಯನ್ನು ಅಧಿಕಾರಕ್ಕೆ ತರುವಂತಾಯಿತು. ಕಾಂಗ್ರೆಸ್‌ನ ಆರ್ಥಿಕ ನೀತಿಗಳನ್ನೇ ಜಾರಿಗೊಳಿಸುತ್ತಿರುವ ಬಿಜೆಪಿ ಭ್ರಷ್ಟಾಚಾರ ವನ್ನು ಮುಂದುವರಿಸಿ, ಯುದ್ಧ ವಿಮಾನ ಖರೀದಿಯಲ್ಲಿನ ಭ್ರಷ್ಟಾಚಾರ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಎಷ್ಟು ಮುಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಆರ್ಥಿಕವಾದ ನೀತಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿಯೇ ಕಾಂಗ್ರೆಸ್‌ನ ನಾಯಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಾರೆ. ಕೇರಳದಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರ ನಡುವೆ ವ್ಯತ್ಯಾಸಗಳು ಕಾಣುತ್ತಿಲ್ಲ ಎಂದವರು ಹೇಳಿದರು.

ಇದನ್ನೂ ಓದಿ : ಟಾಟಾ ಸಾಮ್ರಾಜ್ಯದ ಬೆಳವಣಿಗೆ | ಬ್ರಿಟನ್ ಮತ್ತು ಭಾರತದಲ್ಲಿ ಬಂಡವಾಳದ ಉಗಮ, ಕಾರ್ಮಿಕ ವರ್ಗದ ಉದಯ – ಭಾಗ 3

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದ ಸಂವಿಧಾನದ ವೈಶಿಷ್ಟ್ಯವೆಂದರೆ ಸಮಾನವಾದ ಅವಕಾಶ, ಯಾವುದೇ ಸಮಾನವಾದ ಹಕ್ಕುಗಳನ್ನು ನೀಡುವುದಾಗಿದೆ. ಅದನ್ನು ಪಾಲಿಸಬೇಕೆಂಬುದು ಸಿಪಿಎಂ ಪಕ್ಷದ ನೀತಿ. ನಮ್ಮ ರಾಷ್ಟ್ರದ ಸಂವಿಧಾನ, ವೈವಿಧ್ಯತೆಯನ್ನು ಅಂಗೀಕರಿಸದ ಸಂಘಟನೆ ಆರೆಸ್ಸೆಸ್ ಆಗಿದ್ದು, 1949ರಲ್ಲಿ ಸಂವಿಧಾನ ರಚನಾ ಸಭೆಯ ಗ್ಯಾಲರಿಯಲ್ಲಿಯೂ ಆರೆಸ್ಸೆಸ್‌ನವರಿಗೆ ಪ್ರವೇಶ ನೀಡಬಾರದೆಂದು ಹೇಳಲಾಗಿತ್ತು. ಆದರೆ ಇಂದು ಭಾರತದ ಆಡಳಿತನ್ನು ನಿಯಂತ್ರಿಸುತ್ತಿರುವುದು ಖೇದಕರ. ಸಂವಿಧಾನವನ್ನು ಒಪ್ಪದ ಆರೆಸ್ಸೆಸ್ ಇಂದು ಇಷ್ಟು ದೊಡ್ಡ ಸಂಘಟನೆಯಾಗಿ ಹೇಗೆ ಬೆಳೆದಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಹೇಳಿದ ಅವರು, ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಈ ರೀತಿ ಸಮ್ಮೇಳನ ನಡೆಸುವ ಪರಿಪಾಠವಿಲ್ಲ. ಅದರಲ್ಲೂ ಬಿಜೆಪಿಯ ನಾಯಕರಿಗೆ ಪಕ್ಷದ ರಾಜಕೀಯ ನೀತಿ, ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಏನಿದ್ದರೂ ಆರೆಸ್ಸೆಸ್‌ನ ಆದೇಶಗಳನ್ನು ಪಾಲಿಸುವ ಏಜೆನ್ಸಿ ಎಂದವರು ಆರೋಪಿಸಿದರು.

ರಾಷ್ಟ್ರದಲ್ಲಿ ನಾವಿಂದು ಅತ್ಯಂತ ಸಂಕೀರ್ಣವಾದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಬಿಜೆಪಿ ಕೋಮುವಾದಿ ಅಜೆಂಡಾ ಮುಂದಿಟ್ಟು ಆಟವಾಡುತ್ತಿದೆ. ಜತೆಗೆ ತೀವ್ರವಾದ ಆರ್ಥಿಕ ಶೋಷಣೆಯ ನೀತಿಯನ್ನು ಮುಂದುವರಿಸುತ್ತಿದೆ. ನಮ್ಮ ರಾಷ್ಟ್ರ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಆದರೆ ಬಡತದಲ್ಲಿಯೂ ಮುಂಚೂಣಿಯಲ್ಲಿರುವುದು ಖೇದಕರ. 112 ಬಿಲಿಯನ್ ಬಡವರು ದೇಶದಲ್ಲಿದ್ದಾರೆ. ಇದು ಫ್ರಾನ್ಸ್‌ನ ಜನಸಂಖ್ಯೆಯ ದುಪ್ಪಟ್ಟಾಗಿದೆ. ನಮ್ಮ 68 ಮಿಲಿಯನ್ ಜನಸಂಖ್ಯೆ ಕೊಳಚೆ ನಿವಾಸಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ದಿನಕ್ಕೆ 4000 ಮಕ್ಕಳು ಪೌಷ್ಟಿಕ ಆಹಾರದಿಂದ ಬಳಲಿ ಸಾಯುತ್ತಿರುವುದೇ ಬಿಜೆಪಿಯ ಭಾರತ. ಬಡವರು ಬಡವರಾಗುತ್ತಲೇ ಸಾಗುತ್ತಿರುವ ಭಾರತದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲ್ಲೇ ಸಾಗುವ ಅಸಮಾನತೆಗೆ ಭಾರತ ಸಾಕ್ಷಿಯಾಗುತ್ತಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿ ಹೆಚ್ಚುತ್ತಿದೆ. ರೈಲ್ವೇ ಇಲಾಖೆ ಸೇರಿದಂತೆ ರೈಲ್ವೇ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿಯಿದ್ದು, ಈ ಗುತ್ತಿಗೆಯೆಂಬ ಶೋಷಣೆಯನ್ನು ಬಿಜೆಪಿ ಸರಕಾರ ಮುಂದುವರಿಸಿದೆ. ತೀವ್ರವಾದ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿದ್ದು, ಇದು ಬಿಜೆಪಿಯ ಆಧುನಿಕ ಭಾರತ ಆಡಳಿತವಾಗಿದ್ದು, ಶೋಷಣೆಯ ಪರಮಾವಧಿಯಾಗಿದೆ ಎಂದವರು ಹೇಳಿದರು.

ಪ್ರಸಕ್ತ ಸಂಸತ್ತಿನಲ್ಲಿ ಸಿಪಿಎಂ ಸ್ಥಾನ ಕಡಿಮೆ ಇರಬಹುದು. ಚುನಾವಣೆಯ ಫಲಿತಾಂಶ ತಾತ್ಕಾಲಿಕ. ಜನರ ಹೃದಯದಲ್ಲಿ ಪಕ್ಷದ ಸ್ಥಾನ ಶಾಶ್ವತವಾಗಿರುತ್ತದೆ. ಜರ್ಮನಿಯಲ್ಲಿ ಹಿಟ್ಲರನ್ನು ಪರಾಜಯಗೊಳಿಸಿದ ಪಕ್ಷವಾಗಿದೆ ಸಿಪಿಎಂ. ದಮನಿತರ, ಶೋಷಿತರ, ದುಡಿಯುವ ವರ್ಗದ ಆಶಾಕಿರಣ ಕೆಂಪು ಪತಾಕೆ ತಾತ್ಕಾಲಿಕವಲ್ಲ ಎಂದಿಗೂ ಶಾಶ್ವತವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ನೆರೆಯ ಶ್ರೀಲಂಕಾದ ಚುನಾವಣಾ ಫಲಿತಾಂಶ. ಇದೇ ರೀತಿ ಮುಂದೆ ದೇಶದ ಪ್ರಧಾನ ಪಕ್ಷವಾಗಿ ಸಿಪಿಎಂ ಮೂಡಿ ಬರಲಿದೆ ಎಂದವರು ಹೇಳಿದರು.

ಅಧ್ಯಕ್ಷತೆಯನ್ನು ಕೆ. ಯಾದವ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಮುಖಂಡರಾದ ಡಾ. ಕೆ. ಪ್ರಕಾಶ್, ವಸಂತ ಆಚಾರಿ, ಕೃಷ್ಣಪ್ಪ ಕೊಂಚಾಡಿ, ಸುಕುಮಾರ ತೊಕ್ಕೊಟ್ಟು, ಜಯಂತಿ ಶೆಟ್ಟಿ, ಬಿ.ಎಂ. ಭಟ್, ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಲ್, ಬಿ.ಕೆ. ಇಮ್ಮಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಕುಮಾರ್ ಬಜಾಲ್ ಸ್ವಾಗತಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ನೋಡಿ : ಒಕ್ಕೂಟ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಂದಿಟ್ಟ ಮೋದಿ ಸರ್ಕಾರ… Janashakthi Media

Donate Janashakthi Media

Leave a Reply

Your email address will not be published. Required fields are marked *