ಉಡುಪಿ: ಹಿರಿಯ ಪತ್ರಕರ್ತ, ಚಿಂತಕ, ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖರ್ (93) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಂಗಳೂರಿನ ಶಿವಭಾಗ್ ನಲ್ಲಿ ಕೆಲವು ವರ್ಷಗಳಿಂದ ನಿವೃತ್ತ ಜೀವನ ನಡೆಸುತ್ತಿದ್ದ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಜುಲೈ 17, 1932 ರಂದು ಉಡುಪಿ ಜಿಲ್ಲೆಯ ವೊಂಟಿಬೆಟ್ಟುವಿನಲ್ಲಿ ಜನಿಸಿದ ವಿಟಿಆರ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ದಲಿತರ ಧ್ವನಿಯಾಗಿ ಕೆಲಸ ಮಾಡಲು 1981 ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ಹಿರಿಯ
ಇದನ್ನೂ ಓದಿ: ಹೇರ್ ಡ್ರೈಯರ್ ಸ್ಪೋಟ; ಮಹಿಳೆಯ ಎರಡೂ ಕೈ ತುಂಡು
ದೇಶಾದ್ಯಂತ ದಲಿತ್ ವಾಯ್ಸ್ ಹಾಗು ಅದರಲ್ಲಿ ಪ್ರಕಟಿತ ಅವರ ಬರಹಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು. ಮೀಸಲಾತಿ ಹಾಗು ದಲಿತರ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ರಾಜಶೇಖರ್, ಬ್ರಾಹ್ಮಣ್ಯ ಹಾಗು ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದರು.
ಹತ್ತಾರು ಮಹತ್ವದ ಕೃತಿಗಳನ್ನು ರಚಿಸಿರುವ ಎ ಟಿ ರಾಜಶೇಖರ್ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ. ರಾಜಶೇಖರ್ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಮತ್ತು ಸಲೀಲ್ ಶೆಟ್ಟಿ ಆಮ್ಮ ಇಂಟರ್ ನ್ಯಾಷನಲ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಜಶೇಖರ್ ಅಂತಿಮ ಸಂಸ್ಕಾರ ಉಡುಪಿಯ ಓಂತಿಬೆಟ್ಟುವಿನಲ್ಲಿ ನಾಳೆ ಗುರುವಾರ ನಡೆಯಲಿದೆ.
ಇದನ್ನೂ ನೋಡಿ: ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ