ಬಾಂಬ್ ಇದೆ ಎಂದು ತನ್ನ ಆಟೋವನ್ನು ಪೊಲೀಸ್ ಠಾಣೆಗೆ ತಂದ ಚಾಲಕ

ಬೆಂಗಳೂರು: ಬಾಂಬ್ ಇದೆ ಎಂದು ಹೇಳಿ ಜಯನಗರದಲ್ಲಿ ಆಟೋವನ್ನು ಚಾಲಕಪೊಲೀಸ್ ಠಾಣೆಗೆ ತಂದಿರುವಂತಹ ಘಟನೆ ನಡೆದಿದೆ. ಆಟೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಗ್ ಇಟ್ಟು ಹೋಗಿದ್ದರು. ಬಾಂಬ್ ಸ್ಕ್ಯಾಡ್ ತಪಾಸಣೆ ಮಾಡಿದ್ದು, ಸದ್ಯ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.

ಜಯನಗರ ಪೊಲೀಸ್ ಠಾಣೆಗೆ ಬಾಂಬ್ ಇದೆ ಎಂದು ಆಟೋ ಚಾಲಕ ಬರುತ್ತಿದ್ದಂತೆ ತಕ್ಷಣ ಬಿಎಸ್‌ಎನ್ಎಲ್ ಟೆಲಿಫೋನ್ ಎಕ್ಸ್‌ಚೇಂಚ್ ಎದುರು ಇರುವ ಆಟದ ಮೈದಾನಕ್ಕೆ ತೆಗೆದುಕೊಂಡು ಬಂದಿದ್ದಾರೆ.

ಬಳಿಕ ಬಾಂಬ್ ಸ್ಟ್ಯಾಡ್ ಸಿಬ್ಬಂದಿಯಿಂದ ಪರಿಶೀಲನೆ ಮಾಡಿದಾಗ ಆಟೋದ ಹಿಂದಿನ ಸೀಟ್‌ನಲ್ಲಿ ಎರಡು ಚೀಲಗಳು ಪತ್ತೆ ಆಗಿದೆ. ಬ್ಯಾಗ್ ತೆರೆದು ನೋಡಿದಾಗ ಡಿಲ್ಲಿಂಗ್ ಮಷಿನ್ ಬಿಡಿ ಭಾಗಗಳು ಪತ್ತೆ ಆಗಿಲ್ಲ. ಯಾವುದೇ ರೀತಿಯ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಮಹಾರಾಷ್ಟ್ರ| ಯೋಗಿ ಆದಿತ್ಯನಾಥ್ ಘೋಷಣೆಯನ್ನು ಟೀಕಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ –

ಇನ್ನು ಬೆಂಗಳೂರಿನಲ್ಲಿ ಪದೇ ಪದೇ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದವು. ಸ್ಕೂಲ್ಸ್, ಹೋಟೆಲ್ಸ್ ಬಳಿಕ ಕಾಲೇಜ್‌ಗಳಿಗೂ ಬಾಂಬ್ ಬೆದರಿಕೆ ಬಂದಿದ್ದವು. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಭಯಗೊಂಡಿದ್ದರು.

ಇತ್ತೀಚೆಗೆ ನಗರದ ಬಿಎಂಎಸ್, ಎಂಎಸ್ ರಾಮಯ್ಯ ಹಾಗೂ ಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಕಾಲೇಜು ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನ ಕಾಲೇಜಿನ ಇಮೇಗೆ ಬಂದಿದ್ದ ಬೆದರಿಕೆ ಸಂದೇಶವನ್ನು ನೋಡಿ ಗಾಬರಿಯಾದ ಕಾಲೇಜು ಆಡಳಿತ ತಕ್ಷಣವೇ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಇದರಿಂದ ಸ್ಥಳಕ, ಡಯಿಸಿದ ಪೊಲೀಸರು ಮತ್ತು ಬಾಲ ನಿಷ್ಕ್ರಿಯ ದಳ ಇಡೀ ಕಾಲೇಜನ ಪರಿಶೀಲನ ಮಾಡಿದರು.

ಸಂಜೆ ಐದು ಗಂಟೆ ಒಳಗೆ ಕಾಲೇಜಿನಿಂದ ಹೊರ ಹೋಗದೆ ಇದ್ದರೆ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಉಲ್ಲೇಖಿಸಲಾಗಿತ್ತು. ಮೂರು ಗಂಟೆಗಳಿಗೂ ಅಧಿಕ ಕಾಲ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ನೋಡಿ: ಪ್ರತ್ಯೇಕ ‘ಆದಿವಾಸಿ ನಿಗಮ’ ಸ್ಥಾಪನೆಗೆ ಶೀಘ್ರವೇ ಕ್ರಮ : ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *