ಹರಿಯಾಣ: ರಾಜ್ಯದ ಭಿವಾನಿಯ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಐದು ದಿನಗಳ ಹಿಂದೆ ಅತ್ಯಂತ ಅಪಾಯಕಾರಿ ಕೃತ್ಯ ಎಸಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಕ್ಕಳು ಪಟಾಕಿಯಂತಹ ಬಾಂಬ್ ಅನ್ನು ತಮ್ಮ ಸೈನ್ಸ್ ಶಿಕ್ಷಕಿಯ ಕುರ್ಚಿಯ ಕೆಳಗೆ ಇರಿಸಿದ್ದಾರೆ.
ಈ ವೇಳೆ ಶಿಕ್ಷಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಆರೋಪಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ.
ವಾಸ್ತವವಾಗಿ ಈ ಘಟನೆ ಹರಿಯಾಣದ ಭಿವಾನಿ ಜಿಲ್ಲೆಯ ಬೋಪಾರಾ ಗ್ರಾಮದಲ್ಲಿ ನಡೆದಿದ್ದು. ಶಾಲೆಯಲ್ಲಿ 12ನೇ ತರಗತಿ ನಡೆಯುತ್ತಿತ್ತು. ಈ ವೇಳೆ ಮಕ್ಕಳು ಶಿಕ್ಷಕಿಯ ಕುರ್ಚಿಯ ಕೆಳಗೆ ಬಾಂಬ್ ಇಟ್ಟಿದ್ದರು. ಈ ಪಟಾಕಿಯಂತಹ ಬಾಂಬ್ ಸ್ಫೋಟಗೊಂಡ ನಂತರ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಇದನ್ನೂ ಓದಿ: ಶಾಲೆಗೆ ನೀಡಿದ ಸಿಎಸ್‌ಆರ್ ಅನುದಾನ ದುರ್ಬಳಕೆ; ಶಿಕ್ಷಣಾಧಿಕಾರಿ ಅಮಾನತು
ಒಂದು ಮಗು ಕುರ್ಚಿಯ ಕೆಳಗೆ ಬಾಂಬ್ ಅಳವಡಿಸಿದ್ದರೆ, ಇನ್ನೊಂದು ಮಗು ರಿಮೋಟ್‌ನಿಂದ ಬಟನ್ ಒತ್ತಿ ಸ್ಫೋಟಿಸಿತ್ತು ಎಂಬ ಆರೋಪ ಕೇಳಿ ಬಂದಿದೆ. ಘಟನೆ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಬುಧವಾರ ಶಿಕ್ಷಣ ಇಲಾಖೆ ತಂಡ ಶಾಲೆಗೆ ಆಗಮಿಸಿ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮಹಾತ ಮಾತನಾಡಿ, ಘಟನೆ ನಡೆದ ದಿನವೇ ಬಿಒ ಅವರನ್ನು ಸ್ಥಳಕ್ಕೆ ಕಳುಹಿಸಿದ್ದು, ಪ್ರಾಂಶುಪಾಲರಿಂದಲೂ ಉತ್ತರ ಕೇಳಲಾಗಿದೆ. ತಾವೇ ಶಾಲೆಗೆ ಹೋಗಿದ್ದು, ಬುಧವಾರ ಇಡೀ ತರಗತಿ ಹಾಗೂ ಗ್ರಾಮ ಪಂಚಾಯಿತಿಗೆ ಕರೆ ಮಾಡಲಾಗಿತ್ತು ಎಂದು ತಿಳಿಸಿದರು. ತರಗತಿಯ 15 ಮಕ್ಕಳಲ್ಲಿ 13 ಮಕ್ಕಳು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು. ಒಂದು ಮಗು ಬಾಂಬ್ ತಯಾರಿಸಿದ್ದು, ಮತ್ತೊಂದು ಮಗು ಅದನ್ನು ಕುರ್ಚಿಯ ಕೆಳಗೆ ಇಟ್ಟಿತ್ತು. ಇದ ಬೆನ್ನಲ್ಲೇ ಬೇರೊಂದು ಮಗು ರಿಮೋಟ್‌ನಿಂದ ಬಟನ್ ಒತ್ತಿದೆ.
ಮಕ್ಕಳನ್ನು ಶಾಲೆಯಿಂದ ತೆಗೆಯುವ ಬಗ್ಗೆ ಚರ್ಚೆ ನಡೆದಿದೆ ಎಂದು ನರೇಶ್ ಮಹಾತ ಹೇಳಿದರು. ಆದರೆ ಮನೆಯವರು ಲಿಖಿತವಾಗಿ ಕ್ಷಮಾಪಣಾ ಪತ್ರ ನೀಡಿದ್ದಾರೆ. ಈ ಘಟನೆ ನಡೆದ ದಿನ ಇಡೀ ತರಗತಿಯಿಂದ 13 ಮಕ್ಕಳು ಬಂದಿದ್ದರು, ಎಲ್ಲರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಅದೇ ವೇಳೆಗೆ ಮಹಿಳಾ ಶಿಕ್ಷಕಿಯೂ ಸಹ ಮಕ್ಕಳನ್ನು ಕ್ಷಮಿಸಿ ಈ ಮಕ್ಕಳು ಮಾಡೆಲ್ ಮಾಡಿ ಪ್ರಸ್ತುತಪಡಿಸಿದ್ದರೆ ನಾವೇ ಅವರನ್ನು ಸನ್ಮಾನಿಸುತ್ತಿದ್ದೆವು, ಆದರೆ ಈಗ ಈ ವಿಷಯವನ್ನು ವಾರ್ನಿಂಗ್ ನೀಡಿ ಇತ್ಯರ್ಥಪಡಿಸಿದ್ದಾರೆ. ಬಾಂಬ್ ಸ್ಫೋಟದ ನಂತರ, ಕುರ್ಚಿಯ ಕೆಳಗೆ ರಂಧ್ರವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂಬುವುದು ನೆಮ್ಮದಿಯ ವಿಚಾರ.
ಇದನ್ನ ನೋಡಿ: ಮಕ್ಕಳ ದಿನಾಚರಣೆ | ಡಾ. ಆರ್.ವಿ.ಭಂಡಾರಿಯವರ ‘ಮುದುಕನೂ ಹುಲಿಯೂ ಮಕ್ಕಳ’ ನಾಟಕದ ಓದುJanashakthi Media