ಮರಕುಂಬಿ ಜೀವಾವಧಿ ಶಿಕ್ಷೆ ವಿಧಿತರಿಗೆ ದಿಢೀರನೆ ಜಾಮೀನು ನೀಡಿದ ಹೈ ಕೋರ್ಟ ನಿರ್ಧಾರ ದುರದೃಷ್ಟಕರ

ಬೆಂಗಳೂರು :  ಮರಕುಂಬಿ ದಲಿತರ ಮೇಲಿನ ದೌರ್ಜನ್ಯದಿಂದ ಜೀವಾವಧಿ ಶಿಕ್ಷೆಗೊಳಗಾದ ಒಬ್ಬರನ್ನು ಹೊರತು ಪಡಿಸಿ 97 ಜನರಿಗೆ ಹೈಕೋರ್ಟ್ ಈ ಕೂಡಲೆ ಬೇಲ್ ನೀಡಿರುವುದು ದುರದೃಷ್ಟಕರವೆಂದು ಸಿಪಿಐಎಂ ಅಭಿಪ್ರಾಯ ಪಟ್ಟಿದೆ.

ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಪ್ರಕಟಣೆ ನೀಡಿದ್ದು,  ಇದು ದೌರ್ಜನ್ಯಕ್ಕೊಳಗಾದವರಿಗೆ ಮತ್ತು ಜಾತಿ ದೌರ್ಜನ್ಯ ಎದುರಿಸುವ ದಲಿತ ಸಮುದಾಯಗಳ ನಡುವೆ ಆತಂಕವನ್ನು ಮತ್ತು ಅಪರಾಧ ಎಸಗುವವರಿಗೆ ಧೈರ್ಯವನ್ನು ಉಂಟು ಮಾಡುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿಮರಕುಂಬಿ ದಲಿತ ದೌರ್ಜನ್ಯ ಕೇಸ್‌: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು!

ಹಲವು ಬಾರಿ ಜಾತಿದೌರ್ಜನ್ಯ ನಡೆಸಿದ ಸಾಮೂಹಿಕ ಧಾಳಿ ಎಸಗಿದ ಹಾಗು ಸಾಮೂಹಿಕ ದಾಳಿಯಲ್ಲಿ ತೊಡಗಿದವರ ರಕ್ಷಣೆಗೆ ಪೋಲೀಸರ ಮೇಲೆಯು ದಾಳಿಗೆ ಮುಂದಾದ ಅಪರಾಧಿಗಳಿಗೆ ಇಷ್ಠು ಬೇಗನೆ ಬೇಲ್ ನೀಡಿರುವುದು ಅನಿರೀಕ್ಷಿತವಾಗಿದೆ. ಈ ಘಟನೆಯಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವೀರೇಶಪ್ಪ ಸಾಕ್ಷಿ ನೀಡಿದ ಮಾರನೆ ದಿವಸ ಅನುಮಾನಾಸ್ಪದವಾಗಿ ಸಾವೀಗೀಡಾಗಿದ್ದರು.ಅದೇನೆ ಇದ್ದರೂ, ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಇನ್ನು ಮುಂದೆಯು ಕಾನೂನಾತ್ಮಕ ಹೋರಾಟವನ್ನು ಮುನ್ನಡೆಸಲು ಸಿಪಿಐಎಂ ಶ್ರಮಿಸುತ್ತದೆ ಎಂದು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *