ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿಯೂ ಬೆಳಿಗ್ಗೆಯಿಂದ ಬಿರುಸಿನಿಂದ ಮತದಾನ ಸಾಗುತ್ತಿದೆ.
ವಯೋವೃದ್ಧರು ಕುಡ ವ್ಹೀಲ್ ಚೇರ್ನಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿಯೂ ಬೆಳಿಗ್ಗೆ 11 ಗಂಟೆಯವರೆಗೂ ಉತ್ತಮ ರೀತಿಯಲ್ಲಿ ಮತದಾನವಾಗಿದೆ. 11 ಗಂಟೆ ವೇಳೆಗೆ ಒಟ್ಟು 26.33 ಶೇ. ಮತದಾನವಾಗಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. 11 ಗಂಟೆ ವೇಳೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 27.02 ಶೇ., ಶಿಗ್ಗಾಂವಿಯಲ್ಲಿ 26.01 ಶೇ. ಹಾಗೂ ಸಂಡೂರು 25.96 ಶೇ. ಮತದಾನವಾಗಿದೆ.
ಇದನ್ನೂ ಓದಿ: ಸಮ ಸಮಾಜದ ಕನಸುಗಳೂ, ಬುಲ್ಡೋಜರ್ ನ್ಯಾಯವೂ
ಕಣದಲ್ಲಿರುವ ಪ್ರಮುಖರು ಯಾರ್ಯಾರು?
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
- ಕಾಂಗ್ರೆಸ್ – ಸಿಪಿ ಯೋಗೇಶ್ವರ್
- ಎನ್ ಡಿ ಎ – ನಿಖಿಲ್ ಕುಮಾರಸ್ವಾಮಿ
- ಎಸ್ಡಿಪಿಐ – ಮುಹಮ್ಮದ್ ಫಾಸಿಲ್
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ
- ಕಾಂಗ್ರೆಸ್ – ಯಾಸೀರ್ ಖಾನ್ ಪಠಾಣ್
- ಬಿಜೆಪಿ – ಭರತ್ ಬೊಮ್ಮಾಯಿ
- ಕೆಆರ್ ಎಸ್ – ರವಿಕೃಷ್ಣಾ ರೆಡ್ಡಿ
ಸಂಡೂರು ವಿಧಾನಸಭಾ ಕ್ಷೇತ್ರ
- ಕಾಂಗ್ರೆಸ್ – ಇ ಅನ್ನಪೂರ್ಣ
- ಬಿಜೆಪಿ – ಬಂಗಾರು ಹನುಮಂತು
ಇದನ್ನೂ ನೋಡಿ: ಉಪನ್ಯಾಸ ಸರಣಿ ಉದ್ಘಾಟನೆ | ಡಾ. ಪುರುಷೋತ್ತಮ ಬಿಳಿಮಲೆ, ತೇಜಸ್ವಿನಿ ನಿರಂಜನ ಮಾತುಗಳು