ಮುಂಬೈ :ಎದರಾಳಿ ಪಕ್ಷದೊಂದಿಗೆ ಪರೋಕ್ಷವಾಗಿ ಒತ್ತಾಸೆಯಾಗಿ ನಿಂತಿರುವ ಅನೇಕ ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ತಾತ್ಕಾಲಿಕ ಗೇಟ್ ಪಾಸ್ ನೀಡಿದೆ. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಕಾಂಗ್ರೆಸ್
28 ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಬರೋಬ್ಬರಿ ಮುಂದಿನ ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಜರುಗಿಸಲಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ : ನರಗುಂದ | ಬಸ್ ಹತ್ತುವಾಗ ಕಾಲುಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಕಾಂಗ್ರೆಸ್‌ನಿಂದ ಅಮಾನತುಗೊಂಡ ನಾಯಕರು : ಚಂದ್ರಪಾಲ್ ಚೌಕ್ಸೆ, ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವ್, ಭರತ್ ಯೆರಮೆ, ಅಭಿಲಾಷ ಗವಟೂರೆ, ಪ್ರೇಮಸಾಗರ್ ಗನ್‌ವೀರ್, ಅಜಯ್ ಲಾಂಜೇವರ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಶಮಕಾಂತ್ ಸಾನೆರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಅವಿನಾಶ್ ಲಾಡ್, ಯಗ್ವಾಲ ಜಿಚ್ಕರ್, ರಾಜು ಜೋಡೆ, ಕಲ್ಯಾಣ್ ಬೋರಡೆ, ಅಜಯ್ ಲಾಂಜೇವರ್, ಹಂಸಕುಮಾರ್ ಪಾಂಡೆ; ಕಮಲ ವ್ಯಾವಹರೆ, ಮೋಹನರಾವ್ ದಾಂಡೇಕರ್, ಮಂಗಲ್ ವಿಲಾಸ್ ಭುಜ್ವಾಲ್, ಮನೋಜ್ ಶಿಂಧೆ, ಸುರೇಶ್ ಪಾಟೀಲ್ ಖೇಡೆ, ವಿಜಯ್ ಖಡ್ಸೆ, ಶಬೀರ್ ಖಾನ್, ರಾಜೇಂದ್ರ ಮುಖಾ ಅವರನ್ನು ಕಾಂಗ್ರೆಸ್ ಪಕ್ಷ ಮುಂದಿನ ಆರು ವರ್ಷ ಅಮಾನತು ಮಾಡಿ ಆದೇಶಿಸಿದೆ.