ಸಂವಿಧಾನ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಿ – ಎದ್ದೇಳು ಕರ್ನಾಟಕ ಆಗ್ರಹ

ಶಿಗ್ಗಾಂವಿ: ಸಂವಿಧಾನ ಉಳಿವಿಗಾಗಿ, ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಬೇಕು ಎಂದು ಹಿರಿಯ ವಕೀಲ ಅನೀಶ್‌ ಪಾಷಾ ಕರೆ ನೀಡಿದ್ದಾರೆ.

ಎದ್ದೇಳು ಕರ್ನಾಟಕದ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳು ಸೇರಿ ಆಯೋಜಿಸಿದ್ದ  ಪತ್ರಿಕಾಗೋಷ್ಟಿಯಲ್ಲಿ ಮಾತನಾಡತ್ತಾ “ಯಾಕೆಂದರೆ, ಈ ನೆಲದಲ್ಲಿ ಸಂತ ಶಿಶುನಾಳ ಷರೀಫರ ನಾಡು ಸೌಹಾರ್ದತೆಗೆ ಹೆಸರುವಾಸಿಯಾದ ನಾಡಲ್ಲಿ ಕೋಮುಧ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಮತದಾರರರಿಗೆ ಕರೆ ನೀಡಿದರು.

ಜನರಿಗೆ ಬೇಕಾಗಿರುವ ಯಾವುದೇ ಮೂಲ ಸೌಲಭ್ಯಗಳನ್ನು ಬಿಜೆಪಿ ನೀಡಿಲ್ಲ. ಕೇವಲ ತಳಸಮುದಾಯಗಳ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ಶೋಷಣೆ ಮತ್ತು ಕೋಮು ಬೆಂಕಿ ಹಚ್ಚುತ್ತಾ ಬಂದಿದೆ. ಹಲಾಲ, ಹಿಜಾಬ, ಆಜಾನ್, ಹುಬ್ಬಳ್ಳಿ ದರ್ಗಾ ಸ್ಥಳಾಂತರಿಸಿ ಹುಬ್ಬಳ್ಳಿ ಕೋಮುಗಲಬೆಗೆ ಹೀಗೆ ಅನೇಕ ಘಟನೆಗಳು ಬಿಜೆಪಿ ಹಾಗೂ ಸಂಘಪರಿವಾರದವರು ಸೇರಿ ನಡೆಸಿದ್ದಾರೆ. ಹಾಗಾಗಿ ಇವುಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಚಿಕ್ಕಮಗಳೂರು| ಕಾಡಾನೆಗಳ ಉಪಟಳ; ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ

ಮುಖಂಡ ಸೋಹೆಲ್ ಅಹ್ಮದ್ ಮಾತನಾಡಿ, ಸಂವಿಧಾನ ಉಳಿವಿಗಾಗಿ ನಾನು ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ನೀಡಿ ಜಾಗೃತ ಕರ್ನಾಟಕ ರಾಜಕೀಯ ಮುಮೆಂಟ್‌ನಲ್ಲಿ ತೊಡಗಿದ್ದೆನೆ. ಇಂದಿನ ಯುವಕರು ಧರ್ಮ, ರಾಜಕೀಯ ಧ್ವೇಷದ ದಳ್ಳೂರಿಗೆ ಸಿಲುಕಿ ಹಾದಿ ತಪ್ಪಿದ್ದಾರೆ ತಪ್ಪುತ್ತಿದ್ದಾರೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಾನತಯೇ ಸಂವಿಧಾನದ ಆಶಯವಾಗಿದೆ. ಆದರಾ, ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ದೇಸದ ನೆಲದಲ್ಲಿ ಸೌಹಾರ್ದತೆ ಇದೆ ಶಿಗ್ಗಾಂವ ಸಂತರ ನಾಡು ಕೋಮುದ್ವೇಷದಲ್ಲಿ ಇರುವುದು ಆತಂಕಕಾರಿಯಾಗಿದೆ. ರೈತರು ದೆಹಲಿ ಗಡಿಗಳಲ್ಲಿ ಪ್ರಾಣ ಕಳೆದುಕೊಂಡರು ನಾಡಿಗೆ, ದೇಶಕ್ಕೆ ಅನ್ನಕೊಡುವ ರೈತರನ್ನು ‘ಗಂಜಿಕೊಡುವ ಗಿರಾಕಿ’ ಎಂದು ಲೇವಡಿ ಮಾಡಿದರು. ಧ್ವೇಷ ರಾಜಕೀಯ ಮಾಡುವ ಬಿಜೆಪಿ ಪಕ್ಷ ಸರಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಜನಪರ ಆಡಳಿತ ನಡೆಸುತ್ತದೆ ಎಂದರು.

ಎದ್ದೆಳು ಕರ್ನಾಟಕ ಸಂಘಟನೆಯ ಚೆನ್ನಮ್ಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ನೀಡಿ ಸಭಲರಾಗಿ ಬದುಕಲು ಸಹಾಯ ಮಾಡಿದೆ. ಹಾಗಾಗಿ ನಾವೆಲ್ಲರೂ ಈ ಉಪಚುನಾವಣೆಯಲ್ಲಿ ಬೆಂಬಲ ನೀಡಿ ಕಾಂಗ್ರೆಸ್ ಗಲ್ಲಿಸೋಣ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎದ್ದೆಳು ಕರ್ನಾಟಕ, ಜಾಗೃತ ಕರ್ನಾಟಕ, ಮುಸ್ಲಿಂ ಬಾಂಧವ್ಯ ವೇದಿಕೆ ಹಾಗೂ ಜೀವಿಕ ಸಂಘಟನೆಯ ಮುಖಂಡರು ಹಾಜರಿದ್ದರು.

ಇದನ್ನೂ ನೋಡಿ: ಸಿದ್ದರಾಮಯ್ಯ ಸರ್ಕಾರ ವಕ್ಫ್ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲು ಸೋತಿದ್ದು ಹೇಗೆ? Janashakthi Media

Donate Janashakthi Media

Leave a Reply

Your email address will not be published. Required fields are marked *