ಗಂಗಾವತಿ: ನೇತ್ರದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ತಂದೆ

ಗಂಗಾವತಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ತನ್ನ ಪುತ್ರನ ಕಣ್ಣುಗಳನ್ನು ದಾನ ಮಾಡುವ ಮೂಲಕ, ತಂದೆಯೊಬ್ಬರು ಪುತ್ರನ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಾಜಿ ಗಣೇಶ್‌ನನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಮೆದುಳು ನಿಷ್ಕ್ರಿಯೆ ಆಗಿತ್ತು. ಪರಿಣಾಮ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.  ಮರಳಿ ಗಂಗಾವತಿಗೆ ಬರುವಾಗ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಬಳ್ಳಾರಿಯ ವಿಮ್ಸ್‌ನ ನಿತ್ಯ ಜ್ಯೋತಿ ಕಣ್ಣಿನ ವಿಭಾಗದ ತಂಡ ಕರೆಸಿ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವಕನ ಕಣ್ಣುಗಳನ್ನು ದಾನ ಪಡೆದಿದ್ದಾರೆ.

ಇದನ್ನೂ ಓದಿ: ಜಾತ್ರೆಗೆ ಬಂದಿದ್ದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ; ದೂರು ದಾಖಲು

ಅಂತಹ ಸಂದರ್ಭದಲ್ಲಿಯೂ ಮಗನ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದ ಪರಂಜ್ಯೋತಿಯವರ ಸಾಮಾಜಿಕ ಕಳಕಳಿ, ಹೃದಯವಂತಿಕೆ, ದುಃಖದಲ್ಲಿಯೂ ಮಾನವೀಯ ಧೈರ್ಯ ಮೆಚ್ಚಲೇಬೇಕು. “ವ್ಯಕ್ತಿ ನಿಧನವಾಗಿ ಆರು ಗಂಟೆಯೊಳಗೆ ಆತನ ಕಣ್ಣುಗಳನ್ನು ತೆಗೆದು ಸಂರಕ್ಷಣೆ ಮಾಡಿಟ್ಟರೆ, ಮತ್ತೊಬ್ಬರಿಗೆ ಅಳವಡಿಸಬಹುದು. ಈ ಯುವಕ ಮೃತಪಟ್ಟು ಕೇವಲ ಮೂರು ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕಣ್ಣುಗಳನ್ನು ತೆಗೆಯಲಾಗಿದೆ” ಎಂದು ನೇತ್ರ ತಜ್ಞ ಡಾ. ಹನುಮಂತಪ್ಪ ತಿಳಿಸದರು.

ಈ ಕಾರ್ಯಕ್ಕೆ ಡಾ. ಈಶ್ವರ ಸವಡಿ, ಡಾ. ಮಾದವಶೆಟ್ಟಿ ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್‌ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯಶ್ವರರಾವ್, ಕಾರ್ಯದರ್ಶಿ ಲ. ರಾಘವೇಂದ್ರ ಸಿರಿಗೇರಿ, ಸದಸ್ಯರಾದ ಲ. ಪ್ರಭುರೆಡ್ಡಿ ಹಾಗೂ ವೈದ್ಯರಾದ ಡಾ. ವೆಂಕಟೇಶ ಇತರರಿದ್ದರು.

ಇದನ್ನೂ ನೋಡಿ: ಮೋದಿಯವರ ನೀತಿ : ಹಣಕಾಸು ಕಾಯ್ದೆಗಳ ದುರ್ಬಳಕೆ, ಸ್ವತಂತ್ರ ಮಾಧ್ಯಮಗಳ ಮೇಲೆ ದಬ್ಬಾಳಿಕೆ- WAN -IFRA, IAPA ವರದಿ

Donate Janashakthi Media

Leave a Reply

Your email address will not be published. Required fields are marked *