ನ್ಯೂಹ್ಯಾಂಪ್ ಶೈರ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರಿ ಮುನ್ನಡೆ ಸಾಧಿಸಿದ್ದು, ಎರಡನೇ ಬಾರಿಗೆ ಯುಎಸ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಟ್ರಂಪ್ ಬೆಂಬಲಿಗರು ವಿಜಯೋತ್ಸವ ಆಚರಿಸಲು ಆರಂಭಿಸಿದ್ದಾರೆ. ಮತ್ತೊಂದೆಡೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಭಾಷಣ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
ಅಮೆರಿಕದ ಅಧ್ಯಕೀಯ ಚುನಾವಣೆ ಫಲಿತಾಂಶದಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ಗಿಂತ ತುಂಬಾ ಮುಂದಿದ್ದಾರೆ. ಇಲ್ಲಿಯವರೆಗೂ ಕಮಲಾ ಹ್ಯಾರಿಸ್ 224 ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ 267 ಮತಗಳನ್ನು ಪಡೆಯುವ ಮೂಲಕ ಮನ್ನಡೆ ಸಾಧಿಸಿದ್ದಾರೆ. ಮ್ಯಾಜಿಕ್ ನಂಬರ್ ತಲುಪಲು ಟ್ರಂಪ್ಗೆ ಕೇವಲ ಮೂರು ಸ್ಥಾನಗಳ ಅಗತ್ಯವಿದೆ. ಮತ ಎಣಿಕೆ ನಡೆಯುತ್ತಿದ್ದು, ಟ್ರಂಪ್ ಅಧ್ಯಕ್ಷರಾಗುವ ಅವಕಾಶಗಳು ಹೆಚ್ಚಿವೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು 51.2%ರಷ್ಟು ಮತಗಳು ಪಡೆದು ಮುನ್ನಡೆ ಸಾಧಿಸಿದ್ದರೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರು 47.4% ಮತಗಳನ್ನು ಪಡೆಯುವ ಮೂಲಕ ಹಿನ್ನಡೆಯಲ್ಲಿದ್ದಾರೆ.
ಅಮೆರಿಕದ ಅಧ್ಯಕೀಯ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಟ್ರಂಪ್ ಪರವಾಗಿ ಬಹಿರಂಗ ಪ್ರಚಾರ ಮಾಡಿರುವ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಜಾತ್ರೆಗೆ ಬಂದಿದ್ದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ; ದೂರು ದಾಖಲು
ವಾಷಿಂಗ್ಟನ್ನ ಏಳನೇ ಕಾಂಗ್ರೆಸ್ ಕೌಂಟಿಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಪ್ರಮೀಳಾ ಜಯಪಾಲ್ ಜಯಗಳಿಸಿದ್ದಾರೆ. ಪ್ರಮೀಳಾ ಯುಎಸ್ ಕಾಂಗ್ರೆಸ್ಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾದ ಮೂಲದ ಅಮೆರಿಕನ್ ಮಹಿಳೆ. ಆರೋಗ್ಯ ಸುಧಾರಣೆ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಅವರು ವೃತ್ತಿಯಿಂದ ವಕೀಲರಾಗಿದ್ದಾರೆ.
ಅಮೆರಿಕದ ಚುನಾವಣೆಯಲ್ಲಿ ವರ್ಜೀನಿಯಾದಲ್ಲಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ಗೆಲವು ಸಾಧಿಸಿದ್ದಾರೆ. ವರ್ಜೀನಿಯಾ ಮತ್ತು ಪೂರ್ವ ಕರಾವಳಿಯಿಂದ ಚುನಾಯಿತರಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ವರ್ಜೀನಿಯಾವನ್ನು ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆ ಎಂದು ಹೇಳಲಾಗುತ್ತದೆ. ಸುಹಾಸ್ ಸುಬ್ರಮಣ್ಯಂ ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಸೋಲಿಸಿದ್ದಾರೆ.
ಇದನ್ನೂ ನೋಡಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು Janashakthi Media