ಮಂಗಳೂರು: ಪ್ರತಿಷ್ಠಿತ ಅಮೆಜಾನ್ ಇ ಕಾಮರ್ಸ್ ಕಂಪನಿಗೆ 30 ಕೋಟಿ ವಂಚಿಸಿದ್ದ ಖತರ್ನಾಕ್ ವಂಚಕರನ್ನು ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದಿಂದ ಬಂದ ಇಬ್ಬರು ವ್ಯಕ್ತಿಗಳು ಪೊಲೀಸ್ ಬಲೆಗೆ ಬಿದಿ ದ್ದಾರೆ.
ಅಮೆಜಾನ್ಗೆ 30 ಕೋಟಿ ರೂಪಾಯಿಗಳ ವಂಚನೆ ಮಾಡಿದ ಆರೋಪ ಇಬ್ಬರ ಮೇಲಿದೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.
ಇದನ್ನೂ ಓದಿ: ‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ನಿಧನ, ಆತ್ಮಹತ್ಯೆ ಶಂಕೆ
ಆರೋಪಿಗಳು ಅಮೆಜಾನ್ನಲ್ಲಿ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು. ವಸ್ತುಗಳ ಡಿಲೇವರಿ ಪಡೆಯಲು ಟೈಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು. ವಸ್ತುವಿನ ಬಾಕ್ಸ್ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತ್ತಿದ್ದರು.
ವಸ್ತುಗಳು ದಲವರಿಯಾದ ಬಳಿಕ, ಅದರ ಮೇಲಿನ ಟಾಕಿಂಗ್ ಲೇಬಲ್ಗಳನ್ನು ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್ ಮೇಲೆ ಹಚ್ಚುತ್ತಿದ್ದರು. ನಂತರ ಟರ್ನ್ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ವಂಚಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ನೋಡಿ: ಪರ ಭಾಷಿಕರಿಗೆ ಕನ್ನಡ ಕಲಿಸುವ ಅಟೋ ಚಾಲಕ Janashakthi Media