ಬೆಂಗಳೂರು: “ಇಂದು ಭಾರತದ ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” ವಿಚಾರ ಸಂಕಿರಣವನ್ನು ಜನಶಕ್ತಿ ಮೀಡಿಯಾ ಆಯೋಜಿಸಿದೆ.
ಅಕ್ಟೋಬರ್ 20 (ಭಾನುವಾರ )ಬೆಂಗಳೂರಿನ ಸಂಪಂಗಿರಾಮನಗರದ ಸೂರಿ ಭವನದಲ್ಲಿ ಬೆಳಿಗ್ಗೆ 10.30 ಕರ್ಯಕ್ರಮ ನಡೆಯಲಿದೆ.
ಇದನ್ನು ಓದಿ : ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆ ನಡೆಸಿದ್ದ ಆರೋಪಿಗಳನ್ನು ಸನ್ಮಾನ: ಲಿಂಗಾಯತ ಸಮನ್ವಯ ವೇದಿಕೆ ಪ್ರತಿಭಟನೆ
“ಇಂದು ಭಾರತದ ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” ಕುರಿತು ದಿಕ್ಕೂಚಿ ಭಾಷಣವನ್ನು ಏಶ್ಯಾ ಕಾಲೇಜ್ ಆಫ್ ಜರ್ನಲಿಸಂ ಅಧ್ಯಕ್ಷರಾದ ಶಶಿ ಕುಮಾರ್ ಮಾಡಲಿದ್ದು, ಪತ್ರಕರ್ತರಾದ ಬಿ ಎಂ ಹನೀಫ್ ಮತ್ತು ನವೀನ್ ಸೂರಿಂಜೆ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.
ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚಾರ ಸಂಕಿರಣವನ್ನು ಯಶಸ್ವಿಯಾಗಿಸುವಂತೆ ಜನಶಕ್ತಿ ಮೀಡಿಯಾ ವಿನಂತಿಸಿದೆ.
ಇದನ್ನು ನೋಡಿ : ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸನ್ಮಾನ – ಸರ್ಕಾರ ಅವರ ಜಾಮೀನು ರದ್ದು ಪಡಿಸಲಿ – ಬಿಟಿ ವೆಂಕಟೇಶ್