ಬಿಜೆಪಿ ಟಿಕೆಟ್‌ ಹೆಸರಲ್ಲಿ 2 ಕೋಟಿ ರೂ. ವಂಚನೆ; ಸಚಿವ ಪ್ರಹ್ಲಾದ್‌ ಜೋಶಿ ಸಹೋದರನ ವಿರುದ್ಧ ಪೊಲೀಸ್‌ ಕೇಸ್‌ ದಾಖಲು!

ಬೆಂಗಳೂರು : ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಸಹೋದರ ಗೋಪಾಲ್‌ ಜೋಶಿ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ 2 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಸುನಿತಾ ಚೌಹಾಣ್‌ ಎಂಬುವವರು ದೂರು ನೀಡಿದ್ದಾರೆ.

ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗೋಪಾಲ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಸುನಿತಾ ಚೌಹಾನ್ ಅವರು ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿದೆ.

ದೂರಿನಲ್ಲಿ ಏನಿದೆ ?:

”ನನ್ನ ಪತಿ ದೇವಾನಂದ್‌ ಫುಲ್‌ಸಿಂಗ್‌ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ನಂತರ 2023 ರ ಚುನಾವಣೆಯಲ್ಲಿ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್‌ ಕೊಡಿಸುವುದಾಗಿ ಹೇಳಿ ಗೋಪಾಲ್‌ ಜೋಶಿ ಅವರು 25 ಲಕ್ಷ ರೂ. ಹಾಗೂ 5 ಕೋಟಿ ರೂ.ಗಳ ಚೆಕ್‌ ಅನ್ನು ಮುಂಗಡವಾಗಿ ಪಡೆದಿದ್ದರು,” ಎಂದು ಸುನಿತಾ ಚೌಹಾಣ್‌ ದೂರಿನಲ್ಲಿ ಹೇಳಿದ್ದಾರೆ.

ಅಥಣಿಯಲ್ಲಿಎಂಜಿನಿಯರ್‌ ಆಗಿದ್ದ ಶೇಖರ್‌ ನಾಯಕ್‌ ಎಂಬುವರ ಮೂಲಕ ಗೋಪಾಲ್‌ ಜೋಶಿ ಅವರ ಪರಿಚಯವಾಗಿತ್ತು. ಗೋಪಾಲ್‌ ಜೋಶಿ ಅವರು ಸೂಚಿಸಿದಂತೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಅವರ ಸಹೋದರಿ ವಿಜಯಲಕ್ಷ್ಮಿ ಅವರ ಮನೆಗೆ ಹಣ ಹಾಗೂ ಚೆಕ್‌ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆಗ ಸಹೋದರಿಯ ಮನೆಯಲ್ಲೇ ಇದ್ದ ಗೋಪಾಲ್‌ ಜೋಶಿ, ಕೇಂದ್ರ ಸಚಿವ ಅಮಿತ್‌ ಷಾ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ಮಾತನಾಡಿದಂತೆ ನಟಿಸಿದ್ದರು. ಅಲ್ಲದೆ, ತಮ್ಮ ಪತಿಗೆ ಬಿಜೆಪಿ ಟಿಕೆಟ್‌ ಖಚಿತವಾಗಿರುವುದಾಗಿ ಹೇಳಿ ಹಂತ ಹಂತವಾಗಿ 2 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ಸುನಿತಾ ಅವರು ಆರೋಪಿಸಿದ್ದಾರೆ.

ಟಿಕೆಟ್ ಸಿಗದೆ ಇದ್ದಾಗ ನೀಡಿದ್ದ ಹಣ ವಾಪಸ್ ಕೇಳಲು ಹೋದಾಗ, “ನನಗೆ 200 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಬಿಲ್ ಬರಲಿದೆ, ಎಂದು ಸದ್ಯಕ್ಕೆ 1ಕೋಟಿ 75 ಲಕ್ಷ ರೂ. ಕೊಡಿ ನಂತರ ಎಲ್ಲ ಹಣವನ್ನು ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎಂದು ನಂಬಿಸಿ ಒಟ್ಟು ಎರಡು ಕೋಟಿ ರೂಪಾಯಿ ಪಡೆದಿದ್ದಾರೆ. ಮುಂದೆ ಚುನಾವಣೆಗೆ ನಿಂತರೆ ಖರ್ಚಿಗೆ 5 ಕೋಟಿ ನೀಡುವುದಾಗಿ ಭರವಸೆ ನೀಡಿದ್ದರು”, ಎಂದು ಸುನೀತಾ ಚವ್ಹಾಣ್ ತಿಳಿಸಿದ್ದಾರೆ.

ಹಣ ವಾಪಾಸ್ ಕೇಳಲು ಹೋದಾಗ ಗೋಪಾಲ ಜೋಶಿಯವರು ಚೆಕ್ ವಾಪಾಸ್ ನೀಡಿದರು. ಬಳಿಕ ಕರೆಗೂ ಸಿಗದೇ ಇದ್ದಾಗ, ಅವರ ಮಗ ಅಜಯ್ ಜೋಶಿ ಹಣಕ್ಕೆ ನಾನೇ ಜಾಮೀನು ಎಂದು ಪ್ರತೀ ಬಾರಿಯೂ ಭರವಸೆ ನೀಡಿ ಕಳುಹಿಸುತ್ತಿದ್ದರು. ಗೋಪಾಲ ಜೋಶಿ ಕರೆ ಸ್ವೀಕರಿಸದಿದ್ದಾಗ ಅಜಯ್ ಜೋಶಿಯೇ ವಾಪಾಸ್ ಕರೆ ಮಾಡಿ ಹಣವನ್ನು ನಾನೇ ನೀಡುತ್ತೇನೆ ಎಂದು ಭರವಸೆ ನೀಡುತ್ತಿದ್ದರು ಎಂದು ಸುನೀತಾ ತಿಳಿಸಿದ್ದಾರೆ.

ಹಣ ವಾಪಾಸ್ ಕೇಳಲು ಹೋದಾಗ ಗೋಪಾಲ ಜೋಶಿಯವರು ಚೆಕ್ ವಾಪಾಸ್ ನೀಡಿದರು. ಬಳಿಕ ಕರೆಗೂ ಸಿಗದೇ ಇದ್ದಾಗ, ಅವರ ಮಗ ಅಜಯ್ ಜೋಶಿ ಹಣಕ್ಕೆ ನಾನೇ ಜಾಮೀನು ಎಂದು ಪ್ರತೀ ಬಾರಿಯೂ ಭರವಸೆ ನೀಡಿ ಕಳುಹಿಸುತ್ತಿದ್ದರು. ಗೋಪಾಲ ಜೋಶಿ ಕರೆ ಸ್ವೀಕರಿಸದಿದ್ದಾಗ ಅಜಯ್ ಜೋಶಿಯೇ ವಾಪಾಸ್ ಕರೆ ಮಾಡಿ ಹಣವನ್ನು ನಾನೇ ನೀಡುತ್ತೇನೆ ಎಂದು ಭರವಸೆ ನೀಡುತ್ತಿದ್ದರು ಎಂದು ಸುನೀತಾ ತಿಳಿಸಿದ್ದಾರೆ.

ನಂತರ ಹಣ ವಾಪಸ್ ಕೇಳಲು ವಿಜಯಲಕ್ಷ್ಮಿಯವರ ಮನೆಗೆ ಹೋದಾಗ, ವಿಜಯ ಲಕ್ಷ್ಮಿ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಲ್ಲದೆ ಜಾತಿ ನಿಂದನೆ ಕೂಡಾ ಮಾಡಿದ್ದಾರೆ ಎಂದು ಸುನೀತಾ ಚವ್ಹಾಣ್ ದೂರಿನಲ್ಲಿ ಆರೋಪಿದ್ದಾರೆ.

Donate Janashakthi Media

One thought on “ಬಿಜೆಪಿ ಟಿಕೆಟ್‌ ಹೆಸರಲ್ಲಿ 2 ಕೋಟಿ ರೂ. ವಂಚನೆ; ಸಚಿವ ಪ್ರಹ್ಲಾದ್‌ ಜೋಶಿ ಸಹೋದರನ ವಿರುದ್ಧ ಪೊಲೀಸ್‌ ಕೇಸ್‌ ದಾಖಲು!

  1. ತಾನೊಬ್ಬ ದೊಡ್ಡ ಸತ್ಯ ಹರಿಶ್ಚಂದ್ರ ಊರ ಉಸಾಬರಿ ಎಲ್ಲಾ ಗಂಟೆ ಬಾರಿಸಿಕೊಂಡು ಓಡಾಡುವ ಪೇಶ್ವೆ ವಯ್ಯಾರಯ್ಯ

Leave a Reply

Your email address will not be published. Required fields are marked *