ಕತ್ತೆ ಹಾಲು ಮಾರಾಟ 10 ಕೋಟಿ ರೂ ವಂಚನೆ

ವಿಜಯನಗರ :ಆಂಧ್ರಪ್ರದೇಶ ಮೂಲದ ಖಾಸಗಿ ಕಂಪನಿ ಜೆನ್ನಿಮಿಲ್ಕ್ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ವ್ಯಕ್ತಿಗಳಿಗೆ ೧೦ ಕೋಟಿ ರೂ.ಗೂ ಅಧಿಕ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ರೈತರಿಂದ ಲಕ್ಷಾಂತರ ರೂಪಾಯಿ ಪಡೆದು ಕತ್ತೆ ಮಾರಾಟ ಮಾಡಿ ಅವರಿಂದಲೇ ಹೆಚ್ಚಿನ ಬೆಲೆಗೆ ಕತ್ತೆ ಹಾಲು ಖರೀದಿಸುವ ಭರವಸೆ ನೀಡಿ ವಂಚಿಸಿದ ಜೆನ್ನಿಮಿಲ್ಕ್ ಕಂಪನಿಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು ೧೦ ಕೋಟಿ ರೂ.ಗೂ ಅಧಿಕ ವಂಚನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಎಂಡಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೇದಯಪಾಳ್ಯಂ ಗ್ರಾಮದ ನೂತಲಪಾಟಿ ಮುರಳಿ(೪೩), ಕಂಪನಿಯ ವ್ಯವಸ್ಥಾಪಕ ಕಡಪ ಜಿಲ್ಲೆಯ ಗಾಳಿವೀಡು ಗ್ರಾಮದ ಕಾವಲಪಲ್ಲಿ ಉಮಾಶಂಕರ ರೆಡ್ಡಿ(೩೩), ಮತ್ತು ಕಂಪನಿಯ ಸೂಪರ್ ವೈಸರ್ ಕಡಪ ಜಿಲ್ಲೆ ಪೋರ್ಮಾಮಿಲ್ಲ ಮಂಡಲಂನ ಸೈಯದ್ ಮಹಮ್ಮದ್ ಗೌಸ್(೨೭) ಅವರನ್ನು ಬಂಧಿಸಲಾಗಿದೆ.

ಕಂಪನಿಯ ಎಂ.ಡಿ ನೂತಲಪಾಟಿ ಮುರುಳಿ , ವ್ಯವಸ್ಥಾಪಕ ಉಮಾಶಂಕರ್ ರೆಡ್ಡಿ ಮತ್ತು ಕಂಪನಿಯ ಸೂಪರ್‌ವೈಸರ್ ಸೈಯದ್ ಮಹಮ್ಮದ್ ಗೌಸ್ , ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಂಪನಿಯು ಕತ್ತೆ ಸಾಕಾಣಿಕೆ ಮತ್ತು ಅದರ ಹಾಲನ್ನು ಪವಾಡ ಔಷಧೀಯ ಉತ್ಪನ್ನ ಎಂದು ವ್ಯಾಪಾರ ಮಾಡುವ ಮೂಲಕ ಭಾರಿ ಲಾಭದ ಭರವಸೆ ನೀಡಿ ಸಾರ್ವಜನಿಕರಿಂದ ಅಪಾರ ಹಣವನ್ನು ಸಂಗ್ರಹಿಸಿದ್ದಾರೆ

ಆಂಧ್ರಪ್ರದೇಶದ ಜೆನ್ನಿಮಿಲ್ಕ್ ಕಂಪನಿಯು ಇತ್ತೀಚೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶಾಖೆಯನ್ನು ತೆರೆದಿದೆ ಮತ್ತು ಕತ್ತೆ ಸಾಕಣೆ ಪ್ರಾರಂಭಿಸಲು ೫೦೦ ರೂ.ಗಳ ಬಾಂಡ್ ಪೇಪರ್‌ನಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವಂತೆ ಜನರನ್ನು ಒಪ್ಪಿಸಿದೆ. ಒಪ್ಪಂದದಂತೆ ೩ ಲಕ್ಷ ರೂ.ಗೆ ಮೂರು ಹೆಣ್ಣು ಕತ್ತೆಗಳನ್ನು ಕಂಪನಿ ನೀಡಿದೆ.
ಒಂದು ಕತ್ತೆ ಒಂದು ಲಕ್ಷಕ್ಕೆ ಮಾರಾಟವಾಗಿದೆ.

ಸೆಪ್ಟೆಂಬರ್ 19ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದುವರೆಗೆ ೩೧೮ ಜನ ವಂಚನೆಗೊಳಗಾದ ರೈತರು ದೂರು ನೀಡಿದ್ದಾರೆ. ಕಂಪನಿಗೆ ಸೇರಿದ ೫ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *