ಮನೆ ಮಾರಾಟ ಮಾಡಲು ಒಪ್ಪದ ತಾಯಿ ಮಗನ ಮೇಲೆ ಗೂಂಡಾಗಿರಿ; ಮನೆ ನೆಲಸಮ ಮಾಡಿದ ಪುಡಿ ರೌಡಿಗಳು

ಬೆಂಗಳೂರು: ಮನೆ ಮಾರಾಟ ಮಾಡಲು ಒಪ್ಪದ ತಾಯಿ ಮಗನ ಮೇಲೆ ಪುಡಿ ರೌಡಿಗಳು ಗೂಂಡಾಗಿರಿ ಮಾಡಿದ್ದಲ್ಲದೇ ರಾತ್ರೋ ರಾತ್ರಿ ಆ ಮನೆಯನ್ನು ನೆಲಸಮ ಮಾಡಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರೌಡಿಗಳು ನಗರದ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಜಯಲಕ್ಷ್ಮಿ ಎಂಬವರ ಮನೆಯನ್ನು ರಾತ್ರೋ ರಾತ್ರಿ ನೆಲಸಮ ಮಾಡಿದ್ದು, ಮನೆ ಖಾಲಿ ಮಾಡದ್ದಕ್ಕೆ ತಾಯಿ ಮಗನ ಹಲ್ಲೆ ಮಾಡಿ ಅವರ ಕಣ್ಮುಂದೆಯೇ ಮನೆಯನ್ನು ನೆಲಸಮ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಾರಾಟ

ಸ್ಥಳೀಯ ಪುಂಡರು ರೌಡಿಸಂ ಮಾಡಿ ಮನೆ ಖಾಲಿ ಮಾಡುವಂತೆ ಕಳೆದ ಹಲವು ದಿನಗಳಿಂದ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಆದರೆ ತಾಯಿ ಮತ್ತು ಮಗ ಒಪ್ಪದಿದ್ದಕ್ಕೆ ಮುಂಜಾನೆಯಷ್ಟರಲ್ಲಿ ಮಹಿಳೆಯ ಮನೆಯನ್ನು ನೆಲಸಮ ಮಾಡಿದ್ದಾರೆ. ಇದರಿಂದ ಆ ತಾಯಿ ಮತ್ತು ಮಗ ಬೀದಿ ಪಾಲಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಕಣ್ಣೀರು ಹಾಕಿದ್ದಾರೆ. ಮಾರಾಟ

ಇದನ್ನೂ ಓದಿ: ಸಂವಹನ ಸೇತುವೆಗಳೂ ಭಾಷಾ ಸೂಕ್ಷ್ಮತೆಗಳೂ ವಿಶಾಲ ಸಮಾಜದೊಡನೆ ಸಂವಾದಿಸುವಾಗ ಸಂವೇದನಾಶೀಲ ಭಾಷೆ ಬಳಸುವುದು ಅತ್ಯ‍ವಶ್ಯ  

ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಜಯಲಕ್ಷ್ಮಿ ಎಂಬುವರು ದೂರು ನೀಡಿದ್ದು, ಜಯಲಕ್ಷ್ಮಿ ಮತ್ತವರ ಕುಟುಂಬ ಮಲ್ಲೇಶ್ವಂರನ 18ನೇ ಕ್ರಾಸ್‌ನಲ್ಲಿ ಕಳೆದ 45 ವರ್ಷಗಳಿಂದ ವಾಸವಿದ್ದರು. ಕಳೆದ ಒಂದು ತಿಂಗಳಿನಿಂದ ಮನೆ ಖಾಲಿ ಮಾಡ್ಕೊಂಡು‌ ಹೋಗಬೇಕು ಎಂದು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಬುಲ್ಡೋಜರ್ ತಗೊಂಡು‌ ಬಂದು‌ ಮನೆಯನ್ನು ನೆಲಸಮ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮಾರಾಟ

ಅಕ್ಟೋಬರ್ 7ರಂದು ಬೆಳಗ್ಗೆ 4-5 ಗಂಟೆಯ ಸುಮಾರಿಗೆ 40-50 ಜನರ ಗುಂಪು ಬಂದು ಮಕ್ಕಳು, ಮೊಮ್ಮಕ್ಕಳ ಕತ್ತಿಗೆ ಲಾಂಗ್, ಮಚ್ಚು ಇಟ್ಟು ಬೆದರಿಕೆ ಹಾಕಿದ್ದಲ್ಲದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನು ಜೈ ಕಿಶನ್, ಪ್ರತಾಪ್, ಚಿನ್ನಬಾಬು ಕುಮ್ಮಕ್ಕಿನಿಂದ ಮಾಡಲಾಗಿದೆ ಎಂದು ಆರೋಪ ಮಾಡಿದ್ದು, ಮಗನ ಕೈಯನ್ನ ಹಿಂದಕ್ಕೆ ಕಟ್ಟಿ,  ಕೈಕಾಲುಗಳ‌ ಮೇಲೆ 10-15 ಜನರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಮನೆಯ ಸಾಮಾಗ್ರಿಗಳು, ಚಿನ್ನಾಭರಣವನ್ನ ದೋಚಿದ್ದಾರೆ ಎಂಬ ವಿಚಾರವನ್ನು ಉಲ್ಲೇಖ ಮಾಡಲಾಗಿದ್ದು, ಗಾಯಗೊಂಡವರಿಗೆ ಕೆ.ಸಿ ಜನರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಮನೆಗೆ ಅಕ್ರಮವಾಗಿ ನುಗ್ಗಿದವರಿಗೂ ನಿವೇಶನಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದ್ದು, 40-45 ಜನರು ಮನೆಗೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ. ಮನೆಯಲ್ಲಿ ನನ್ನ, ಮಕ್ಕಳು,‌ ಮೊಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆಂದು ಜಯಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಪ್ರಾಣ ಬೆದರಿಕೆ ಹಾಕಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೆ ಕಳೆದುಕೊಂಡಿರುವ ಸಂತ್ರಸ್ತೆ ಜಯಲಕ್ಷ್ಮಿ ಅವರು, ನಾನು ಮತ್ತು ಗಂಡ ಗಣೇಶ್ ಹೋಟೆಲ್‌ನಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡ್ತಿದ್ದೀವಿ. ಹೀಗಾಗಿ ಹೋಟೆಲ್ ಮಾಲೀಕರು ನಮಗೆ ಈ ಮನೆ ಕೊಟ್ಟಿದ್ರು. ಬದುಕು ಕಟ್ಟಿಕೊಳ್ಳಿ ಎಂದು ಈ ಮನೆಯನ್ನ ಕೊಟ್ಟಿದ್ರು. ಕಳೆದ 45 ವರ್ಷಗಳಿಂದ ಇದೇ ಮನೆಯಲ್ಲಿ ನಾವು ವಾಸ ಮಾಡ್ತಿದ್ವಿ. ನಮಗೆ ಮನೆ ಕೊಟ್ಟೋರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ನನ್ನ ಗಂಡನೂ ಕೆಲ ವರ್ಷದ ಹಿಂದೆ ಮೃತ ಪಟ್ಟಿದ್ದಾರೆ. ಈ ಜಾಗದ ಮೇಲೆ ಕೆಲವರ ಕಣ್ಣು ಬಿದ್ದಿದೆ. ಇದನ್ನ ವಶಪಡಿಸಲು ಈ ರೀತಿಯಾಗಿ ಬಂದು ಬೆದರಿಸಿದ್ದಾರೆ. ಒಪ್ಪದಿದ್ದಾಗ ಗುಂಪುಗೂಡಿ ಬಂದು‌ ನೆಲಸಮ ಮಾಡಿದ್ದಾರೆಂದು ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ಅಪರಾಧಿಗಳನ್ನು ಕಂಡು ಹಿಡಿದು ಕ್ರಮ ಕೈಗೊಳ್ಳುತ್ತಾರಾ ಇಲ್ಲವೇ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ನೋಡಿ: ಹೇಗೆ ಬರೆಯಲಿ ನಾ ಕವಿತೆ…? ಕೆ.ಮಹಾಂತೇಶ್Janashakthi Media

Donate Janashakthi Media

Leave a Reply

Your email address will not be published. Required fields are marked *