ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ನೀಡಬೇಕಾದ ಶುಚಿ ಸಂಭ್ರಮ ಕಿಟ್ 2024-25 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕೈದು ತಿಂಗಳಿಂದ ನೀಡದೆ ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಎಸ್ಎಫ್ಐ ಜಿಲ್ಲಾ ಸಮಿತಿ ಸಭೆಯ ನಂತರ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದರು.
ಶೀಘ್ರವಾಗಿ ಶುಚಿ ಸಂಭ್ರಮ ಕಿಟ್ ವಿತರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅನೇಕ ಬಾರಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಅಧಿಕಾರಿಗಳು ತಿಂಗಳಗಳು ಕಳೆದರು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿದೆ ನಾಳೆ ಬರುತ್ತವೆ ಎಂದು ದಿನಗಳನ್ನು ಹೊತ್ತಿಕೊಳ್ಳುತ್ತಾ ಬಂದರು ಈವರೆಗೂ ಕಿಟ್ ವಿತರಣೆ ಮಾಡಲಿಲ್ಲ.
ಪ್ರತಿ ತಿಂಗಳು ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, 2 ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, 2 ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಪೌಡರ್ ಇರುವ ಶುಚಿ ಸಂಭ್ರಮ ಕಿಟ್ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದು ಕಿಟ್ ವಿತರಣೆ ಮಾಡಲಾಗುತ್ತಿತ್ತು ಆದರೆ 2024-25 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕೈದು ತಿಂಗಳು ಕಳೆದರು ಈವರೆಗೂ ವಿದ್ಯಾರ್ಥಿ ಕಿಟ್ ವಿತರಣೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಯಾವುದೇ ವಿಳಂಬವಿಲ್ಲದೆ ನಾಲ್ಕು ತಿಂಗಳ ಮುಂಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಇದನ್ನು ಓದಿ : ಶಾಲಾ ಶುಲ್ಕ ಪಾವತಿಸಿಲ್ಲ ಎಂದು 100 ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ಕೂರಿಸಿದ ಸ್ಕೂಲ್ ಮ್ಯಾನೇಜರ್
ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅಭ್ಯಾಸಕ್ಕಾಗಿ ವಸತಿ ನಿಲದ ಆಸರೆಯೊಡ್ಡಿ ವಿದ್ಯಾರ್ಥಿಗಳು ಬಂದಿರುತ್ತಾರೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಬೇರೆ ಬೇರೆ ಇಲಾಖೆಗಳ ರೀತಿಯಲ್ಲಿ ವಿಳಂಬ ಮಾಡದೆ ಮುಂಚಿತವಾಗಿ ವಿತರಣೆ ಮಾಡಬೇಕು ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಎಸ್ಎಫ್ಐ ಒತ್ತಾಯಿಸುತ್ತದೆ.
ಬಡ ವಿದ್ಯಾರ್ಥಿಗಳ ಸಣ್ಣಪುಟ್ಟ ಅನುದಾನದ ಶುಚಿ ಕಿಟ್ ನೀಡಲು ಸರ್ಕಾರ ಬಜೆಟ್ ಕೊರತೆ ಎಂದು ಹೇಳುತ್ತಿರುವಾಗ ಸಚಿವರು ತಮ್ಮ ಕಚೇರಿ ಮತ್ತು ಮನೆ ನವೀಕರಣ ಮಾಡಿಕೊಳ್ಳಲು ಒಬ್ಬಬ್ಬರು 50 ಲಕ್ಷ ರೂಪಾಯಿಗಳು ದುಂದು ವೆಚ್ಚಕ್ಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಒಂದೆಡೆ ಆದರೆ ಪ್ರತಿ ಗಂಡು ಮಕ್ಕಳ ಕಿಟ್ ಗೆ 130 ರೂಗಳು ಹಾಗೂ ಹೆಣ್ಣು ಮಕ್ಕಳು ಕಿಟ್ ಗೆ 140 ರೂ ಮೌಲ್ಯದ ಪರಿಕರಗಳ ಒಳಗೊಂಡ ಕಿಟ್ ಗಳನ್ನು ಪ್ರತಿ ತಿಂಗಳು ನೀಡಬೇಕು ಕಳೆದ ವರ್ಷ ಎರಡು ಮೂರು ತಿಂಗಳು ಹಾಗೂ ಈ ವರ್ಷದ ನಾಲ್ಕೈದು ತಿಂಗಳು ವಿತರಣೆ ಮಾಡಿಲ್ಲ ಆ ತಿಂಗಳು ನೀಡಬೇಕಾದ ಕಿಟ್ ಹಣ ಎಲ್ಲಿ? ಯಾರ ಜೇಬು ಸೇರಿತ್ತು? ಈ ಭಾರಿ ಭ್ರಷ್ಟಾಚಾರ ವಾಸನೆ ಕಂಡುಬರುತ್ತಿದ್ದು ಕೂಡಲೇ ರಾಜ್ಯ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಉಪಾಧ್ಯಕ್ಷ ಸುಲೇಮಾನ್ ಮತ್ತಿಹಳ್ಳಿ, ಶೃತಿ ಆರ್ ಎಮ್, ಮುತ್ತುರಾಜ್ ದೊಡ್ಡಮನಿ, ಸಹ ಕಾರ್ಯದರ್ಶಿ ವಿಜಯ ಶಿರಹಟ್ಟಿ, ಮಹೇಶ್ ಮರೋಳ, ಕೃಷ್ಣಾ ನಾಯಕ್, ಮುಖಂಡರಾದ ಅಣ್ಣಪ್ಪ ಕೊರವರ್, ನಿಖಿತಾ ಕಂಬಳಿ, ಫಾತಿಮಾ ಶೇಖ್, ದಾನೇಶ್ವರಿ, ಲಲಿತಾ ಬಿ ಸಿ, ರಕ್ಷಿತಾ ಡವಗಿ ಅನೇಕರು ಪಾಲ್ಗೊಂಡಿದ್ದರು.
ಇದನ್ನು ನೋಡಿ : ಸೌಹಾರ್ದ ಕೆಡಿಸುತ್ತಿರುವುದೇ ಸರ್ಕಾರಗಳು: ಕವಿ ಮೂಡ್ನಾಕೂಡು ಚಿನ್ನಸ್ವಾಮಿJanashakthi Media