ಮೈಸೂರು: ನಾಡಹಬ್ಬ ದಸರಾಗೆ ಚಾಲನೆ ದೊರೆತಿದ್ದು, ನಾಡೋಜ ಹಂಪ ನಾಗರಾಜಯ್ಯ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಉದ್ಘಾಟನೆ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿ, ಸಿದ್ದರಾಮಯ್ಯರನ್ನು “ಬಹುಭಾಗ್ಯಗಳ ಬ್ರಹ್ಮ” ಎಂದು ಕರೆದಿದ್ದಾರೆ.
ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎದೆಗುಂದದೆ ಗಟ್ಟಿಯಾಗಿ ನಿಂತಿದ್ದಾರೆ. ಅವರನ್ನು ನೋಡಿದರೆ ಗರಡಿ ಮನೆಯಲ್ಲಿ ಸಾಮು ಮಾಡಿರಬೇಕು ಎನಿಸುತ್ತದೆ ಎಂದು ಹಂಪನಾ ಹೇಳಿದರು.
ಸಿಎಂ ಹಾಗೂ ಡಿಸಿಎಂ ಧೈರ್ಯಕ್ಕೆ ನಿಜವಾಗಲೂ ಮೆಚ್ಚಬೇಕು ಎಂದ ನಾಗರಾಜಯ್ಯ ಜೀವನವೇ ಒಂದು ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ಗಟ್ಟಿಯಾಗಿ ನಿಲ್ಲಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಆದರೆ ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಸಿಎಂ, ಡಿಸಿಎಂಗೆ ಹಂಪಾ ನಾಗರಾಜಯ್ಯ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಚಾಲನೆ; ಅಕ್ಟೋಬರ್ 23 ರಿಂದ 25 ರವರೆಗೆ ಆಚರಣೆ
ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು. ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆ ಆಗಬೇಕು. ಲೋಕಾಂಬಿಕೆಯೂ ಅಂತಹ ಚಿಂತನೆ ಮೂಡಿಸಲಿ. ಕೆಡವುವುದು ಸುಲಭ, ಕಟ್ಟುವುದು ಕಷ್ಟಮೊದಲೇ ದೊಡ್ಡ ಹೊರೆಗಳಿಂದ ಶ್ರೀಸಾಮಾನ್ಯರು ಬಳಲಿ ಬಸವಳಿದಿದ್ದಾರೆ. ಪುನಃ ನಡೆಯುವ ಚುನಾವಣೆಗಳು ದೊಡ್ಡ ಹೊರೆಯಾಗಲಿವೆ.ಜನರಿಗೆ ಇನ್ನಷ್ಟು ಭಾರ ಹೇರಿದರೆ ಕುಸಿದುಬಿಡುತ್ತಾನೆ ಎಂದು ತಿಳಿಸಿದ್ರು.
ಯಾವ ಪಕ್ಷವೂ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬಹುದು. ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷ ಸಜ್ಜಾಗಬಹುದು ಎಂಬ ಎಚ್ಚರಿಕೆ ನೀಡಿದ್ರು.
ದಿನನಿತ್ಯ ಪತ್ರಿಕೆಗಳಲ್ಲಿ ಪರಸ್ಪರ ದೋಷಾರೋಪಣೆವೈಯುಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಆಗುತ್ತಿದೆ.ಆ ಪತ್ರಿಕೆಗಳನ್ನು ಓದಿ, ಯುವಕರು ಇದನ್ನೇ ಮಾದರಿಯಾಗಿ ಮುಂದುವರಿಸಿದರೆ ಏನುಗತಿ ? ಈ ಬೆಳವಣಿಗೆಗಳಿಂದ ಜನರು ಬೇಸರಗೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಯಿ ಚಾಮುಂಡೇಶ್ವರಿ ದೇವಿ, ಇನ್ನು ಮುಂದೆ ಈ ಪದ್ಧತಿ ನಿಲ್ಲುವಂತೆ ಮಾಡಲಿ. ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣವಾಗಲಿ ಎಂದು ಆಶಿಸಿದರು. ನಾಡು ಕಟ್ಟುವ ಯೋಜನೆ, ಯೋಚನೆಗಳನ್ನು ನಿರೂಪಿಸುವಂತೆ ಸ್ಪೂರ್ತಿ ಕೊಡಲಿ ಎಂದು ಮನವಿ ಮಾಡಿದರು.
ಇದನ್ನೂ ನೋಡಿ: ನಾಟಕ | ಪಾಪು ಗಾಂಧಿ ‘ಗಾಂಧಿ ಬಾಪು’ ಆದ ಕಥೆ Janashakthi Media